ಪ್ರಶ್ನೆ
|
ಉತ್ತರ
|
ಆಯತದಲ್ಲಿ ಪೂರ್ವಾಚಾರಿಯ ಕಂಡೆಇದು ಯಾರ ವಚನ
|
'ಅಲ್ಲಮಪ್ರಭು'
|
ಸುಖ ಒಂದು ಕೋಟಿ ಬಂದಲ್ಲಿ ಬಸವಣ್ಣನ ನೆನುವುದು ಇದು ಯಾರ ವಚನ?
|
ಮಡಿವಾಳ ಮಾಚಿದೇವ
|
ಶಿವ ಗುರುವೆಂದು ಬಲ್ಲಾತನೆ ಗುರು ಇದು ಯಾರ ವಚನ
|
'ಅಲ್ಲಮಪ್ರಭು'
|
ಸತಿಯ ಕಂಡು ವ್ರತಿಯಾದ ಬಸವಣ್ಣ ಇದು ಯಾರ ವಚನ
|
'ಅಲ್ಲಮಪ್ರಭು'
|
ಕರುಣಿಬಸವಾ, ಕಾಲಹರಬಸವಾ, ಕರ್ಮಹರಬಸವಾ,ನಿರ್ಮಳಬಸವಾ, ಇದು ಯಾರ ವಚನ'
|
ಸಿದ್ಧರಾಮೇಶ್ವರ'
|
ಬಸವನಮೂರ್ತಿಯೇ ಧ್ಯಾನಕ್ಕೆ ಮೂಲಇದು ಯಾರ ವಚನ
|
'ಸಿದ್ಧರಾಮೇಶ್ವರ'
|
ಗುರುವಿಂಗೆ ತನುವಿತ್ತು ಗುರುವಾದನಯ್ಯ ಬಸವ ಇದು ಯಾರ ವಚನ
|
'ಸಿದ್ಧರಾಮೇಶ್ವರ'
|
ಬ ಎಂಬಲ್ಲಿ ಬಳಿಸಂದೆನು ಸ ಎಂಬಲ್ಲಿ ಸಯವಾದೆನು ಇದು ಯಾರ ವಚನ
|
'ಮೋಳಿಗೆಯ ಮಾರಯ್ಯ'
|
ಬಸವನನಾಮ ಕಾಮಧೇನು ಕಾಣಿರೊ ಬಸವನ ನಾಮ ಕಲ್ಪವೃಕ್ಷ ಕಾಣಿರೊ
|
'ಷಣ್ಮುಖ ಶಿವಯೋಗಿ'
|
ಭಕ್ತರ ಭಾವದಲ್ಲಿ ಸುಳಿವ ಸುಳುಹು, ವಿರಕ್ತರ ಜ್ಞಾನದಲ್ಲಿ ಹೊಳೆವ ಕಳೆಯು ನೀನೆ ಅಯ್ಯಇದುಯಾರ ವಚನ
|
'ಆಯ್ದಕ್ಕಿ ಮಾರಯ್ಯ'
|
ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯಾಇದು ಯಾರ ವಚನ
|
'ಅಕ್ಕಮಹಾದೇವಿ'
|
ಬೆಟ್ಟದ ಮೆಲೊಂದು ಮನೆಯ ಮಾಡಿ ಇದು ಯಾರ ವಚನ
|
'ಅಕ್ಕಮಹಾದೇವಿ'
|
ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತುಇದು ಯಾರ ವಚನ
|
'ಅಕ್ಕಮಹಾದೇವಿ'
|
ಅಮೇಧ್ಯದ ಮಡಿಕೆ, ಮೂತ್ರದ ಕುಡಿಕೆ, ಎಲವಿನ ತಡಿಕೆಇದು ಯಾರ ವಚನ
|
'ಅಕ್ಕಮಹಾದೇವಿ'
|
ಅಯ್ಯಾ ನೀನು ಕೇಳಿದಡೆ ಕೇಳು ಕೇಳದಡೆ ಮಾಣುಇದು ಯಾರ ವಚನ
|
'ಅಕ್ಕಮಹಾದೇವಿ'
|
ಅಳಿಸಂಕುಳವೆ, ಮಾಮರವೆ, ಬೆಳುದಿಂಗಳೆ, ಕೋಗಿಲೆಯೆಇದು ಯಾರ ವಚನ
|
'ಅಕ್ಕಮಹಾದೇವಿ'
|
ಈಳೆ ನಿಂಬೆ ಮಾವು ಮಾದಲಕ್ಕೆ ಹುಳಿನೀರನೆರೆದವರಾರಯ್ಯಾ?ಇದು ಯಾರ ವಚನ
|
'ಅಕ್ಕಮಹಾದೇವಿ'
|
ಎನ್ನ ಮಾಯದ ಮದವ ಮುರಿಯಯ್ಯಾ ಇದು ಯಾರ ವಚನ
|
'ಅಕ್ಕಮಹಾದೇವಿ'
|
ಎರದ ಮುಳ್ಳಿನಂತೆ ಪರಗಂಡರೆನಗವ್ವಾ ಇದು ಯಾರ ವಚನ
|
'ಅಕ್ಕಮಹಾದೇವಿ'
|
ಕಲ್ಯಾಣವೆಂಬುದಿನ್ನಾರಿಗೆ ಹೋಗಬಹುದು? ಹೋಗಬಾರದು ಅಸಾಧ್ಯನಯ್ಯಾ. ಇದು ಯಾರ ವಚನ
|
'ಅಕ್ಕಮಹಾದೇವಿ'
|
ಕೋಲ ತುದಿಯ ಕೋಡಗದಂತೆ, ನೇಣತುದಿಯ ಬೊಂಬೆಯಂತೆಇದು ಯಾರ ವಚನ
|
'ಅಕ್ಕಮಹಾದೇವಿ'
|
ಗಿರಿಯಲಲ್ಲದೆ ಹುಲ್ಲುಮೊರಡಿಯಲ್ಲಾಡುವುದೆ ನವಿಲುಇದು ಯಾರ ವಚನ
|
'ಅಕ್ಕಮಹಾದೇವಿ'
|
ಚಿಲಿಮಿಲಿ ಎಂದು ಓದುವ ಗಿಳಿಗಳಿರಾ, ನೀವು ಕಾಣಿರೆ, ನೀವು ಕಾಣಿರೆ,ಇದು ಯಾರ ವಚನ
|
'ಅಕ್ಕಮಹಾದೇವಿ'
|
ತನುಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನುಇದು ಯಾರ ವಚನ
|
'ಅಕ್ಕಮಹಾದೇವಿ'
|
ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆಇದು ಯಾರ ವಚನ
|
'ಅಕ್ಕಮಹಾದೇವಿ'
|
ಎಚ್ಚರಿಕೆಯ ಕಾಯಕದ ಶರಣ ಯಾರು?
|
ಮುಕ್ತಿನಾಥ
|
ಸಮಗ್ರ ವಚನ ಸಂಪುಟ ಪ್ರಥಮ ಬಾರಿಗೆ ಪ್ರಕಟಗೊಂಡ ವರ್ಷ ಯಾವುದು?
|
1993 (1993)
|
ಸಮಗ್ರ ವಚನ ಸಂಪುಟ ದ್ವಿತೀಯ ಬಾರಿಗೆ ಪ್ರಕಟಗೊಂಡ ವರ್ಷ ಯಾವುದು?
|
2001 (2001)
|
ಸಮಗ್ರ ವಚನ ಸಂಪುಟದ ಪ್ರಧಾನ ಸಂಪಾದಕರು ಯಾರು?
|
ಡಾ. ಎಂ. ಎಂ. ಕಲಬುರ್ಗಿ
|
ಸಮಗ್ರ ವಚನ ಸಂಪುಟ ಪ್ರಥಮ ಪ್ರಕಾಶಕರು ಯಾರು?
|
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ
|
ಸಮಗ್ರ ವಚನ ಸಂಪುಟ ದ್ವಿತೀಯ ಪ್ರಕಾಶಕರು ಯಾರು?
|
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು
|
ಶರಣರ ವಚನದಲ್ಲಿ ನಖ ಪದದ ಅರ್ಥವೇನು?
|
ಉಗುರು
|
ಒಟ್ಟು ವಚನ ರಚನೆ ಮಾಡಿದ ಶರಣೆಯರ ಸಂಖ್ಯೆ ಎಷ್ಟು?
|
35 (35)
|
ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ರಚಿಸಿದ ಮುಖ್ಯಮಂತ್ರಿ?
|
ಜೆ. ಎಚ್. ಪಟೇಲ
|
ಜಂಗಮ ಪದ ವಿಸ್ತರಿಸಿ.
|
ಜನನ, ಗಮನ, ಮರಣ ಗಳನ್ನು ಶೂನ್ಯ ಮಾಡಿಕೊಂಡವನು
|
ಶಿವಗುರುವೆಂದು ಬಲ್ಲಾತನೆ ಗುರು ಇದು ಯಾರ ವಚನ?
|
ಅಲ್ಲಮಪ್ರಭು
|
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಇದು ಯಾರ ವಚನ?
|
ಸರ್ವಜ್ಞ
|
ಈವಂಗೆ ದೇವಂಗೆ ಯಾವುದು ಅಂತರವಯ್ಯ ಇದು ಯಾರ ವಚನ?
|
ಸರ್ವಜ್ಞ
|
ಮನೆ ನೋಡಾ ಬಡವರು ಮನ ನೋಡಾ ಇದು ಯಾರ ವಚನ?
|
ಬಸವಣ್ಣ
|
ಮಾತಾಜಿ ಅಂಕಿತ ನಾಮ ಯಾವುದು?
|
ಸಚ್ಚಿದಾನಂದ
|
ಪ್ರಥ್ವಿಗಗ್ಗಳ ಚಲುವೆ ಎಂದು ಯಾರನ್ನು ವರ್ಣಿಸಲಾಗಿದೆ
|
ನೀಲಾಂಬಿಕೆ
|
ಅಕ್ಕಮಹಾದೇವಿಯನ್ನು ಮೆಚ್ಚಿದ ರಾಜ ಯಾರು?
|
ಕೌಶಿಕ
|