Previous ಹನ್ನೆರಡನೆಯ ಶತಮಾನದಲ್ಲಿ ಸಂಗೀತದ ಸ್ಥಿತಿ ನ್ಯೂ ಇಯರ್, ಮತ್ತು ಯುಗಾದಿ Next

ಮಾಂಸದ ಬೆಲೆ

*

ಎಲ್ಲಕ್ಕಿಂತ ಅಗ್ಗದ ವಸ್ತು ಯಾವುದು?

ಮಗಧ ಸಾಮ್ರಾಟ ಬಿಂದುಸಾರನು ಒಮ್ಮೆ ತನ್ನ ಆಸ್ಥಾನದಲ್ಲಿ ಕೇಳಿದನು:
ದೇಶದ ಆಹಾರ ಸಮಸ್ಯೆಯನ್ನು ಪರಿಹರಿಸಲು

ಮಂತ್ರಿಗಳು ಮತ್ತು ಇತರ ಸದಸ್ಯರು ಯೋಚನೆಯಲ್ಲಿ ಮುಳುಗಿದರು. ಅಕ್ಕಿ, ಗೋಧಿ, ಜೋಳ, ನವಣೆ, ಸೆಜ್ಜೆ, ಮುಂತಾದವು ಬಹಳ ಪರಿಶ್ರಮದಿಂದ ಸಿಗುತ್ತವೆ, ಅದು ಕೂಡ ಪ್ರಕೃತಿ ವಿಕೋಪ ಇಲ್ಲವಾದರೆ. ಇಂತಹ ಸ್ಥಿತಿಯಲ್ಲಿ ಆಹಾರ ಅಗ್ಗವಾಗಲಾರದು.

ಆಗ ಬೇಟೆಯ ಹುಚ್ಚು ಇರುವ ಸಾಮಂತನೊಬ್ಬ ಹೇಳಿದ:
ರಾಜಾ, ಎಲ್ಲಕ್ಕಿಂತ ಅಗ್ಗದ ಆಹಾರ ಮಾಂಸ!

ಇದನ್ನು ಪಡೆಯಲು ಪರಿಶ್ರಮ ಕಡಿಮೆ ಸಾಕು ಮತ್ತು ಪೌಷ್ಟಿಕ ಆಹಾರವೂ ತಿನ್ನಲು ಸಿಗುತ್ತದೆ. ಎಲ್ಲರೂ ಇದನ್ನು ಸಮರ್ಥಿಸಿದರು.

ಆದರೆ ಪ್ರಧಾನ ಮಂತ್ರಿ ಚಾಣಕ್ಯ ಸುಮ್ಮನಿದ್ದನು.

ಸಾಮ್ರಾಟನು ಅವನನ್ನು ಕೇಳಿದ: ತಾವು ಇದರ ಬಗ್ಗೆ ಏನು ಹೇಳುತ್ತೀರಾ?

ಚಾಣಕ್ಯನು ಹೇಳಿದ: ನಾನು ನನ್ನ ವಿಚಾರವನ್ನು ನಾಳೆ ತಮ್ಮ ಮುಂದೆ ಇಡುವೆನು.

ರಾತ್ರಿಯಾದ ಮೇಲೆ ಪ್ರಧಾನ ಮಂತ್ರಿ ಚಾಣಕ್ಯನು ಆ ಸಾಮಂತನ ಮನೆಗೆ ಹೋದ. ಸಾಮಂತ ಬಾಗಿಲು ತೆರೆದು ಇಷ್ಟು ರಾತ್ರಿಯಲ್ಲಿ ಪ್ರಧಾನ ಮಂತ್ರಿ ತನ್ನ ಮನೆಗೆ ಬಂದುದನ್ನು ನೋಡಿ ಗಾಬರಿಗೊಂಡನು!

ಚಾಣಕ್ಯನು ಹೇಳಿದನ: ಸಂಜೆ ಹೊತ್ತಿಗೆ ಮಹಾರಾಜರು ಒಮ್ಮೆಲೆ ಕಾಯಿಲೆ ಬಿದ್ದರು. ರಾಜವೈದ್ಯರು ಅವರ ಔಷಧಕ್ಕೆ ಯಾರಾದರೂ ದೊಡ್ಡ ಮನುಷ್ಯರ ಹೃದಯದ ಮಾಂಸ ಎರಡು ತೊಲೆ ಸಿಕ್ಕಿದರೆ ರಾಜರ ಪ್ರಾಣ ಉಳಿಯಬಹುದೆಂದು ಹೇಳಿದ್ದಾರೆ.
ಆದ್ದರಿಂದ ನಿಮ್ಮ ಹೃದಯದ 💓 ಕೇವಲ ಎರಡು ತೊಲೆ ಮಾಂಸ ಪಡೆಯಲು ಬಂದಿದ್ದೇನೆ. ಇದಕ್ಕಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ನೀವು ಪಡೆಯಬಹುದು.

ಇದನ್ನು ಕೇಳುತ್ತಲೇ ಸಾಮಂತನ ಮುಖ ಬಿಳುಚಿಕೊಂಡಿತು! ಅವನು ಚಾಣಕ್ಯನ ಕಾಲು ಹಿಡಿದು ಕ್ಷಮೆ ಕೇಳಿದ.
ಅದಕ್ಕೆ ಬದಲಾಗಿ ಒಂದು ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟು ಈ ಹಣದಿಂದ ಬೇರೆ ಯಾರಾದರೂ ಸಾಮಂತರ ಹೃದಯದ ಮಾಂಸ ತೆಗೆದುಕೊಳ್ಳಲು ಹೇಳಿದ.

ಅದೇ ರೀತಿ ಚಾಣಕ್ಯನು ಅವನನ್ನು ಸಮರ್ಥಿಸಿದ ಎಲ್ಲಾ ಸಾಮಂತರ ಮತ್ತು ಸೇನಾಧಿಕಾರಿಗಳ ಹತ್ತಿರ ಹೋಗಿ ಕೇಳಿದ.

ಎಲ್ಲರ ಹತ್ತಿರವೂ ಅವರ ಹೃದಯದ ಎರಡು ತೊಲೆ ಮಾಂಸ ಕೇಳಿದ. ಆದರೆ ಯಾರೂ ಕೊಡಲು ತಯಾರಿರಲಿಲ್ಲ. ಬದಲಾಗಿ ಎಲ್ಲರೂ ತಮ್ಮನ್ನು ಪಾರು ಮಾಡಲು ಚಾಣಕ್ಯನಿಗೆ ಒಂದು ಲಕ್ಷ, ಎರಡು ಲಕ್ಷ, ಐದು ಲಕ್ಷ, ಹೀಗೆ ಚಿನ್ನದ ನಾಣ್ಯಗಳನ್ನು ಕೊಟ್ಟರು.

ಈ ರೀತಿ ಸುಮಾರು ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಕಲೆ ಹಾಕಿ ಚಾಣಕ್ಯನು ಬೆಳಗಾಗುವುದರೊಳಗೆ ತನ್ನ ಮನೆಗೆ ತಲುಪಿದ.

ಮರುದಿನ ಆಸ್ಥಾನದಲ್ಲಿ ಚಾಣಕ್ಯನು ಸಾಮ್ರಾಟನ ಮುಂದೆ ಎರಡು ಕೋಟಿ ಚಿನ್ನದ ನಾಣ್ಯಗಳನ್ನು ಇಟ್ಟುಬಿಟ್ಟ.

ಸಾಮ್ರಾಟನು ಕೇಳಿದ: ಇದೆಲ್ಲಾ ಏನು?

ಚಾಣಕ್ಯನು ಹೇಳಿದನು: ಎರಡು ತೊಲೆ ಮಾಂಸ ಕೊಂಡುಕೊಳ್ಳಲು ಇಷ್ಟು ಹಣ ಸಂಗ್ರಹವಾಯಿತು. ಆದರೂ ಎರಡು ತೊಲೆ ಮಾಂಸ ಸಿಗಲಿಲ್ಲ!

ರಾಜಾ, ಈಗ ನೀವೇ ಸ್ವತಃ ವಿಚಾರ ಮಾಡಿ ಮಾಂಸ ಎಷ್ಟು ಅಗ್ಗವೆಂದು!

ಜೀವನ ಅಮೂಲ್ಯ. ಯಾವ ರೀತಿ ನಮಗೆ ನಮ್ಮ ಜೀವದ ಮೇಲೆ ಆಸೆ ಇದೆಯೋ ಅದೇ ರೀತಿ ಎಲ್ಲಾ ಜೀವಿಗಳಿಗೂ ತಮ್ಮ ಜೀವದ ಮೇಲೆ ಆಸೆಯಿದೆ, ಆದರೆ ಅವು ತಮ್ಮ ಪ್ರಾಣ ಉಳಿಸಲು ಅಸಮರ್ಥವಾಗಿವೆ ಎಂಬುದನ್ನು ನಾವು ಮರೆಯಬಾರದು.

ಮತ್ತೆ ಮನುಷ್ಯ ತನ್ನ ಪ್ರಾಣ ಉಳಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಾನೆ. ಹೇಳಿ, ಸಂತಸ ಪಡಿಸಿ, ಹೆದರಿಸಿ, ಲಂಚ ಕೊಟ್ಟು, ಇತ್ಯಾದಿ!

ಪ್ರಾಣಿಗಳು ಪಾಪ! ಹೇಳಲಾರವು, ತಮ್ಮ ದುಃಖವನ್ನು ತಿಳಿಸಲಾರವು!

ಹಾಗಾದರೆ ಈ ಕಾರಣಕ್ಕೆ ನಾವು ಅವುಗಳು ಜೀವಿಸುವ ಅಧಿಕಾರವನ್ನು ಕಸಿಯಬಹುದೇ?

ಶುದ್ಧ ಆಹಾರ, ಸಸ್ಯಾಹಾರ!

ಮಾನವ ಆಹಾರ, ಸಸ್ಯಾಹಾರ!

Previous ಹನ್ನೆರಡನೆಯ ಶತಮಾನದಲ್ಲಿ ಸಂಗೀತದ ಸ್ಥಿತಿ ನ್ಯೂ ಇಯರ್, ಮತ್ತು ಯುಗಾದಿ Next