Previous ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು ಮಹಾರಾಷ್ಟ್ರದಲ್ಲಿ ಲಿಂಗಾಯತ ಧರ್ಮದ ವ್ಯಾಪ್ತಿ ವಿಸ್ತಾರ. Next

|| ಓಂ ಶ್ರೀ ಗುರು ಬಸವ ಲಿಂಗಾಯನಮಃ ||

ಕೂಡಲಸಂಗಮ ಸುಕ್ಷೆತ್ರದಲ್ಲಿ 37ನೇ ಶರಣಮೇಳ 2024

*

ಕೂಡಲಸಂಗಮ ಸುಕ್ಷೆತ್ರದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ 37ನೇ ಶರಣಮೇಳ 2024 ರ ಜನವರಿ 11, 12, 13, 14, ಮತ್ತು 15 ರಂದು


ಬಸವ ಪೀಠವು ಎದ್ದು | ಒಸೆದು ನಾಣ್ಯವ ಹುಟ್ಟಿ
ಬಸವನ ಮುದ್ರೆ ಮೆರೆದಾವು | ಧರೆಯವಗೆ
ವಶವಗದಿಹುದೆ ಸರ್ವಜ್ಞ ||

ಶರಣ ಬಂಧುಗಳೇ,
ಮಹಾಮಾನವತಾವಾದಿ, ಲಿಂಗಾಯತ ಧರ್ಮ ಸಂಸ್ಥಾಪಕ, ಧರ್ಮ ಗುರು ಬಸವಣ್ಣನವರ ಕಾರಣಿಕತ್ವ ಮತ್ತು ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು, ಬಸವ ಧರ್ಮಿಯರಾದ ಲಿಂಗಾಯತರು ಹಾಗೂ ಬಸವತತ್ವಾಭಿಮಾನಿಗಳೆಲ್ಲರು ವರ್ಷಕ್ಕೆ ಒಮ್ಮೆಯಾದರೂ ನಂಬಿಕೆ ಒಂದು ಸ್ಥಳದಲ್ಲಿ ಸಮವೇಷವಗುವುದು ಅತ್ಯಂತ ಅವಶ್ಯಕ. ಇದು ಸಮಾನತ್ವ ಮತ್ತು ಸಹೋದರತ್ವ ಬೆಳಸಲು ಸಹಕಾರಿಯಾಗುವುದು ಎಂಬ ಉದ್ದೇಶದಿಂದ ಅಡಿ ಶರಣರ ಸಂಕಲ್ಪದಂದೆ ಶರಣ ಮೇಳವನ್ನು ನಡೆಸಲಾಗುತ್ತಿದೆ, ಧರ್ಮಕರ್ತ ಬಸವಣ್ಣನವರ ವಿಧ್ಯಾಭೂಮಿ, ತಪೋಸ್ಥಾನ, ಐಕ್ಯ ಕ್ಷೇತ್ರ ಕೂಡಲ ಸಂಗಮದಲ್ಲಿ ಲಿಂಗಾಯತ (ಬಸವ) ಧರ್ಮಿಯರ ಧರ್ಮಕ್ಷೇತ್ರ ಎಂದು ಗುರುತಿಸಿಕೊಂಡ 1988 ರ ಜನವರಿ 14 15 ಮತ್ತು 16 ರಂದು ಪ್ರಥಮ ಚಾರಿತ್ರಿಕ ಶರಣಮೇಳವನ್ನು ನಡೆಸಲಾಯಿತು, ಮೊತ್ತ ಮೊದಲನೆಯ ಚಾರಿತ್ರಿಕ ಎರಡೂವರೆ ಲಕ್ಷಕ್ಕೂ ಮಿಕ್ಕಿದ ಜನ ಸಮೂಹವನ್ನ ಆಕರ್ಷಿಸಿತು.

ಇಂತಹ ಶರಣ ಮೇಳವು ಪ್ರತಿವರ್ಷ ಬಸವ ಧರ್ಮ ಸಂಸ್ಥಪಾನ ದಿನದ ಅಂಗವಾಗಿ ನಡೆಯುತ್ತಲಿದ್ದು 36ನೇ ಶರಣ ಮೇಳ 2023ರ ಜನವರಿ 11, 12, 13, 14, ಮತ್ತು 15 ರಂದು ನಡೆಯುವುದು ಸಾಮೂಹಿಕ ಪ್ರಾರ್ಥನೆ, ಸಾಮೂಹಿಕ ಇಷ್ಟ ಲಿಂಗ ಪೂಜೆ, ಗಣಲಿಂಗ ದರ್ಶನ ಶರಣ ಮೇಳದ ಪ್ರಮುಖ ದಾರ್ಮಿಕ ವಿಧಿಗಳು. ಜನವರಿ 14 ರಂದು ಬೆಳ್ಳಗೆ 10 ರಿಂದ ಧ್ವಜಾರೋಹಣ, ಪಥ ಸಂಚಲನ, ಸಮುದಾಯ ಪ್ರಾರ್ಥನೆ ಇರುತ್ತದೆ. ( ಐದು ದಿನ ಭಾಗವಹಿಸಲು ಆಗದೆ ಇದ್ದವರು ಸಮುದಾಯ ಪ್ರಾರ್ಥನೆಯಲ್ಲಿ ಭಾಗವಹಿಸುವದು ಕಡ್ದಾಯವಾಗಿರುತ್ತದೆ) ಸಂಜೆ ೭ ಗಂಟೆಗೆ ಸಾಮೂಹಿಕ ಇಷ್ಟಲಿಂಗಾರ್ಚನೆ ಇರುತ್ತದೆ. ಇವುಗಳಲ್ಲಿ ಶರಣ ವ್ರತಿಗಳು ಭಾಗವಹಿಸುವುದು ಕಡ್ದಾಯವಾಗಿರುತ್ತದೆ, 40, 30, 20, ಮತ್ತು 10 ಶರಣವ್ರತವನ್ನ ಅವರವರ ಸಮಯವಕಶಕ್ಕೆ ತಕ್ಕಂತೆ ಸ್ವೀಕರಿಸಿ, ಆಚರಿಸಿ ಯಾರು ಬೇಕಾದರೂ ಶರಣ ಮೇಳದಲ್ಲಿ ಭಾಗಿಗಳಾಗಬಹುದು. ಚಿಂತನ ಗೋಷ್ಠಿ ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳಿಂದ ಕೂಡಿದ ಶರಣ ಮೇಳವು ಉತ್ತಮ ಜ್ಞಾನ ದಾಸೋಹದೊಡನೆ, ಅನ್ನದಾಸೋಹವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ, ದಿ 11 ಮತ್ತು 12 ರಂದು ಧರ್ಮ ಚಿಂತನಗೋಷ್ಠಿ ನಡಿಯುತತಿದ್ದು ಸಮಾಜ- ಧರ್ಮಗಳಿಗೆ ಸಂಭಂದಿಸಿದಂತೆ ಮುಕ್ತ ಚರ್ಚೆಗೆ ಅವಕಾಶವಿರುತ್ತದೆ.

ಮುಸಲ್ಮಾನ್ ಧರ್ಮೀಯರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ದ ರಿಗೆ ಬುದ್ದಗಯೇ ಧರ್ಮಕ್ಷೆತ್ರಗಳಿರುವಂತೆ ಲಿಂಗಾಯತ ಧರ್ಮಾನುಯಾಯಿಗಳಿಗೆ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮವೇ ಧರ್ಮಕ್ಷೇತ್ರ. ತನ್ನ ಜೀವಮಾನದಲ್ಲಿ ಆಯುಷ್ಯ ಅರೋಗ್ಯ ಇರುವವರೆಗೆ ಎಷ್ಟು ಸಲ ಒಬ್ಬ ವ್ಯಕ್ತಿ ಶರಣ ಮೇಳದಲ್ಲಿ ಭಾಗಿಯಾಗುತ್ತಾನೋ ಅತ ನಿಜಕ್ಕೂ ಹೆಚ್ಚು ಪುಣ್ಯವಂತ. ಪ್ರತಿಯೊಬ್ಬ ಬಸವ ಧರ್ಮಾನುಯಾಯಿಯು ತನ್ನ ಜೀವಮಾನದಲ್ಲಿ ಎಷ್ಟೇ ಅನಾನುಕೂಲತೆ ಇದ್ದರೂ ಒಮ್ಮೆಯಾದರೂ ಶರಣ ಮೇಳದ (ಜನವರಿ ೧೪ ರಂದು ನಡೆಯುವ) ಸಮುದಾಯ ಪ್ರಾರ್ಥನೆಯಲ್ಲಿ ಭಾಗಿಯಾಗಿ ಗಣಲಿಂಗ ದರ್ಶನ ಪಡೆದು ತನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ವಿಕರಿಸದೇ ಇದ್ದರೆ ಅವನು ಅಪ್ರಾಮಾಣಿಕ ಲಿಂಗಾಯತನಾಗುವನು. ಇಂತಹ ಪವಿತ್ರ ಮೇಳಕ್ಕೆ ಸಹೋದರ ಭಾವನೆಯಿದಂದ ಎಲ್ಲಾ ಶರಣ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳಿರಿ.

ಶರಣರ ಬರುವೆಮಗೆ ಪ್ರಾಣ ಜೀವಾಳ

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಬಸವ ಧರ್ಮ ಪೀಠ,
ಕೂಡಲಸಂಗಮ ೫೮೭೧೧೫
ತಾ|| ಹುನಗುಂದ, ಜಿ|| ಬಾಗಲಕೋಟ, ಕರ್ನಾಟಕ,
ದೂರವಾಣಿ: 08351 268140, 268007, 268038

ಶರಣ ಮೇಳ ಸಮಿತಿ (ರೀ) ಬಸವಮಂಟಪ, 2035, 20 ನೇ ಮುಖ್ಯ ರಸ್ತೆ,
2 ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು 560010.
ದೂ: 080-22923736 / 23131476

Nearest Airport: Belgaavi (Belgaum), 188 km
Nearest Railway station: Almatti (Dam), 31 km
Road distances: Koodalasangama is well connected by road NH-13 (8 km from NH-13 Road)
Bangalore by NH-4 and NH-13: 450 km
Goa, by Belgaum-Bagalkote Road: 300 km
Solapur by NH-13: 196 km
Bijapur by NH-13: 92 km
Bagalkot by SH-133: 46 km
Hungund by NH-13 and SH-133: 21 km
Ilkal by NH-13 and SH-133: 33 km
Basavana Bagewadi: 30 km
*
Previous ಕರ್ನಾಟಕ ಸಂಗೀತ ಪಿತಾಮಹ: ಭಕ್ತಿಭಂಡಾರಿ ಬಸವೇಶ್ವರರು ಮಹಾರಾಷ್ಟ್ರದಲ್ಲಿ ಲಿಂಗಾಯತ ಧರ್ಮದ ವ್ಯಾಪ್ತಿ ವಿಸ್ತಾರ. Next