Previous ಬಸವಣ್ಣ ತಿರಸ್ಕರಿಸಿದ ದೇವರುಗಳು ಹರ್ಡೇಕರ ಮಂಜಪ್ಪ Next

ಹಿರೇಮಠ ಸಂಸ್ಥಾನ ಭಾಲ್ಕಿ (ಬಸವ ತತ್ವದ ನಿಜಾಚರಣೆ)

*

ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು ಕೆಳದೇ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು.

ಲಿಂಗೈಕ್ಯ ಡಾ|| ಚೆನ್ನಬಸವ ಪಟ್ಟದೇವರು

ಹಿಂದಿನಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ (ಹೈದ್ರಾಬಾದ) ಕರ್ನಾಟಕವು ಪರಕೀಯ ಆಳ್ವಿಕೆ. ಸ್ಠಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು. ಇವರ ಮೊದಲ ಹೆಸರು ಮಹಾರುದ್ರಪ್ಪ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಮನೆತನದ ರಾಜಪ್ಪ- ಸಂಗಮ್ಮ ದಂಪತಿಗಳಿಗೆ ಮಗುವಾಗಿ ಹುಟ್ಟಿದ ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಮಹಾ ಅನಾಥರಾದರು. ಬಾಲ್ಯದ ೮-೧೦ ವರ್ಷಗಳವರೆಗೆ ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕ೦ತಿ ಭಿಕ್ಷೆ ಎತ್ತಿದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಜಾನ ಪಡೆದು ಮರಾಠಿ- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿಎಲ್ಲಿ ಬರೆಯುತ್ತಿದ್ದರು ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರದ (ಬಿ) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ಅಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿದ್ದು , ದಾಸೋಹ ಮನೆಗೆ ಮನೆಗೆ ಕಾಂತಿ ಭಿಕ್ಷೆ ತರಬೇಕಾಗುತ್ತಿತ್ತು. ಓದುವ ಗೀಳು ಹೊಂದಿದ್ದ ಚೆನ್ನಬಸವ ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಅಲ್ಲಿಗೆ ಹೋಗುವ ಹಂಬಲವಾದರೂ ಅದಮಿಟ್ಟುಕೊಂಡರು. ಇತ್ತ ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಸಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಜ್ಜಾನಿಯಾಗಿದ್ದ ಕ್ರಿಯಾಸಿಲ ಚೆನ್ನಬಸವ ಜನಾನುರಾಗಿಯಾಗಿ ಬೆಳೆಯುತ್ತಿರುವುದನ್ನು ದೇಶಮುಖರು ಗಮನಿಸಿ ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು.

ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ್ ಸ್ವಾಮಿಗಳ ಪ್ರೀತಿಯ ಶಿಷ್ಯನಾಗಿ, ಕನ್ನಡ ಭಾಷೆ-ಸಾಹಿತ್ಯ ವಚನಗಳ ಅಧ್ಯಯನದೊಂದಿಗೆ ಬದುಕಿನಲ್ಲಿ ಶರಣ ತತ್ವಗಳನ್ನು ರೂಢಿಸಿಕೊಂಡರು. ಇವೆಲ್ಲದರ ಮಧ್ಯ ಲೌಕಿಕ ಬದುಕಿನ ಬಗ್ಗೆ ಆಸಕ್ತಿಯೇ ತೋರಲಿಲ್ಲ. ಆದ್ದರಿಂದ ಅವರ ಬದುಕಿನ ಸ್ಥಾಯಿ “ವಿರಕ್ತ”ವಾಯಿತು ಕಾಯಕ ದಾಸೋಹ ಅವರ ಜೀವನವಾದರೆ ಲೋಕಸೇವೆ ಜೀವನದ ಗುರಿಯಾಯಿತು. ಹೀಗೆ ಶಿವಯೋಗ ಮಂದಿರ ಬದುಕಿನ ಬೆಳಕಾಯಿತು

ಪಟ್ಟದೇವರು

ಹಾನಗಲ್ ಶಿವಯೋಗ ಮಂದಿರದಲ್ಲಿ ತರಬೇತಿಯನ್ನು ಪಡೆದಾದ ಮೇಲೆ “ಚೆನ್ನಬಸವ” “ಪಟ್ಟದೇವರು” ಆದ್ದದ್ದು ೧೯೨೪ರಲ್ಲಿ ನಡೆದ ಭಾಲ್ಕಿ ಹಿರೇಮಠ ಪೀಠಾರೋಹಣದಂದು. ಶಿವಯೋಗ ಮಂದಿರದಲ್ಲಿ ತರಬೇತಿ ನಿಡಿದ ಹಾನಗಲ್ ಕುಮಾರ ಸ್ವಾಮಿಯವರೆ ಬಂದು ತಮ್ಮ ಪ್ರೀತಿಯ ಶಿಷ್ಯನಿಗೆ ಪೀಠಾರೋಹಣ ಮಾಡಿಸಿದ್ದು, ಜೋತೆಗೆ “ಮಠಕ್ಕಾಗಿ ನೀನಲ್ಲ ನೀನಗಾಗಿ ಮಠವಿದೆ” ಈ ಭಾಗದಲ್ಲಿ ಶಿಕ್ಷಣ, ಶರಣತತ್ವ, ದಿನ ದಲಿತರ ಸೇವೆಗೆ ಬದುಕು ಮೀಸಲಾಗಿರಲಿ ಎಂದು ಹೇಳಿ ಜವಾಬ್ದಾರಿಗಳನ್ನು ಹೊರಿದರು. ಆದರೆ ಮಠದ ವ್ಯವಸ್ಠೆ ಶಿಥಿಲವಾಗಿತ್ತು . ಶಾಖಾ ಮಠಗಳು ಸ್ವತಂತ್ರವೆಂಬಂತೆ ಇದ್ದವು. ಇದೆಲ್ಲ ಒಂದು ವರ್ಷದಲ್ಲಿ ಸರಿಪಡಿಸಿ ಎಲ್ಲಾ ಶಾಖಾ ಮಠಗಳು ಭಾಲ್ಕಿ ಹಿರೇಮಠದ ಅಧೀನಕ್ಕೆ ತಂದರು, ಕಾರೆಮುಂಗಿ, ಮೊರಗಿಯಲ್ಲಿರುವ ಮಠದ ಹೊಲಗಳ ಉಳುಮೆಯನ್ನು ಸ್ವತ: ತಾವೇ ಮಾಡಿದರು. ನಿರಂತರ ಶ್ರಮವಹಿಸಿ ಮಠದ ಸರ್ವಾಂಗೀಣ ಏಳಿಗೆಗೆ ಮುಂದಾದರೂ. ಶತಾಯುಶಿಗಳಾದ ಪಟ್ಟದೇವರು ದಿನಾಂಕ ೨೨-೦೪-೧೯೯೯ ರಂದು ಲಿಂಗೈಕ್ಯರಾದರು.

ಪಟ್ಟದೇವರ ಸಮರ್ಥ ಉತ್ತರಾಧಿಕಾರಿಯಾಗಿರುವ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೆವರು ಹಿರಿಯ ಶ್ರೀಗಳ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುತ್ತಾ ಕನ್ನಡ ಸೇವೆ, ಶಿಕ್ಷಣ ಪ್ರಜ್ಞೆ, ಬಸವ ಸಂಸ್ಕೃತಿಯ ಪ್ರಸಾರ, ಇಂಬಿಲ್ಲದಂತೆ ನಡೆಸಿಕೋಂಡು ಬರುತ್ತಿದ್ದಾರೆ. ಶ್ರೀ ಡಾ. ಚನ್ನಬಸವ ಪಟ್ಟದ್ದೆವರ ಕೊರತೆಯನ್ನು ತುಂಬುತ್ತಿದ್ದಾರೆ.

ಹಿರೇಮಠ ಸಂಸ್ಥಾನದ ಪುಸ್ತಕ ಪ್ರಕಟಣೆಗಳು

ಪುಸ್ತಕಗಳು ಮನುಷ್ಯರ ಅತ್ಯುತ್ತಮ ಸಂಗಾತಿಗಳಾಗಿದ್ದು ನಮ್ಮ ಸಂಸ್ಕೃತಿಯನ್ನ ಪಸರಿಸುವ ಮತ್ತು ಜ್ಞಾನವನ್ನು ಹೆಚ್ಚಿಸುವ ಸಾಧನವಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನದ ಪ್ರಾಬಲ್ಯದಿಂದಾಗಿ ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಓದುವ ವಲಯ ಕಡಿಮೆಯಾಗುತ್ತಿದೆ. ಹಾಗಾಗಿ ಉತ್ತಮ ಲೇಖಕರಿಂದ ಉತ್ತಮ ವಿಚಾರಗಳನ್ನು ಬರೆಸಿ ಪುಸ್ತಕಗಳನ್ನು ಪ್ರಕಟಿಸುವದರೊಂದಿಗೆ ಅಕ್ಷರ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶದಿಂದ ಪೂಜ್ಯ ಶ್ರೀ. ಡಾ।। ಬಸವಲಿಂಗ ಪಟ್ಟದ್ದೆವರು ‘ಬಸವ ಧರ್ಮ ಪ್ರಸಾರ ಸಂಸ್ಥೆ ಹಿರೇಮಠ ಸಂಸ್ಥಾನ, ಭಾಲ್ಕಿ ’ ಎಂಬ ಹೆಸರಿನಲ್ಲಿ ಪ್ರಕಾಶನ ಸಂಸ್ಥೆ ತೆರೆದು ನೂರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದು ಮತ್ತು ಬಸವ ತತ್ವವನ್ನು ಪುಸ್ತಕ ಸಂಸ್ಕೃತಿಯ ಮೂಲಕ ಪ್ರಚಾರ ಮಾಡುತ್ತಿರುವುದು ಶ್ರೀಗಳ ಗಮನಾರ್ಹ ಸಾಧನೆಗಳಾಗಿವೆ.

ಪ್ರಕಟಣೆಯ ವಿವರ

ಕನ್ನಡದಲ್ಲಿ 43, ಹಿಂದಿಯಲ್ಲಿ 4, ಇಂಗ್ಲೀಷಿನಲ್ಲಿ -1 ಪುಸ್ತಕ ಪ್ರಕಟಿಸಿರುವುದಲ್ಲದೆ ಡಾ।। ಚನ್ನಬಸವ ಪಟ್ಟದ್ದೆವರ ಪ್ರತಿಷ್ಠಾನ 2, ಮಹಾರಾಷ್ಟ್ರ ಬಸವ ಪರಿಷತ್ತಿನಿಂದ 34, ಆಂಧ್ರದ ಬಸವ ಪರಿಷತ್ತಿನಿಂದ 7 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

ಡಾ।। ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ ಸೇವೆ

ನಿನ್ನೊಡವೆ ಎಂಬುದು ಜ್ಞಾನರತ್ನ , ಜ್ಞಾನವೇ ಶಕ್ತಿ ಎಂಬ ವಾಕ್ಯದಂತೆ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರು ಶಿಕ್ಷಣ ರಂಗದಲ್ಲಿ ಕ್ರಾಂತಿಯನ್ನೆ ಮಾಡಿದ್ದಾರೆ. ಅಲ್ಪ ಸಮಯದಲ್ಲಿ ಶಿಕ್ಷಣ ಕ್ಷೇತ್ರವನ್ನು ಬ್ರಹತ್ತಾಗಿ ಬೆಳೆಸಿದ್ದು ಬಸವಲಿಂಗ ಪಟ್ಟದ್ದೇವರ ಶ್ರಮ ಪ್ರಯತ್ನದ ಫಲ ಎಂಬುದು ನಾವು ಅರ್ಥ ಮಾಡಿಕೊಳ್ಳಬೇಕು. ಬೀದರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಶಿಕ್ಷಣ ಸಂಸ್ಥೆಗಳು ವ್ಯಾಪಿಸಿವೆ. ಅಷ್ಟೇ ಅಲ್ಲ ಗುಲ್ಬರ್ಗಾ ಜಿಲ್ಲೆಯಲ್ಲಿಯೂ ಪ್ರವೇಶ ಮಾಡಿವೆ ಎಂದು ಹೇಳಲು ಸಂತಸವಾಗುತ್ತಿದೆ. ತಮ್ಮ ಗುರುಗುಳು ಮಾಡಿದ ಸಂಸ್ಥೆ ತಮ್ಮ ಕಡೆ ಬರಲಿಲ್ಲ ಎಂದು ನಿರಾಶರಗದೇ ಮತ್ತೆ ಶೂನ್ಯದಿಂದ ವಿಸ್ತರಿಸಿದ್ದಾರೆ. 1992 ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ್ನು ಸ್ಥಾಪಿಸಿ ನಲವತ್ತು ಮಕ್ಕಳಿಂದ ಪ್ರಾಂಭವಾದ ಸಂಸ್ಥೆ ಇಂದಿಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಾರೆ. ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಗೂ ಸಿಬ್ಬಂದಿಯವರು ಕಾರ್ಯ ಮಾಡುತ್ತಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಪೂಜ್ಯರ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ಜೊತೆ ಮಕ್ಕಳಲ್ಲಿ ಸಂಸ್ಕಾರ ಸಂಸ್ಕ್ರತಿ ಬೆಳೆಸುವುದು ಈ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಪ್ರಯತ್ನ ಪರಿಶ್ರಮ ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರು ನಮ್ಮ ಕಣ್ಣ ಮುಂದೆ ಇದ್ದಾರೆ. ಪೂಜ್ಯರು ಸ್ಥಾಪಿಸಿದ ಸಂಸ್ಥೆ ಈ ಕೆಳಗಿನಂತಿವೆ.

ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ

ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರ ಕನಸಿನ ಕೂಸು ಇಂದು ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಶಾಲೆ ಎನಿಸಿಕೊಂಡಿದೆ. ರಾಜ್ಯಮಟ್ಟದ ರಾಂಕುಗಳು ಪಡೆದು ಮುಖ್ಯಮಂತ್ರಿ, ಶಿಕ್ಷಣ ಮಂತ್ರಿಗಳಿಂದ ಪ್ರಶಸ್ತಿ ಪದಕ ಪಡೆದುಕೊಂಡಿದೆ ಎಲ್.ಕೆ.ಜಿ. ಯಿಂದ ಪಿ.ಯು.ಸಿ. ವರೆಗೆ ಶಿಕ್ಷಣ ನೀಡಲಾಗುತ್ತದೆ. ಕನ್ನಡ ಮಾಧ್ಯಮದಲ್ಲಿದ್ದರೂ ಇಂಗ್ಲಿಷ್ ಕಲಿಯುವಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತು ಮಾಡಿ ತೋರಿಸಿದೆ. ಇಲ್ಲಿ ಪಾಸಾದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಶ್ವಿಯಾಗಿದ್ದಾರೆ. ಅಷ್ಟೇ ಅಲ್ಲ ಇತರೆ ಸಂಸ್ಥೆಯಲ್ಲಿ ಪ್ರವೇಶ ಪಡೆದು ಅಲ್ಲಿ ಗುರುಕುಲ ವಿದ್ಯಾರ್ಥಿಗಳೇ ಪ್ರಥಮ ರಾಂಕ್ ಸ್ಥಾನದಲ್ಲಿದ್ದರೆಂದು ಹೇಳಲು ಹೆಮ್ಮೆ ಅನಿಸುತ್ತದೆ. ಸಂಸ್ಕಾರ ಸಹಿತವಾದ ಈ ಸಂಸ್ಥೆ ಬೀದರ್ ಜಿಲ್ಲೆಗೆ ಹೆಮ್ಮೆ ಎನಿಸಿದೆ. ಇಂಥ ಆದರ್ಶ ಸಂಸ್ಕಾರಯುವಾದ ವಸತಿ ಶಾಲೆ ಮಾಡಿದ ಬಸವಲಿಂಗ ಪಟ್ಟದ್ದೆವರು ನಮ್ಮೆಲ್ಲರ ಅಪ್ಪಗಳು.

ಹಾನಗಲ ಕುಮಾರೇಶ್ವರ ಉಚಿತ ಪ್ರಸಾದ ನಿಲಯ

ಬಡವರಿಗೆ ಅನಾಥರಿಗೆ ಆಶ್ರಯ ನೀಡುವ ಪ್ರಸಾದ ನಿಲಯ, ಇಲ್ಲಿರುವ ಮಕ್ಕಳು ಪೂಜ್ಯರ ದೃಷ್ಟಿಯಲ್ಲಿ ನಿಜವಾದ ಜಂಗಮರು. ಎಡದ ಕೈಯಲ್ಲಿ ಲಿಂಗಪೂಜೆ ಬಲದ ಕೈಯಲ್ಲಿ ಜಂಗಮ ಸೇವೆ ಅಪ್ಪ ಬಸವಗುರುವಿನ ವಾಣಿ ಪ್ರತ್ಯಕ್ಷ್ಯ ಆಚರಣೆಯಲ್ಲಿ ಕಾಣುತ್ತೇವೆ. ಎಲ್ಲಾ ಜಾತಿ, ಮತ-ಪಂಥ ಭೇದವಿಲ್ಲದೆ ಎಲ್ಲರಿಗೂ ಪ್ರವೇಶವಿದೆ. ಬಸವ ಸಂಸ್ಕಾರದೊಂದಿಗೆ ಇಲ್ಲಿನ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ. ಕೇವಲ ಇಪ್ಪತ್ತೈದು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಪ್ರಸಾದ ನಿಲಯ ಇಂದು ನಾಲ್ಕುನೂರು ಮಕ್ಕಳಿಂದ ಪ್ರಸಾದ ನಿಲಯ ವಿಸ್ತರಿಸಿದ್ದು , ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಕಲ್ಯಾಣ ಕರ್ನಾಟಕದಲ್ಲಿಯೇ ಇದೊಂದು ಅಪರೂಪ ಏಕೈಕ ಪ್ರಸಾದ ನಿಲಯ ಎಂದು ಸಂತಸದಿಂದ ಹೇಳಬೇಕಾಗುತ್ತದೆ.

ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯ, ಬೀದರ

ಬಡ ಮತ್ತು ಪ್ರತಿಭಾವಂತರಿಗೆ ಬೀದರ ನಗರದಲ್ಲಿ ಪ್ರಪ್ರಥಮವಾಗಿ ಪ್ರಾರಂಭಿಸಿದ್ದು , ಪೂಜ್ಯ ಶ್ರೀ ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ಇಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್, ಬಿ.ಎಡ್ , ಡಿ.ಎಡ್, ಮುಂತಾದ ಉನ್ನತ ಶಿಕ್ಷಣ ಪಡೆಯುವರಿಗೆ ಈ ಪ್ರಸಾದ ನಿಲಯ ಆಶ್ರಯ ತಾಣವಾಗಿದೆ. ಇಲ್ಲಿ ಐವತ್ತು ವಿದ್ಯಾರ್ಥಿಗಳು ಇರುತ್ತಾರೆ. ನಗರದ ಮಧ್ಯಭಾಗದಲ್ಲಿ ಭಕ್ತರ ಸಹಕಾರದಿಂದ ಸಂಗ್ರಹಿತ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವತಂತ್ರ ಕಟ್ಟಡ ಖರೀದಿಸಲಾಗಿದೆ. ಮುಂದೆ ಒಂದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಪೂಜ್ಯರ ಕನಸು ನನಸಾಗಲಿ ಎಂದು ನಾವು ಪ್ರಾರ್ಥಿಸೋಣ. ಆಂಧ್ರದಲ್ಲಿ ಕನ್ನಡ ಶಾಲೆಗಳು: ಕನ್ನಡಿಗರು ಬಹುಸಂಖ್ಯೆಯಲ್ಲಿ ಇದ್ದರೂ ಆಂಧ್ರಕ್ಕೆ ಸೇರಿದ ಮೇದಕ ಜಿಲ್ಲೆಯ ನಾರಾಯಖೇಡ ತಾಲೂಕಿನಲ್ಲಿ ಕಾರಾಮುಂಗಿ ಮತ್ತು ಮೋರ್ಗಿಗಳಲ್ಲಿ ಕನ್ನಡ ಶಾಲೆಗಳು ಆರಂಭಿಸಿದ್ದು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರಿಗೆ ಸಲ್ಲುತ್ತದೆ. ನಾಲ್ಕು ನೂರು ಮಕ್ಕಳು ಕನ್ನಡ ಶಾಲೆಯಲ್ಲಿ ಓದುತ್ತಾರೆ. ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಇದೆ. ( ಅನುಭವ ಮಂಟಪ ಗುರುಕುಲ ಪ್ರಾಥಮಿಕ ಶಾಲೆ ಕಾರಾಮುಂಗಿ ಮತ್ತು ಬಸವ ಗುರುಕುಲ್ ಪ್ರಾಥಮಿಕ ಶಾಲೆ ಮೋರ್ಗಿ).

ಸಂಗೀತ ಶಾಲೆ :

ಸಂಗೀತ ಮನಸ್ಸಿನ ಸಿದ್ದ ಔಷಧ ಎಂಬುದು ಪೂಜ್ಯ ಶ್ರೀ ಡಾ।। ಬಸವಲಿಂಗ ಪಟ್ಟದ್ದೇವರ ಆಶಯ. ಆದ್ದರಿಂದ ಶ್ರೀಗಳು ಸಂಗೀತ ಶಾಲೆಯನ್ನು ಆರಂಭಿಸಿದರು. ಔರಾದ ತಾಲೂಕಿನ ಖೇಡ ಗ್ರಾಮದಲ್ಲಿ “ ನೀಲಾಂಬಿಕಾ ಅಂಗವಿಕಲ ವಸತಿ ಸಂಗೀತ ಪಾಠಶಾಲೆಯನ್ನು 1994 ರಲ್ಲಿ ಆರಂಭಿಸಿದರು. ಈ ಭಾಗದ ಅನೇಕ ಮಹಿಳೆಯರಿಗೆ ಇದು ಆಶಾ ಕಿರಣವಾಗಿದೆ. ಅಂಗವಿಕಲರ ಬಾಳಿನ ಬೆಳಕಾಗಿದೆ. ಹಾಗೆಯೇ 1996 ರಲ್ಲಿ ಭಾಲ್ಕಿಯ ಹೀರೆಮಠದ ಸಂಸ್ಥಾನದಲ್ಲಿಯೇ ನೀಲಾಂಬಿಕಾ ಸಂಗೀತ ಪಾಠ ಶಾಲೆ ಆರಂಭಿಸಲಾಯಿತು. ಇಲ್ಲಿ ಸಂಗೀತ ಕಲಿತ ಅನೇಕರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅನೇಕ ಸಂಗೀತಾಸಕ್ತರಿಗೆ ಇಲ್ಲಿ ಉಪಜೀವನಕ್ಕೆ ಆಧಾರವಾಗಿದೆ.

ಗೌರವ ಪ್ರಶಸ್ತಿಗಳು

ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಹಿರೇಮಠ ಸಂಸ್ಥಾನ ಭಾಲ್ಕಿ ವತಿಯಿಂದ ಪ್ರತಿ ವರ್ಷ ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತಿದೆ. ಅಂತಹವರಿಗೆ ಡಾ।। ಚನ್ನಬಸವ ಪಟ್ಟದ್ದೆವರು ಪ್ರಶಸ್ತಿ ಪತ್ರ ರೂ.10,000/- ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

ಪ್ರಮುಖ ಗೌರವ ಪ್ರಶಸ್ತಿಗಳು

SL NO. ಪ್ರಶಸ್ತಿಗಳು
1 ಮಹಾರಾಷ್ಟ್ರದಲ್ಲಿ ಶರಣರ ಸಾಹಿತ್ಯ ಮರಾಠಿ ಭಾಷೆಯಲ್ಲಿ ರಚಿಸಿದ ಸಾಹಿತಿಗಳಿಗೆ
2 ಆಂಧ್ರಪ್ರದೇಶದಲ್ಲಿ ಶರಣರ ಸಾಹಿತ್ಯ ತೆಲುಗು ಭಾಷೆಯಲ್ಲಿ ರಚಿಸಿದ ಲೇಖಕರಿಗೆ.
3 ಮಕ್ಕಳ ಸಾಹಿತ್ಯ ರಚಿಸಿದ ಸಾಹಿತಿಗಳಿಗೆ.
4 “ ಸಿದ್ಧರಾಮ ಜಂಬಲದಿನ್ನಿ ಸ್ಮರಣೆಯಲ್ಲಿ ” ಉತ್ತಮ ವಚನ ಸಂಗೀತಕಾರರಿಗೆ
5 ಶ್ರೀ ಸಿದ್ರಮ ಡಿ. ಕೆ ಅವರು ಸ್ಥಾಪಿಸಿದ ಶಾಶ್ವತ ನಿಧಿಯಿಂದ ಕಾಯಕ ಪ್ರಶಸ್ತಿ
6 ಬೀದರ ಜಿಲ್ಲೆಯಲ್ಲಿ ಉತ್ತಮ ಗ್ರಂಥ ರಚಿಸಿದ ಸಾಹಿತಿಗಳಿಗೆ.
7 ಬೀದರ ಜಿಲ್ಲೆಯಲ್ಲಿ ಹಿರಿಯ ಸಾಹಿತಿಗಳಿಗೆ.
8 “ ಮನೆಗೊಂದು ವಚನ ಪ್ರವಚನ ” ದಿಂದ ಬಸವಧರ್ಮ ಪ್ರಸಾರ ಮಾಡುತ್ತಿರುವವರಿಗೆ.
9 ಉತ್ತಮ ಓದುಗ ಪ್ರಶಸ್ತಿ.
10 ಡಾ।। ಚನ್ನಬಸವ ಪಟ್ಟದ್ದೆವರು ಯುವಕ ಸಂಘದ ಪ್ರಶಸ್ತಿ.


ಲೇಖನದ ಸಂಪನ್ಮೂಲ: http://hiremathasamsthana.org/kannada/home.php
*
ಪರಿವಿಡಿ (index)
*
Previous ಬಸವಣ್ಣ ತಿರಸ್ಕರಿಸಿದ ದೇವರುಗಳು ಹರ್ಡೇಕರ ಮಂಜಪ್ಪ Next