Back to Top
Previous ಲಿಂಗಾಯತ ಯಾರು? Who is Lingayat ಡಾ|| ಫ.ಗು.ಹಳಕಟ್ಟಿ Next

ಪೂಜ್ಯ ಶ್ರೀ ಡಾ|| ಮಹಾಜಗದ್ಗುರು ಮಾತೆ ಮಹಾದೇವಿ

*
Her Holiness Dr. Mate Mahadevi, ಪೂಜ್ಯ ಶ್ರೀ ಡಾ|| ಮಹಾಜಗದ್ಗುರು ಮಾತೆ ಮಹಾದೇವಿ

ಪೂಜ್ಯ ಶ್ರೀ ಮಾತಾಜಿಯವರು ಚಿನ್ಮೂಲಾದ್ರಿಯ ಚಿತ್ಕಳೆಯಾಗಿ ೧೯೪೬ರಲ್ಲಿ ಜನಿಸಿ, ವಿಜ್ಞಾನ-ತತ್ವಜ್ಞಾನ ಸ್ನಾತಕೋತ್ತರ ಪದವಿಧರೆಯಾಗಿ ೧೯೬೬ರಲ್ಲಿ ಪೂಜ್ಯ ಶ್ರೀ ಸದ್ಗುರು ಲಿಂಗಾನಂದ ಸ್ವಾಮಿಗಳವರಿಂದ ಜಂಗಮ ದೀಕ್ಷೆ ಪಡೆದು, ಮಾತೆ ಮಹಾದೇವಿ ಎಂಬ ಅಭಿಧಾನ ತಾಳಿ, ೧೯೭೦ರಲ್ಲಿ ವಿಶ್ವವಿನೂತನ ಸ್ತ್ರೀ ಜಗದ್ಗುರು ಪೀಠವನ್ನಲಂಕರಿಸಿ, ಭಕ್ತಿ-ಜ್ಞಾನ-ವಿರಕ್ತಿಗಳ ದಿವ್ಯ ಸಂಗಮವಾಗಿ ಶೋಭಿಸುತ್ತಿರುವರು.

ಕಿರಿದಾದ ವಯಸ್ಸಿನಲ್ಲಿಯೇ ಹಿರಿದಾದ ಜ್ಞಾನಗಳಿಸಿ, ಜಗದ ಜಾಗೃತಿಗಾಗಿ ಆ ಜ್ಞಾನಸುಧೆಯನ್ನು ಪ್ರವಚನ, ಗ್ರಂಥಗಳ ಮೂಲಕ ಜನತೆಗೆ ಧಾರೆಯೆರೆಯುತ್ತಲಿರುವ ಪೂಜ್ಯ ಶ್ರೀ ಮಾತೆಯವರ ಮೊದಲ ಕಾದಂಬರಿ ಬಹುಮಾನ ವಿಜೇತ "ಹೆಪ್ಪಿಟ್ಟ ಹಾಲು", ಅಕ್ಕಮಹಾದೇವಿಯ ಜೀವನವನ್ನು ಕುರಿತಾದ "ತರಂಗಿಣಿ" ಮಾತೆಯವರ ಹಸ್ತದಲ್ಲಿ ರೂಪುಗೊಂಡ ದ್ವಿತೀಯ ಕಾದಂಬರಿ.

ಬಸವ ಧರ್ಮದ ಪರಮೋಚ್ಛ ಪೀಠವನ್ನೇರಿದ ಪ್ರಥಮ ಜಗದ್ಗುರುಗಳಾದ ಪೂಜ್ಯ ಶ್ರೀಮನ್ ನಿರಂಜನ ಮಹಾ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳು ದಿ. ೩೦-೬-೧೯೯೫ರಂದು ಲಿಂಗೈಕ್ಯರಾದ ಮೇಲೆ ಪೂಜ್ಯ ಶ್ರೀ ಮಾತಾಜಿಯವರೇ ದ್ವಿತೀಯ ಪೀಠಾಧಿಕಾರಿಗಳಾಗಿದ್ದಾರೆ. ೧೯೮೮ರಲ್ಲಿ ಆರಂಭಿಸಿ ಪ್ರತಿ ವರ್ಷ ಜನವರಿ ೧೧ ರಿಂದ ೧೫ ರವರೆಗೆ ಶರಣ ಮೇಳವನ್ನು ನಡೆಸಿಕೊಂಡು ಬರುತ್ತಿರುವುದು ಪೂಜ್ಯ ಶ್ರೀ ಮಾತಾಜಿಯವರ ಅಗ್ಗಳಿಕೆ. ಮಾತಾಜಿ, ಬಸವಾತ್ಮಜೆ ಇವರ ಕಾವ್ಯನಾಮ. ಸಚ್ಚಿದಾನಂದ ಇವರ ವಚನ ಮುದ್ರಿಕೆ.

ನಿರ್ಭೀತ ನಿಲುವು ತತ್ವ ನಿಷ್ಠೆ, ಸತ್ಯಪ್ರಿಯತೆ, ಸಮಾಜೋದ್ಧಾರದ ಕಳಕಳಿ, ಇವುಗಳಿಂದ ವೈಶಿಷ್ಟಪೂರ್ಣರಾಗಿರುವ ಮಾತೆಯವರು ತಮ್ಮ ಅಮೋಘವಾಣಿಯಿಂದ ಜನರನ್ನು ಆಕರ್ಷಿಸಿ, ಮುದಗೊಳಿಸಿ, ಚೇತನಿಸುತ್ತಾರೆ. ದೈವೀದತ್ತ ಪ್ರತಿಭೆ, ಅಸಾಮಾನ್ಯ ಪಾಂಡಿತ್ಯ, ದಿವ್ಯ ಮಧುರವಾಣಿ, ಪ್ರಶಾಂತ ಚಿತ್ತಗಳ ಸಂಗಮವಾದ ಶ್ರೀ ಮಾತೆಯವರು ವಿಶ್ವಧರ್ಮದ ಮಣಿಹ ಹೊತ್ತು ಸ್ವದೇಶ-ವಿದೇಶಗಳಲ್ಲೂ ಸಂಚರಿಸಿ, ಭಾರತದ ಅಧ್ಯಾತ್ಮಿಕ ಸಂದೇಶವನ್ನು ಯಶಸ್ವಿಯಾಗಿ ಸಾರಿದ್ದಾರೆ.

೨೦೦೨ರಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯಪೀಠವನ್ನು ಸ್ಥಾಪಿಸಿ 12ನೇ ಶತಮಾನದ ಶೂನ್ಯಪೀಠ ಪರಂಪರೆಯನ್ನು ಮು೦ದುವರೆಸಿಕೊ೦ಡು ಬರುತ್ತಿದ್ದಾರೆ; ಮಾತ್ರವಲ್ಲ ಬಸವ ಕಲ್ಯಾಣದಲ್ಲಿ 108 ಅಡಿ ವಿಶ್ವಗುರು ಬಸವಣ್ಣನವರ ಮೂತಿ೯ಯನ್ನು ಸಹ ಸ್ಥಾಪಿಸಿದ್ದಾರೆ. ೨೦೦೭ರಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಳತ್ ಗ್ರಾಮದಲ್ಲಿರುವ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠವನ್ನು ಸ್ಥಾಪಿಸಿದ್ದಾರೆ. ೨೦೦೬ರಲ್ಲಿ ರಾಷ್ಟ್ರದ ರಾಜಧಾನಿ ನವ ದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆಯನ್ನು ತೆರೆದು ಬಸವ ಮಂಟಪವನ್ನು ಸ್ಥಾಪಿಸಿದ್ಧಾರೆ. ಲಿಂಗಾಯತ ಧರ್ಮದ ಪುನರುತ್ಥಾನಗೈಯುತ್ತ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹೋರಾಡಿದ್ದಾರೆ.

ಶರಣರ ಹೆಸರಿನಲ್ಲಿ ಪೀಠ.

ಮಾತಾಜಿ ತಮ್ಮ 55 ವರ್ಷದ ಸನ್ಯಾಸತ್ವದ ಬದುಕಿನಲ್ಲಿ. 6 ಪೀಠಗಳನ್ನು ಸ್ಥಾಪಿಸಿ. ಅದರ ಮೂಲಕ ಶರಣ ತತ್ವಗಳು ಬಿತ್ತರಿಸುವ ಕಾರ್ಯವನ್ನು. ನಿರಂತರವಾಗಿ ಮಾಡಿದ್ದಾರೆ.
ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠ.
ಧಾರವಾಡದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠ.
ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯ ಪೀಠ.
ಮಹಾರಾಷ್ಟ್ರದ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠ.
ಬೆಂಗಳೂರಿನ ಬಸವ ಗಂಗೋತ್ರಿ ಕುಂಬಳ ಗೋಡಿನಲ್ಲಿ ಚಿನ್ಮಯಜ್ಞಾನಿ ಚನ್ನಬಸವೇಶ್ವರ ಜ್ಞಾನಪೀಠ
ಕಾರವಾರ ಜಿಲ್ಲೆಯ ಉಳವಿಯಲ್ಲಿ ಅಕ್ಕನಾಗಲಾಂಬಿಕೆ ಪೀಠ.
ಸ್ಥಾಪಿಸಿದ್ದಾರೆ.

ಇಂತಹ ಪೂಜ್ಯ ಶ್ರೀ ಮಾತಾಜಿಯವರು ದಿನಾಂಕ ೧೪ನೇ ಮಾರ್ಚ೨೦೧೯ ರಂದು ಲಿಂಗೈಕ್ಯರಾಗಿ ಕ್ರಿಯಾವಿಶ್ರಾಂತಿಯನೈದಿದರು.

*

ಆಧ್ಯಾತ್ಮ ಸಾಗರದ ಅನರ್ಘ್ಯ ರತ್ನ ಪರಮ ಪೂಜ್ಯ ಡಾ|| ಮಾತೆ ಮಹಾದೇವಿಯವರ (ಬಸವಾತ್ಮಜೆಯವರ )ಬದುಕಿನ ಒಂದು ನೊಟ

👉 ಕಾಯಕ : ವಿಶ್ವದ ಪ್ರಥಮ ಮಹಿಳಾ ಜಗದ್ಗುರುಗಳು (ಜಂಗಮರು)
👉 ದಿಕ್ಷಾ ಗುರು : ಪರಮ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು
👉 ಅಂಕಿತ ನಾಮ : ಸಚ್ಚಿದಾನಂದ
👉 ಜನನ : 13 ಮಾರ್ಚ 1946
👉 ಲಿಂಗೈಕ್ಯ : 14 ಮಾರ್ಚ 2019
👉 ಊರು : ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿ
👉 ಜನ್ಮ ನಾಮ : ರತ್ನ
👉 ತಂದೆ : ಡಾ ಬಸಪ್ಪನವರು
👉 ತಾಯಿ : ಗಂಗಮ್ಮನವರು
👉 ಜಂಗಮ ದೀಕ್ಷೆ ಪಡೆದದ್ದು : 5 ನೇ ಏಪ್ರಿಲ್ 1966

👉 ಪರಮ ಪೂಜ್ಯ ಮಾತಾಜಿಯವರು ಬಾಲ್ಯದಿಂದಲೂ ಆಧ್ಯಾತ್ಮದ ಕಡೆ ತುಂಬಾ ಒಲವನ್ನ ಇಟ್ಟುಕೊಂಡಿದ್ದವರು, ಬಾಲ್ಯದಲ್ಲಿಯೇ ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳನ್ನ ಓದಿ ಮುಗಿಸಿದ ಮಹಾನ ಚೇತನ, ಅವರ ಪೂರ್ವಾಶ್ರಮದ ಹೆಸರೆ ಹೇಳುವಂತೆ ಅವರು ಬಸವ ಧರ್ಮಕ್ಕೆ ಸಿಕ್ಕ "ಅನರ್ಘ್ಯ ರತ್ನ"ವೆ ಸರಿ, ಕಿರಿದಾದ ವಯಸ್ಸಿನಲ್ಲಿಯೆ ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಾಯುತಿದ್ದಾಗ ಅವರಿಗೆ ಸಿಕ್ಕಿದ್ದು ಪರಮ ಪೂಜ್ಯ ವಚನ ಪರುಷ "ಲಿಂಗಾನಂದ ಮಹಾ ಸ್ವಾಮಿಗಳು" ಲಿಂಗಾನಂದ ಮಹಾಸ್ವಾಮಿಗಳ ಪ್ರವಚನದಿಂದ ಪ್ರಭಾವಿತರಾದ ರತ್ನ(ಮಾತಾಜಿಯವರು) ತಮ್ಮನ್ನು ತಾವು ಧರ್ಮಕ್ಕೆ ಅರ್ಪಿಸಿಕೊಳ್ಳುವ ಉದ್ದೇಶದಿಂದ 19 ಆಗಸ್ಟ್ 1965ರಂದು ತನ್ನತನವನ್ನು ಬಿಟ್ಟು ಧರ್ಮ ಪ್ರಚಾರಕ್ಕೆ ಮುಂದಿನ ಜೀವನವನ್ನು ಅರ್ಪಿಸುತ್ತಾರೆ, 21 ಅಗಸ್ಟ 1965ರಂದ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಂದ ಇಷ್ಟಲಿಂಗ ದಿಕ್ಷೆಯನ್ನು ಪಡೆದು ಕೊಳ್ಳುತ್ತಾರೆ ,ಆದರೆ ಅವರ ಮನಸ್ಸಿಗೆ ಸಮಾಧಾನವಿರುವುದಿಲ್ಲಾ ತಮ್ಮನ್ನು ತಾವು ತ್ಯಾಗ ಜೀವನಕ್ಕೆ ಅರ್ಪಿಸಿ ಕೊಂಡು ಬಸವಾದಿ ಶರಣರ ತತ್ವಗಳನ್ನ ಜಗತ್ತಿಗೆ ಬಿತ್ತಿ ಬೆಳೆಸುವ ಉದ್ದೇಶದಿಂದ 5-4-1966 ರಂದು ರತ್ನ ಅನರ್ಘ್ಯ ರತ್ನವಾಗಿ ಲಿಂಗಾಯತರ ಆಶಾಕಿರಣವಾಗಿ ತಮ್ಮ ಇಚ್ಛೆಯಂತೆ ಜಂಗಮ ದಿಕ್ಷೆ ಪಡೆದುಕೊಳ್ಳುತ್ತಾರೆ ,ಅಲ್ಲಿಂದ ನೇರವಾಗಿ ಋಷಿಕೇಶಕ್ಕೆ ಬಂದ ಪರಮ ಪೂಜ್ಯ ಮಾತಾಜಿಯವರು "ಗಂಗಾತರಂಗ" ಪುಸ್ತಕ ರಚನೆ ಮಾಡುತ್ತಾರೆ.

👉 ಬೃಹತ್ ಗ್ರಂಥವಾದ "ಬಸವ ತತ್ವ ದರ್ಶನ" ಕೇವಲ 3 ತಿಂಗಳಲ್ಲಿ (1967. ಮೇ - ಜುಲೈ) ರಚಿಸಿ ಅಪ್ಪಾಜೀಯವರಿಗೆ ಮತ್ತು ಬಸವ ಭಕ್ತರಿಗೆ ಅರ್ಪಣೆ.
👉 ಧರ್ಮ ಪ್ರಚಾರಕ್ಕೆ ಅನುಕೂಲವಾಗಲೆಂದು 1968 ಎಪ್ರಿಲ್ 13 ರಂದು ವೀರ ವೈರಾಗ್ಯ ನಿಧಿ ಅಕ್ಕಮಹಾದೇವಿ ತಾಯಿಯವರ ಜಯಂತಿಯಂದು ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪನೆ.
👉 14-1-1970 ಲಿಂಗಾಂಗ ಯೊಗಿ ಸಿದ್ದರಾಮೆಶ್ವರ ಜಯಂತಿಯಂದು ಬಸವ ಧರ್ಮಿಯರಿಗಾಗಿ ,ಬಸವ ತತ್ವ ಪ್ರಚಾರಕ್ಕೆ ಅನುಕೂಲವಾಗಲೆಂದು ಕಲ್ಯಾಣ ಕಿರಣ ಮಾಸ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆ.
👉 21- 4-1970 ಗುರು ಬಸವಣ್ಣನವರ ಆಶಿರ್ವಾದದಿಂದ ,ಪರಮ ಪೂಜ್ಯ ಲಿಂಗಾನಂದ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ ಐತಿಹಾಸಿಕ ಅಕ್ಕ ಮಹಾದೇವಿ ಅನುಭವ ಪೀಠವೆಂಬ ವಿಶ್ವದ ಮೊಟ್ಟಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಅದರ ಪ್ರಥಮ ಪಿಠಾಧ್ಯಕರಾಗಿ ಮಾತಾಜಿಯವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.
👉 9-12- 1973 ಸಾಮಾಜಿಕ ಕಾದಂಬರಿ #ಹೆಪ್ಪಿಟ್ಟ_ಹಾಲು ಪುಸ್ತಕ ಬಿಡುಗಡೆ, ಈ ಕೃತಿಗೆ ರಾಜ್ಯ ಸಾಹಿತ್ಯ ಆಕಾಡೆಮಿ ಪುರಸ್ಕಾರ ನೀಡಿ ಗೌರವಿಸಿತು ಕಿರಿಯ ವಯಸ್ಸಿನಲ್ಲಿಯೆ ಹಿರಿದಾದ ಸಾಧನ ಮಾಡಿದ ಕೀರ್ತಿ ಮಾತಾಜಿಯವರದು.
👉 4-5-1975 ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ,ಬಸವ ಜಯಂತಿಯಂದು ಉದ್ಘಾಟನೆ.
👉 1976 ಬಸವ ಧರ್ಮ ಪ್ರಚಾರಕ್ಕೆ ಇಂಗ್ಲೆಂಡ್ ಪ್ರವಾಸ.
👉 1977 ವಿಶ್ವ ಕಲ್ಯಾಣ ಮಿಷನ್(ಟ್ರಸ್ಟ್ )ಸ್ಥಾಪನೆ.
👉 1978 ಬೆಂಗಳೂರಿನ ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ.
👉 1980 ಬಸವ ಧರ್ಮ ಪ್ರಚಾರಕ್ಕೆ ಅಮೆರಿಕ ಪ್ರವಾಸ.
👉 1983 ಗುರು ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ ಕ್ರಾಂತಿ ಯೋಗಿ ಬಸವಣ್ಣ ಚಲನಚಿತ್ರ ನಿರ್ಮಾಣ.
👉 1988, ಕೂಡಲಸಂಗಮ ಧರ್ಮ ಕ್ಷೇತ್ರವೆಂದು ಘೊಷಣೆ.
👉 1988 ಜ,13,14,15 ರಂದು ಕೂಡಲಸಂಗಮದಲ್ಲಿ ಐತಿಹಾಸಿಕ ಮೊದಲನೆಯ ಶರಣ ಮೇಳ ಸುಮಾರು 2 ಲಕ್ಷಕ್ಕು ಅಧಿಕ ಜನರನ್ನು ಆಕರ್ಷಿಸಿತು
👉 1988 ಜನವರಿ 13 ರಂದು ರಾಷ್ಟ್ರೀಯ ಬಸವ ದಳ ಸಂಘಟನೆಯ ಸ್ಥಾಪನೆ.
👉 1992 ಜನವರಿ 13 ರಂದು ಬಸವಣ್ಣನವರ ತಪೊ ಭೂಮಿ ಕೂಡಲಸಂಗಮದಲ್ಲಿ ಬಸವ ಧರ್ಮದ ಪರಮೊಚ್ಛ ಪೀಠ ಸ್ಥಾಪಿಸಿ ಬಸವ ಧರ್ಮದ ಮಹಾಜದ್ಗುರು ಪೀಠದ ಪ್ರಥಮ ಪೀಠಾಧ್ಯಕ್ಷರಾಗಿ ಪ್ರವಚನ ಪಿತಾಮಹ ಲಿಂಗಾನಂದ ಮಹಾಸ್ವಾಮಿಜಿಯವರಿಂದ ಪೀಠಾರೊಹಣ.
👉 1992 ಹೊರ ರಾಜ್ಯದಲ್ಲಿರುವ ಬಸವ ಧರ್ಮಿಯರಿಗಾಗಿ ಯಸಸ್ವಿ ಪ್ರಥಮ ಬಸವ ಧರ್ಮ ಸಮ್ಮೇಳನ ತಮಿಳುನಾಡಿನ ಊಟಿಯಲ್ಲಿ.
👉 1994 ರಲ್ಲಿ ದ್ವಿತೀಯ ಬಸವಧರ್ಮ ಸಮ್ಮೆಳನ ನೆರೆಯ ರಾಜ್ಯದ ಹೈದರಾಬಾದಿನಲ್ಲಿ.
👉 1995 ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತೃತೀಯ ಬಸವ ಧರ್ಮ ಸಮ್ಮೇಳನ.
👉 20-61995 ಪ್ರವಚನ ಪರುಷ ಪರಮ ಪೂಜ್ಯ ಲಿಂಗಾನಂದ ಅಪ್ಪಾಜಿಯವರು ಲಿಂಗೈಕ್ಯರಾದ ನಂತರ, 13-1-1996 ಮಹಾಜಗದ್ಗುರು ಪೀಠದ 2ನೇಯ ಜಗದ್ಗುರುವಾಗಿ ಪೀಠಾರೊಹಣ.
👉 14-1-1996 ಧರ್ಮ ಕ್ಷೇತ್ರ ಕೂಡಲಸಂಗಮದ ಮಹಾಮನೇ ಮಠದಲ್ಲಿ ಗಣಲಿಂಗ ಸ್ಥಾಪನೆ.
👉 14-4-1996 ಜಗನ್ಮಾತಾ ಅಕ್ಕಮಹಾದೇವಿ ಮಹಿಳಾ ಜಗದ್ಗುರು ಪೀಠಕ್ಕೆ 2ನೇಯ ಮಹಿಳಾ ಜಗದ್ಗುರುವಾಗಿ ಗಂಗಾಮಾತಾಜಿಯವರನ್ನ ಪೀಠಾರೊಹಣ ಮಾಡಿಸಿದ್ದು.
👉 1996 ರಲ್ಲಿ ಧಾರವಾಡದಲ್ಲಿ ನಾಲ್ಕನೆಯ ಬಸವ ಧರ್ಮ ಸಮ್ಮೇಳನ.
👉 3-11-1996ರಂದು ಭಾರತದ ರಾಜಧಾನಿಯಾದ ನವದೆಹಲಿಯಲ್ಲಿ ಬಸವೇಶ್ವರ ದಿವ್ಯಜ್ಞಾನ ವಿದ್ಯಾಲಯ ಸ್ಥಾಪನೆ.
👉 1997 ರಲ್ಲಿ ಯಶಸ್ವಿ 5ನೇಯ ಬಸವ ಧರ್ಮ ಸಮ್ಮೇಳನ ಭಾರತದ ರಾಜಧಾನಿ ನವದೆಹಲಿಯಲ್ಲಿ.
👉 8-8-1997 ರಂದು ಬಸವಣ್ಣನವರ ಭಾವಚಿತ್ರದ ಅಂಚೆಚಿಟಿ ಬಿಡುಗಡೆಗೆ ಕೆಂದ್ರ ಸರಕಾರಕ್ಕೆ ಮನವಿ ಮತ್ತು ಯಶಸ್ವಿ.
👉 1998ರಲ್ಲಿ 6ನೇ ಯಶಸ್ವಿ ಬಸವ ಧರ್ಮ ಸಮ್ಮೇಳನ ನೇರೆ ರಾಜ್ಯ ಮಹಾರಾಷ್ಟ್ರದ ಮುಂಬೈನಲ್ಲಿ.
👉 2001ರಲ್ಲಿ ಬಸವಣ್ಣವರ ಕಾರ್ಯ ಕ್ಷೇತ್ರ,ಶರಣರಾಡಿದ ನಾಡು, ಶರಣ ಭೂಮಿ ಬಸವ ಕಲ್ಯಾಣದಲ್ಲಿ ಶರಣ ಗ್ರಾಮ ನಿರ್ಮಾಣಕ್ಕೆ ಪಣ ತೊಟ್ಟು ಜಾಗ ಖರೀದಿ.
👉 30-4-2002ರಲ್ಲಿ ಗುರ ಬಸವಣ್ಣನವರ ಕನಸಿನ ಕೂಸಾದ ಕಲ್ಯಾಣ ಪರ್ವ(ಗಣ ಪರ್ವ) ಪುನರ್ ಆರಂಭ ಮತ್ತು ಐತಿಹಾಸಿಕ ಅಲ್ಲಮಪ್ರಭು ಪೀಠ ಪುನರ್ ಸ್ಥಾಪನೆ.
👉 2004ರಲ್ಲಿ ಜಗತ್ತಿಗೆ ಬಸವ ತತ್ವ ಬಿತ್ತುವ ಉದ್ದೇಶದಿಂದ ದ್ವಿತಯ ಬಾರಿ ಅಮೆರಿಕಕ್ಕೆ ಮಾತಾಜಿ
👉 1-9-2004 ರಲ್ಲಿ ಗುರು ಬಸವಣ್ಣನವರ 108 ಅಡಿ ಪುತ್ಥಳಿ ನಿರ್ಮಾಣಕ್ಕೆ ಚಾಲನೆ.
👉 2005 ರಲ್ಲಿ ಭಾರತದ ರಜಧಾನಿಯಲ್ಲಿ ಐತಿಹಾಸಿಕ ಮತ್ತು ಯಸಸ್ವಿ ಬಸವ ಧರ್ಮ ಸಮ್ಮೇಳನ.
👉 2006 ರಲ್ಲಿ ಮಹಾರಾಷ್ಟ್ರದ ಅಲ್ಲಮಗಿರಿಯಲ್ಲಿ ಮೊದಲನೆಯ ಗಣಮೇಳಾ ಪ್ರಾರಂಭ.
👉 24-12-2006 ರಂದು ಭಾರತದ ರಾಜಧಾನಿ ನವದೆಹಲಿಯಾ ಬೆಂಗಾಲಿ ಕಾಲೊನಿಯಲ್ಲಿ ಬಸವ ಮಂಟಪ ಉದ್ಘಾಟನೆ.
👉 2008ರ ಏಪ್ರಿಲ್ ನಲ್ಲಿ ಚನೈನಲ್ಲಿ ಲಿಂಗಾಯತ ಧರ್ಮ ಸಮ್ಮೇಳನ.
👉 2011ರಲ್ಲಿ ಪುಣೆಯಲ್ಲಿ ಬಸವ ಧರ್ಮ ಸಮ್ಮೇಳನ.
👉 2011ರಲ್ಲಿ ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಕಲ್ಯಾಣಮ್ಮಾ ಧಾಮ ನಿರ್ಮಾಣ ಮತ್ತು ಬಸವ ಕೃಪಾ ಅನಾಥಾಲಯ ನಿರ್ಮಾಣ.
👉 2012ರಲ್ಲಿ ವಿಶ್ವದ ಅತಿ ಎತ್ತರದ (ಅಂದಿಗೆ) (108 ಅಡಿ) ಗುರು ಬಸವಣ್ಣನವರ ಪುತ್ಥಳಿ ಲೊಕಾರ್ಪಣೆ.
👉 2013ರಲ್ಲಿ ಗೌರವ ಡಾಕ್ಟರೇಟ್ ಪಡೆದುಕೊಂಡರು.
👉 2014 ರಲ್ಲಿ ಕೂಡಲ ಸಂಗಮದಲ್ಲಿ ಬಡ ಅನಾಥ ಮಕ್ಕಳಿಗಾಗಿ ಬಸವ ಭಾರತಿ ಪ್ರಾಥಮಿಕ ಶಾಲೆ ಸ್ಥಾಪನೆ.
👉🏻 2017ರಲ್ಲಿ ಬೀದರ್ ನಲ್ಲಿ ನಡೆದ ಐತಿಹಾಸಿಕ ಲಿಂಗಾಯತ ಸ್ವತಂತ್ರ ಧರ್ಮ ಹೊರಾಟದ ರೂವಾರಿಗಳು.
👉 ತನ್ನ 73 ವರ್ಷದ ಜೀವನದಲ್ಲಿ 150ಕ್ಕೂ ಅಧಿಕ ಧಾರ್ಮಿಕ ಮತ್ತು ಸಾಮಾಜಿಕ ಪುಸ್ತಕಗಳನ್ನ ಬರೆದಿದ್ದಾರೆ, 350ಕ್ಕೂ ಅಧಿಕ ಭಕ್ತಿ ಗೀತೆಗಳನ್ನ ಬರೆದಿದ್ದಾರೆಂಬುದು ಹೆಮ್ಮೆಯ ವಿಷಯ.

ಮಾತಾಜಿಯವರ ಚಿತ್ರಪಟ (ಫೊಟೊ)
ಪರಿವಿಡಿ (index)
*
Previous ಲಿಂಗಾಯತ ಯಾರು? Who is Lingayat ಡಾ|| ಫ.ಗು.ಹಳಕಟ್ಟಿ Next