ಗುರು ಬಸವಣ್ಣನವರಿಗೆ ಸಂಬಂಧಿಸಿದ ಶಾಸನಗಳು

*

ಶಾಸನಗಳಲ್ಲಿ ಗುರು ಬಸವಣ್ಣ

ಶಾಸನಗಳಲ್ಲಿ ಬಸವಣ್ಣನವರ ಚರಿತ್ರೆ ಸುದೀರ್ಘವಾಗಿ ಉಲ್ಲೇಖಿತವಾಗದಿದ್ದರೂ ಬಸವಣ್ಣನವರ ಹೆಸರು ಕಾರ್ಯಸಿದ್ದಿಯ ಕ್ಷೇತ್ರ, ಇತ್ಯಾದಿಗಳ ಉಲ್ಲೇಖ ಕಂಡು ಬರುತ್ತವೆ.

ಬಸವಣ್ಣನವರ ಹೆಸರನ್ನು ಪ್ರಸ್ತಾಪಿಸುವ ಶಾಸನಗಳು:

ಬಸವಣ್ಣನವರ ಪರ್ಯಾಯ ನಾಮಗಳನ್ನು ಪ್ರಸ್ತಾಪಿಸುವ ಈ ಕೆಳಗಿನ ಶಾಸನಗಳು ಸಂಶೋಧಕರಿಂದ ಮಾನ್ಯತೆ ಪಡೆದ ಸರ್ವ ಸಮ್ಮತವಾದ ಶಾಸನಗಳಾಗಿವೆ.

  • ಹೊಯ್ಸಳ ಸೋಮೇಶ್ವರರ ಕಣ್ಣಾನೂರ ಶಾಸನ ಕ್ರಿ. ಶ. ೧೨೫೧ - ಕರಸ್ಥಳ ಬಸವಿ ದೇವ
  • ಹೊಯ್ಸಳ ನರಸಿಂಹ- ೩ರ ಹಿರಿಯೂರು ಶಾಸನ ಕ್ರಿ.ಶ. ೧೨೫೯ - ಬಸವಯ್ಯ
  • ಕ್ರಿ.ಶ. ೧೨೬೦ ರ ಅರ್ಜುನವಾಡ ಶಾಸನ - ಬಸವರಾಜ, ಸಂಗನ ಬಸವ
  • ಕ್ರಿ.ಶ. ೧೨೬೩ ರ ಚೌಡದಾನಪುರದ ೨ ಶಾಸನಗಳು - ಸಂಗಮೇಶನ ಪುತ್ರ ಬಸವಯ್ಯ ಸಂಗನಬಸವ
  • ಕ್ರಿ.ಶ. ೧೨೭೯ ರ ಕಲ್ಲೇದೇವರ ಪುರದ ಶಾಸನದಲ್ಲಿಯ ಬಸವರಾಜ ಸಂಗನಬಸವಯ್ಯ
  • ಕ್ರಿ.ಶ. ೧೨೮೦ ರ ಮರಡಿ ಪುರದ ಶಾಸನದಲ್ಲಿಯ ಸಂಗನ ಬಸವಯ್ಯ
  • ಕ್ರಿ.ಶ. ೧೪ನೇ ಶತಮಾನದ ಗುಡಿಹಾಳ, (ಮುದ್ದೆಬಿಹಾಳ ತಾಲ್ಲೂಕ, ಬಿಜಾಪುರ ಜಿಲ್ಲೆ) ಶಾಸನದಲ್ಲಿಯ, ಸಂಗನ ಬಸವರಾಜ ದೇವರು
  • ಕ್ರಿ.ಶ. ೧೬೮೦ ರ ಜೋಡಿದಾಸೇನ ಹಳ್ಳಿಯ ಶಾಸನದಲ್ಲಿಯ ಬಸವರಾಜೇಂದ್ರ
  • ಕ್ರಿ.ಶ. ೧೬೬೦ ರ ಆನಂದಪುರ ಮಠದ ತಾಮ್ರ ಶಾಸನದಲ್ಲಿಯ ಬಸವೇಶ್ವರ
  • ಕ್ರಿ.ಶ. ೧೭೦೦ ರ ಕಾನಕಾನಹಳ್ಳಿಯ ಎರಡು ತಾಮ್ರ ಶಾಸನದಲ್ಲಿಯ ಬಸವೇಶ್ವರ ಸ್ವಾಮುಲು ಕಲ್ಯಾಣದ ಬಸವಪ್ಪನವರು.

ಈ ಮೇಲ್ಕಂಡ ಶಾಸನಗಳಲ್ಲಿಯ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರ ಪರ್ಯಾಯ ನಾಮಗಳಾಗಿದ್ದು ಬಸವಣ್ಣನವರಿಗೆ ಸಂಬಂಧಿಸಿದವುಗಳಾಗಿವೆ.

ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ. ಶ. ೧೨೬೦ ರ ಅರ್ಜುನವಾಡ ಶಾಸನ , ಕ್ರಿ.ಶ. ೧೨೫೯ ರ ಹಿರಿಯೂರು ಶಾಸನ, ಕ್ರಿ.ಶ. ೧೨೬೩ ರ ಚೌಡದಾನಪುರದ ೨ ಶಾಸನಗಳು ಹರಿಹರ-ಪಾಲ್ಕುರೆಕೆ ಸೋಮನಾಥರು ಬಸವಣ್ಣನವರ ಕುರಿತು ಕಾವ್ಯ ಪುರಣಗಳನ್ನು ರಚಿಸುವುದಕ್ಕಿಂತ ಪೂರ್ವದಲ್ಲಿ ಹಕಿಸಲ್ಪಟ್ಟವುಗಳಾಗಿವೆ. ಬಸವಣ್ಣನವರ ಜೀವಿತದ ವಿವರ, ವ್ಯಕ್ತಿತ್ವ ಇತ್ಯಾದಿಗಳನ್ನು ಗುರುತಿಸುವಲ್ಲಿ ಇವು ವಿಶ್ವಾಸನೀಯಗಳಾಗಿವೆ.

ಗ್ರಂಥ ಋಣ:
೧) ಎಂ. ಎಂ. ಕಲಬುರ್ಗಿ, ಶಾಸನಗಳಲ್ಲಿ ಶಿವಶರಣರು, ವೀರಶೈವ ಅಧ್ಯಯನ ಸಂಸ್ಥೆ, ಡಂಬಳ ಗದಗ, ೧೯೭೮
೨) ಸಿ. ನಾಗಭೂಷಣ, ಶಾಸನಗಳು ಮತ್ತು ಕನ್ನಡ ಸಾಹಿತ್ಯ, ಪ್ರಸಾರಾಂಗ, ಗುಲಬರ್ಗಾ ವಿಶ್ವ ವಿದ್ಯಾಲಯ, ಗುಲಬರ್ಗಾ, ೨೦೦೫
೩) ಡಾ. ಪಿ. ಬಿ. ದೇಸಾಯಿ, Basaveshwara and his times, ಬಸವ ಸಮಿತಿ, ಬಸವ ಭವನ ಬೆಂಗಳೂರು, ೧೯೬೮.

ಪರಿವಿಡಿ (index)
*
Previousಬಸವ ಸಮಿತಿಬಸವಣ್ಣ ತಿರಸ್ಕರಿಸಿದ ದೇವರುಗಳುNext
*