ಲಿಂಗಾಯತರು ಶೂದ್ರರೆ?

*

✍ ಜಿ. ಬಿ. ಪಾಟೀಲ್.

೧೮೮೧ರ ಜನಗಣತಿಯಲ್ಲಿ ಲಿಂಗಾಯತರನ್ನು ಶೂದ್ರರನ್ನಾಗಿಸಿದ್ದು ಮೈಸೂರು ರಾಜ್ಯದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆ. ಈ ಜನಗಣತಿಯ ಪರಿಣಾಮವಾಗಿ ಲಿಂಗಾಯತ ಧರ್ಮದಲ್ಲಿ ವೀರಶೈವರು ಮತ್ತೆ ಅಸ್ತಿತ್ವಕ್ಕೆ ಬಂದರು.

೧೮೭೧ರ ಮೈಸೂರು ರಾಜ್ಯದ ಜನಗಣತಿ ನಡೆದದ್ದು ಬ್ರಿಟಿಷ್ ಅಧಿಕಾರಿಯಯಾದ ಲಿಂಡ್ಸೆಯಿಂದ.ಆಗ ಮೈಸೂರು ರಾಜ್ಯ ಇತ್ತು ಮದ್ರಾಸ್ ಪ್ರೆಸಿಡೆನ್ಸಿಯ ನೇರ ಬ್ರಿಟಿಷರ ಆಧಿನದಲ್ಲಿ. ಆಗ ನಡೆದ ಮೈಸೂರ ರಾಜ್ಯದ ಜನಗಣತಿ (೧೮೭೧) ಹಸ್ತಕ್ಷೇಪ ರಹಿತವಾಗಿತ್ತು.ರಾಜ್ಯದ ಜನತೆಯ ಹಿತಾಸಕ್ತಿಗಳ ಅನುಗುಣವಾಗಿತ್ತು. ಪಾರದರ್ಶಕವಾಗಿ ನ್ಯಾಯಯುತವಾಗಿತ್ತು.

ಆದರೆ ಅದು ಒಂದು ವರ್ಗದ ವಿರೋಧಿ ಯಾಗಿತ್ತು. ಶತ ಶತ ಮಾನಗಳಿಂದ ದೇವರು ಮತ್ತು ಅವನನ್ನು ಒಲಿಸಿ ಕೊಳ್ಳುವ ವಿಧ್ಯ ತಮ್ಮ ಸ್ವತ್ತನ್ನಾಗಿ ಮಾಡಿಕೊಂಡವರು ಬ್ರಾಹ್ಮಣರು. ಸಮಾಜದ ಉನ್ನತ ವರ್ಗದವರೆಂದು ಬಿಂಬಿತವಾದ ಇವರಿಗೆ ಇವರ ಸರಿ ಸಮಾನ ಸ್ಥಾನ ಲಿಂಗಾಯತರಿಗೆ ನೀಡಿದ್ದು,ಅದಕ್ಕೆ ಸರಕಾರ ಸಮ್ಮತಿಯ ಮುದ್ರೆ ಒತ್ತಿದ್ದು ಬ್ರಾಹ್ಮಣರಿಗೆ ಅರಗಿಸಿ ಕೊಳ್ಳಲಾಗಲಿಲ್ಲ. ಅದನ್ನು ಪ್ರತಿಭಟಿಸಿ ಬ್ರಿಟಿಷ ಸರಕಾರದ ಕೆಂಗಣ್ಣಿಗೆ ಗುರಿಯಾಗುವದು ಅವರಿಗೆ ಬೇಡವಾಗಿತ್ತು. ಸಮಯ ನೋಡಿ ಚಾಟಿ ಬೀಸುವ ಕಲೆ ಅವರಿಗೆ ಕರಗತ. ಅಂತಹ ಅವಕಾಶಕ್ಕಾಗಿ ಅವರು ಕಾಯ್ದರು ಹತ್ತು ವರ್ಷ.

ರಾಜ್ಯ ಕಳೆದುಕೊಂಡು ಐವತ್ತು ವರ್ಷಗಳ ಕಾಲ ಅಜ್ಞಾತ ವಾಸದಿಂದ ಹೊರಬಂದಿದ್ದರು ಮೈಸೂರಿನ ರಾಜರು. ಕಳೆದುಕೊಂಡ ರಾಜ್ಯದ ಆಡಳಿತ ಮರಳಿ ದೊರಕಿತ್ತು ಇದೆ ಸಮಯದಲ್ಲಿ (೧೮೮೧). ದೀರ್ಘ ಕಾಲ ಅರಸರನ್ನು ಅಜ್ಞಾತ ವಾಸಕ್ಕೆ ತಳ್ಳಿದ ಲಿಂಗಾಯತರು ಅರಸರಿಗೆ ಮಾಡಿದ ಘಾಯ ಇನ್ನೂ ಮಾಸಿರಲಿಲ್ಲ. ಬಾಲ ಕತ್ತರಿಸಲು ಸಿಕ್ಕಿತು ಸುಸಮಯ. ಅದನ್ನು ಪೂರೈಸಿದ ಮೈಸೂರು ರಾಜರ ನಿಷ್ಠ ದಿವಾನ. ಅವನೇ ಆಗತಾನೆ ಅಧಿಕಾರಕ್ಕೆ ಬಂದಿದ್ದ ತಮಿಳು ಭಾಷಿಕ, ವೈಷ್ಣವ ಧರ್ಮದ ದಿವಾನ ಸಿ.ರಂಗಾಚಾರಲು. ಮೈಸೂರು ರಾಜರೂ ಹಿಂದೊಮ್ಮೆ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡು ಆಚರಿಸಿದವರು. ಆದರೆ ಇಂದು ಅವರು ಲಿಂಗಾಯತರ ವಿರೊಧಿಗಳಾಗಲು ಈ ಎರಡು ಘಟನೆಗಳು ಮುಖ್ಯಕಾರಣ ಗಳಾಗಿದ್ದವು.

ನಗರ ಕ್ರಾಂತಿ

ಟಿಪ್ಪು ಮುರಣದ ನಂತರ ಮೈಸೂರ ರಾಜ್ಯ ಒಡೆದು ಹೋಗಿತ್ತು. ಟಿಪ್ಪುಸುಲ್ತಾನನ ಆಧಿನದ ಸಾಮಂತ ರಾಜರು ಸ್ವತಂತ್ರತೆ ಘೊಶಿಸಿ ಕೊಂಡಿದ್ದರು. ಮೈಸೂರ ರಾಜ್ಯದ ಒಡೆತನವನ್ನು ಪುನಃ ಬ್ರಿಟಿಷರು ಒಡೆಯರಆಧಿನಕ್ಕೆ ನೀಡಿದರು. ಸಿಂಹಾಸನ ದಕ್ಕಿತು ಮುಮ್ಮಡಿ ಕೃಷ್ಣರಾಜ ಒಡೆಯರರಿಗೆ (೧೭೯೯-೧೮೩೧).ಅನುಭವಿ ಪೂರ್ಣಯ್ಯನವರನ್ನು ದಿವಾನರನ್ನಾಗಿ ನೇಮಕ ಮಾಡಿದರು ಆಂಗ್ಲರು. ಟಿಪ್ಪುಸುಲ್ಥಾನರ ಕಾಲದಿಂದಲೂ ಮಂತ್ರಿಯಾಗಿ ರಾಜ್ಯವನ್ನು ಬಲ್ಲವರಾಗಿದ್ದರು ಪೂರ್ಣಯ್ಯನವರು. ಅವರು ರಾಜ್ಯವನ್ನು ಮತ್ತೆ ಗಮನಾರ್ಹ ರೀತಿಯಲ್ಲಿ ಪುನಃಶ್ಚೇತನ ಗೊಳಿಸಿದರು. ಆದರೆ ಆ ಸಂತೋಷ ಬಹಳ ದಿವಸ ಉಳಿಯಲಿಲ್ಲ. ಅವರ ನಿಧನದ ನಂತರ (೧೮೧೨) ಮೈಸೂರಿನ ಆಡಳಿತ ಮತ್ತೆ ಹಳಿ ತಪ್ಪಿದ ರೈಲಿನಂತಾಯಿತು. ಮುಮ್ಮುಡಿ ಕೃಷ್ಣರಾಜ ಒಡೆಯರ ರೊಬ್ಬರು ವಿಲಾಸಿ ಅರಸರು, ದಿವಾನ ಪೂರ್ಣಯ್ಯನವರು ಕಾಲವಾದ ನಂತರ ರಾಜ್ಯದ ಆಡಳಿತ ಬಿಗು ಕಳೆದು ಕೊಂಡಿತ್ತು. ಇದರ ಪ್ರಯೋಜನ ಪಡೆದ ಅಧಿಕಾರಿಗಳಾದರು ಲಂಚ ಕೊರರು ವಿಷಯ ಲಂಪಟರು. ಅರಮನೆಯ ಖರ್ಚು ವೆಚ್ಚಗಳು ವಿಪರೀತ ಎರಿದವು. ಖಜಾನೆ ಭರದಿಂದ ಖಾಲಿಯಾಗುತ್ತಿತ್ತು. ಸೈನಿಕರ ಸಂಬಳ ಕೂಡ ಕೊಡಲಾರದ ಸ್ಥಿತಿಗೆ ಬಂದಿತ್ತು ಮೈಸೂರ ರಾಜ್ಯ . ಅದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು.

ಖಜಾನೆ ತುಂಬಲು ತಂದರು ಹೊಸ ಕಾನೂನು. ಹೊಸ ತೆರಿಗೆ ಪದ್ದತಿಯಾದ ಸೂರ್ತಿ (shurtee) ಮತ್ತು ಸಯಾರ (sayar).ಈ ಕಾಯದೆ ಅಡಿಯಲ್ಲಿ ಸೇರಿದ ಮತ್ತೊಬ್ಬ ಮದ್ಯವರ್ತಿ. ತೆರಿಗೆ ವಸೂಲಿಗೆ ನೇಮಿಸಿದರು ಗುತ್ತಿಗೆದಾರನನ್ನು.ಗುತ್ತಿಗೆದಾರ ಬಿಡ್ ಮಾಡಿ ಪಡೆಯಬೇಕಾಗಿತ್ತು ಗುತ್ತಿಗೆಯನ್ನು. ಸಲ್ಲಿಸಬೇಕಾಗಿತ್ತು ರಾಜ್ಯದ ಒಟ್ಟು ತೆರಿಗೆಯನ್ನು ಅರಸೊತ್ತಿಗೆಗೆ.ತೆರಿಗೆಯೊಂದಿಗೆ ತನ್ನ ಲಾಭಾಂಶವನ್ನು ಸೇರಿಸಿ ಒಟ್ಟು ತೆರಿಗೆಯ ಮೊತ್ತವನ್ನು ಸಂಗ್ರಹಿಸ ಬೇಕಾಗಿತ್ತು ತೆರಿಗೆದಾರರಿಂದ. ಗುತ್ತಿಗೆದಾರನಾದ ಸುಲಿಗೆ ಕೊರ. ಇದರಿಂದ ಜರ್ಜಿರಿತನಾದನವನು ರೈತ. ಸಾಮಾನ್ಯವಾಗಿ ಲಿಂಗಾಯತನು ಕೃಷಿಕ, ಅವರಲ್ಲಿ ಕೆಲವರು ವ್ಯಾಪಾರಿಗಳು. ಅಸಾಹಯಕನಾದ ಕೃಷಿಕ ತನಗಾದ ತೊಂದರೆಗಳನ್ನು ಸರಕಾರದ ಗಮನಕ್ಕೆ ತರಲು ಪ್ರತಿಭಟನೆಯ ಹಾದಿ ತುಳಿದ, ರೈತರ ಸಹಾಯಕ್ಕೆ ಬಂದ ಕೆಳದಿ ಸಂಸ್ಥಾನದ ಅಡಿಯಲ್ಲಿದ್ದ ಹೊಸನಗರದ ಬೂದಿ ಬಸವಪ್ಪ. ಅವನೊಬ್ಬ ಲಿಂಗಾಯತ ನಾಯಕ ಕೆಳದಿ ಸಂಸ್ಥಾನದಲ್ಲಿ. " ಹೊಸನಗರದ ರಾಜಕುಮಾರನಂತೆ ನಟಿಸುತ್ತಿದ್ದ ಬೂದಿ ಬಸಪ್ಪ ಇವರು ಬಂಡುಕೊರರೊಡನೆ ಸೇರಿಕೊಂಡು ಬಂಡಾಯವನ್ನು ದ್ವಿಗಣ ಗೊಳಿಸಿದರು " ಇಂದಿನ ಚಾಮರಾಜ ನಗರ ಗ್ಯಾಸೆಟಿಯರ್ ನಲ್ಲಿದೆ ಉಲ್ಲೇಖ .(ಆದರೆ ಇದೆ ಗ್ಯಾಸೆಟಿಯರ ಮೌನ ವಹಿಸುತ್ತಿದೆ ಸುಮಾರು ೭೦೦ ಜನ ಕೃಷಿಕರ ಮರಣದ ಬಗ್ಗೆ , ಬಂಡಾಯದ ತೀವೃತೆಯ ಬಗ್ಗೆ ಒಂದಕ್ಷರ ಕಾಣಿಸಿಲ್ಲ ಇದೆ ಗ್ಯಾಸೆಟಿಯರಲ್ಲಿ).

ಬಸವಪ್ಪನ ಮುಂದಾಳತ್ವದ ಫಲವಾಗಿ ಪ್ರತಿಭಟನೆ ತಾರಕಕ್ಕೆರಿತು. ರಾಮರಾವ ಮತ್ತು ವೆಂಕಟ ಕೃಷ್ಣಯ್ಯನ ನೆತ್ರತ್ವದಲ್ಲಿ ಬಂತು ಸೇನೆ ಬಂಡುಕೊರರ ಸದೆಬಡಿಯಲು. ಕುಟ್ಟಮ ಎಂಬ ಗಲಾಟೆಯಲ್ಲಿ ಹನ್ನೆರಡು ಜನ ರೈತರು ಮಡಿದರು,ಗಾಯಾಳುಗಳು ಅನೇಕರು. ಇದರಿಂದ ಆಕ್ರೋಶಗೊಂಡ ಬಸವಪ್ಪ ನಾಯಕ ಮತ್ತಿಷ್ಟು, ಹೋರಾಟಕ್ಕೆ ನೀಡಿದ ಸಮರ್ಥ ನಾಯಕತ್ವ, ಹಬ್ಬಿತು ಬೆಂಕಿ ಮೈಸೂರ ರಾಜ್ಯದಲ್ಲಿ ಇದೆಲ್ಲವನ್ನು ದೂರದಿಂದಲೇ ಗಮನಿಸುತ್ತಿದ್ದರು ಬ್ರಿಟಿಷರು.ರಕ್ಷಿಸಬೇಕಾದ ಮೈಸೂರು ರಾಜ ಭಕ್ಷಕನಾದ, ಸಾರಿದ ಆಂತರಿಕ ಯುದ್ದ ತನ್ನದೇ ಪ್ರಜೆಗಳ ಮೇಲೆ. ಸುಮಾರು ಏಳುನೂರ ಜನರು ಕಳೆದು ಕೊಂಡರು ತಮ್ಮ ಅಮೂಲ್ಯ ಪ್ರಾಣಗಳನ್ನು. ಆಗ ಕಣ್ಣು ತೆರೆದರು ಆಂಗ್ಲರು. ಬಂದ ಮದರಾಸಿನ ರಾಜ್ಯಪಾಲ ಲೂಷಿಂಗಟನ್ ಮೈಸೂರಿಗೆ ."ರಾಜರ ದುರಾಡಳಿತ ಹಾಗು ಕಿರುಕುಳಕ್ಕೆ ಗುರಿಯಾದ ಜನರು ರಾಜ್ಯದಲ್ಲಿ ಉಂಟಾಗಿದ್ದ ವಿಷಮ ಆರ್ಥಿಕ ಹಿನ್ನಡೆಯ ವಿರುದ್ದ ಬಂಡೆಳುತ್ತಿರುವರೆಂದು" ಶರಾ ಬರೆದನು. (ಚಾ.ಜಿ.ಗೆ. ಪು.ಸಂ ೧೦೦) . ಅಕ್ಟೋಬರ್ ೨೧,೧೮೩೧ ರಂದು ಮೈಸೂರ ರಾಜನಿಂದ ಮರಳಿ ಪಡೆದರು ರಾಜ ಸನ್ನದನ್ನು ಬ್ರಿಟಿಷರು. ಲಾರ್ಡ ಬೆಂಟಿಂಕ ಅದಕ್ಕೊತ್ತಿದ ತನ್ನ ಒಪ್ಪಿಗೆಯ ಮುದ್ರೆಯನ್ನು. ಸಂಪನ್ನವಾಯಿತು ನಗರ ಕ್ರಾಂತಿ. ಪ್ರಾರಂಭವಾಯಿತು ಮೈಸೂರ ಅರಸರ ಅಜ್ಞಾತ ವಾಸ .

ಇದಕ್ಕೂ ಮುಂಚೆ ಇನ್ನೊಂದು ಕ್ರಾಂತಿ ಯಾಗಿತ್ತು ಮೈಸೂರಿನಲ್ಲಿ ಅದು ಕೂಡ ತೆರಿಗೆಯ ವಿಷಯದಲ್ಲಿಯೇ.ಇದು ಕೂಡ ಘಟಿಸಿದ್ದು ಲಿಂಗಾಯತರಿಂದಲೇ ಅದೇ ಜಂಗಮ ಕ್ರಾಂತಿ ಚಿಕ್ಕದೇವರಾಯನ ಕಾಲ (೧೬೭೮), ಅಂದು ರಾಜ ಹೆಚ್ಚಿಸಿದ ಕರ (Tax). ಹೆಚ್ಚಿನ ಕರಭಾರ ಸಹಿಸಲಾರದಾದರು ಬಡ ರೈತರು.ಸಹಿಸದಾದ ರಾಜ, ಮಾಡಿದ ಕಟ್ಟಪ್ಪಣೆ ತೆರಿಗೆ ಸಲ್ಲಿಸುವಂತೆ. ರೈತರು ತೊಡಿಕೊಂಡರು ತಮ್ಮ ಕಷ್ಟಗಳನ್ನು ಜಂಗಮ ಗುರುಗಳಲ್ಲಿ. ಜಂಗಮರು ನಿಂತರು ತನ್ನ ಭಕ್ತನಾದ ರೈತನ ಸಹಾಯಕ್ಕೆ.ಬಲ ಬಂತು ಬಡ ರೈತನಿಗೆ,ಏರಿತು ಕ್ರಾಂತಿಯ ಕಾವು, ತಿರುಗಿ ಬಿದ್ದರು ಇವರೆಲ್ಲ ಅಧಿಪತ್ಯದ ವಿರುದ್ದ.ತಲುಪಿತು ಪರಸ್ಥಿತಿ ವಿಕೋಪಕ್ಕೆ. ರಾಜ ನಿಶ್ಚಯಿಸಿದ ಬದ್ದಿ ಕಲಿಸಲು, ರಾಜಾಜ್ಞೇ ಪಾಲಿಸದ ಪ್ರಜೆಗಳಿಗೆ. ಸಂಧಾನದ ನೆಪದಲ್ಲಿ ಕರೆದ ರಾಜ್ಯದ ಎಲ್ಲ ಜಂಗಮರನ್ನು ನಂಜನಗೂಡಿಗೆ. ಕೂಡಿದ ಜಂಗಮರ ಮೇಲೆ ಬಿಸಿದ ತನ್ನ ರಕ್ತದಾಹದ ಕತ್ತಿಯನ್ನು. ಚಂಡಾಡಿದ ಸಂಧಾನಕ್ಕೆ ಬಂದ ೪೮೭ ಜಂಗಮರ ಶಿರಗಳನ್ನು. ಎತ್ತಿ ಹಾಕಿದ ಎಲ್ಲರ ಶಿರಗಳನ್ನು ಒಂದೇ ಬಾವಿಯಲ್ಲಿ. ಇಂದೂ ಇದೆ *ಶಿರೋಬಾವಿ*. ರಾಜ ಹತ್ತಿಕ್ಕಿದ ದಂಗೆಯನ್ನು ತನ್ನದೆ ಪ್ರಜೆಗಳನ್ನು ಕೊಂದು. ಸಮಾಪ್ತ ಗೊಳಿಸಿದ *ಜಂಗಮ ಕ್ರಾಂತಿ* ಯನ್ನು. ಇದು ಕೂಡ ಸಿಗದು ಬ್ರಾಹ್ಮಣ ಲಿಖಿತ ಮೈಸೂರ ಇತಿಹಾಸದಲ್ಲಿ. ಆದರೆ ಧಾಖಲಿಸಿದ್ದಾನೆ ಕರ್ನಲ್ ಮಾರ್ಕ್ ವಿಲ್ಕ್ಸ ತನ್ನ ಹಿಸ್ಟರಿ ಆಫ್ ಮೈಸೂರಿನಲ್ಲಿ. ಇದು ಬೇಳಕು ಕಂಡಿದೆ ಗ್ಯಾಸೇಟಿಯರ ಆಫ್ ಮೈಸೂರಿನಲ್ಲಿ ಸಹ. ಭಾರತಿಯರೆಲ್ಲರಿಗೂ ಗೊತ್ತು ಜಾಲಿಯನ್ ವಾಲಬಾಗ ಖಾಂಡ ಕಾರಣ ಅದರ ಕರ್ತ ಆಂಗ್ಲ ಅಧಿಕಾರಿ. ತದ್ರೂಪದ ಘಟನೆ ಘಟಿಸಿದೆ ನಮ್ಮದೆ ರಾಜ್ಯ ಮೈಸೂರಿನಲ್ಲಿಯೂ ಕೂಡ, ಅದರ ಕರ್ತರು ನಮ್ಮ ಮೈಸೂರಿನ ರಾಜರು. ಅಲ್ಲಿ ಸಂತ್ರಸ್ತ ಸಿಖ್. ಇಲ್ಲಿ ಸಂತ್ರಸ್ತ ಲಿಂಗಾಯತ. ಇಬ್ಬರು ಅಲ್ಪಸಂಖ್ಯಾತ ಧರ್ಮದವರು.

ಇವೆರಡೂ ಕ್ರಾಂತಿಗಳ ಹಿನ್ನೆಲೆಯಲ್ಲಿ ಲಿಂಗಾಯತರನ್ನು ಸದೆ ಬಡಿಯಲು ನಿರ್ಧರಿಸಿದ್ದರು ಮೈಸೂರಿನ ಒಡೆಯರು. ರಾಜರು ಅನುಭವಿಸಿದ್ದ ಕಷ್ಟಗಳ ಪ್ರತಿಕಾರಕ್ಕಾಗಿ ಕಾಯುತ್ತಿದ್ದ ಹೊಸ ಮೈಸೂರಿನ ದಿವಾನ ಸಿ.ರಂಗಾಚಾರಲು. ಅದು ಅವನಿಗೆ ಸಿಕ್ಕಿತು ೧೮೮೧ ಜನಗಣತಿ ವಿಷಯುದಲ್ಲಿ. ದಿವಾನರು ಕೊಟ್ಟರು ಸೂಚನೆ. " ಲಿಂಗಾಯತರನ್ನು ಶೂದ್ರ ವರ್ಗಕ್ಕೆ ಸೇರಿಸಿ".
ವೈಷ್ಣವ ಬ್ರಾಹ್ಮಣನಾದ ಸಿ.ರಂಗಾಚಾರಲು ದ್ವೆಷಿಸುತ್ತಿದ್ದ ಬ್ರಾಹ್ಮಣ ದ್ವೆಷಿ ಲಿಂಗಾಯತರನ್ನು. ತಮಿಳ ಬಾಷಿಕನಿಗೆ ಬೇಕಾಗಿರಲಿಲ್ಲ ವಚನ ಮೂಲದ ಕನ್ನಡ ಭಾಷೆಯ ಮಣ್ಣಿನ ಧರ್ಮ ಸ್ವತಂತ್ರವಾಗುವದು. ದ್ವೇಷಿಸಿದ ಲಿಂಗಾಯತ ಸಿದ್ಧಾಂತವನ್ನು ಅರಿತಿದ್ದರೂ ಅರಿಯದಂತಾದವನಂತೆ ಪ್ರದರ್ಶಿಸಿಸಿದ ತನ್ನ ಜಾಣ ಕುರುಡು, ಗಾಳಿಗೆ ತೂರಿದ ಲಿಂಗಾಯತ ಧರ್ಮ ಸಿದ್ಧಾಂತಗಳನ್ನು,ಭಾಷೆ ಅರಿಯದ ದೂರ ದೇಶದ ಬ್ರಿಟಿಷರು ಕೂಡ ಅಭ್ಯಶಿಸಿದ್ದರು ಲಿಂಗಾಯತ ಸಿದ್ಧಾಂತಗಳನ್ನು. ಅವರು ಮೊದಲು ಸಾರಿದ್ದರು ಲಿಂಗಾಯತರು ಸ್ವತಂತ್ರ ಧರ್ಮದವರೆಂದು. ಇದರ ಹಿಂದಿನ ಜನಗಣತಿಯಲ್ಲಿದ್ದ (೧೮೭೧) ಇಪ್ಪತ್ತೆರಡು ಉಪ ಪಂಗಡಗಳನ್ನು ಇಳಿಸಿದನಿವನು ಆರಕ್ಕೆ, ಕೂಡ್ರಿಸಿದ ಲಿಂಗಾಯತರನ್ನು ಶೂದ್ರರಲ್ಲಿ ಮೊದಲಿಗರನ್ನಾಗಿ. ಬ್ರಾಹ್ಮಣರ ಸಮಾನರೆಂದು ಬೀಗುತ್ತಿದ್ದರು ಲಿಂಗಾಯತರು ಈ ಹಿಂದೆ. ನೀರ ಮೇಲಿನ ಗುಳ್ಳೆಯಂತಿತ್ತು ಅವರ ಸ್ಥಾನ. ಕಾಲ್ಪನಿಕ ಸ್ಥಾನ ಕಳೆದುಕೊಂಡರು ಶ್ರೇಷ್ಠ ಜಾತಿ ಎಂದು ಮೆರೆಯುತ್ತಿದ್ದ ಆರಾದ್ಯ ವೀರಶೈವರು . ಕುದ್ದು ಹೋದರವರು ದಿವಾನರ ಹೊಡೆತದಿಂದ. ಇದರಿಂದ ಮತ್ತಷ್ಟು ಕುಲಗೆಡ ಲಾರಂಬಿಸಿತು ಲಿಂಗಾಯತ ಧರ್ಮ. ರಿಪೇರಿಯಾಗದಷ್ಟು ಮೈಸೂರು ರಾಜ್ಯದಲ್ಲಿ.
೧೮೮೧ ಜನಗಣತಿಯ ದುಷ್ಪರಿಣಾಮಗಳು. ದಿವಾನ ಸಿ.ರಂಗಾಚಾರ್ಲು ಬದಕಲಿಲ್ಲ ಬಹಳ ದಿನ, ಜನಗಣತಿಯ ಕೊನೆಯ ವರದಿಯನ್ನು ಬರೆಯದೆ ಅಸ್ತಂಗತನಾದ (೧೮೮೩).ಅದನ್ನು ಬರೆಯಬೇಕಾಯಿತು ಆಂಗ್ಲ ಅಧಿಕಾರಿ ರೈಸ್ ಲೇವಿಸ್. ವರದಿ ಬರೆಯಬೇಕಾದ ಲೇವಿಸ್ಗೆ ಕಂಡಿತು ದಿವಾನನ ಪ್ರತಿಕಾರದ ಅಂತರಂಗ. ಆದರೆ ಸಮಯ ಮೀರಿತ್ತು. ಬ್ರಿಟಿಷರಿಂದ ರಾಜ್ಯ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು ಜನಗಣತಿಯ ಕಾರ್ಯ ಈಗಾಗಲೇ. ವರದಿಯನ್ನು ಜಾರಿಗೆ ಗೊಳಿಸದೆ ಗತ್ಯಂತರವಿರಲಿಲ್ಲ ಬ್ರಿಟಿಷ ಅಧಿಕಾರಿಗಳಿಗೆ. ಆದರೆ ತನ್ನ ಅಸಮಧಾನವನ್ನು ಮುಚ್ಚಿಡಲಿಲ್ಲ ಬ್ರಿಟಿಷ ಅಧಿಕಾರಿ ಬಿ.ಎಲ್.ರೈಸ.. "Lingayit arose in 12th century. Its founder was Basavanna.the prime minister of kalachuri King Bijjala of Kalyan,whose rule extended over northern parts of Mysore.Basavanna was aradhya Brahmana,but refised to wear Bhramanical thread and rejected the authority ofthe Vedas and the Brhamans, together with observances of caste,piligrimage and penace"
ಈ ಮೇಲಿನ ರೈಸ್ ನ ಹೇಳಿಕೆಯು ಸ್ಪಷ್ಟವಾಗಿ ಹೇಳುತ್ತಿದೆ ಲಿಂಗಾಯತರು ಚಾತುರ್ ವರ್ಣದಲ್ಲಿ ಬರಲಾರರೆಂದು.

ದಿವಾನ ಬದಲಾಯಿಸಿದ್ದ ತನ್ನ ಹಿಂದಿನ ಆಂಗ್ಲ ಅಧಿಕಾರಿಗಳ ಸೂತ್ರಗಳನ್ನು. ಹಿಂದಿನ ಐದು ವಿಭಾಗಗಳನ್ನು ಎರಿಸಿದ ಎಂಟಕ್ಕೆ.

೧) ಹಿಂದು
೨) ಮುಸ್ಲಿಂ
೩) ಕ್ರಿಶ್ಚಿಯನ್
೪) ಬೌದ್ದ
೫) ಪಾರ್ಸಿ
೬) ಸಿಕ್ಕ
೭) ಜಿವ್ಸ (jews)
೮) ಇತರರು.

ಹಿಂದು ಒಂದು ಧರ್ಮವಲ್ಲ ಅದೊಂದು ಸಂಸ್ಕೃತಿ ಎಂದು ವಾದಿಸಿದ್ದ ಲಿಂಡ್ಸೇಯ ವಿಚಾರವನ್ನು ಒಪ್ಪಲಿಲ್ಲ ೧೮೮೧ ಜನಗಣತಿಯಲ್ಲಿ. ಬೌದ್ದರನ್ನು ಜೈನರಿಂದ ಬೇರ್ಪಡಿಸಿ ಸ್ವತಂತ್ರ ಧರ್ಮವೆಂಬ ಮನ್ನಣೆ ನೀಡಿದ ಬೌದ್ಧರಿಗೆ. ೧೮೭೧ ರ ಜನಗಣತಿಯಲ್ಲಿ ವೈದಿಕ ವರ್ಣಾಶ್ರಮದ ಆಧಾರದಲ್ಲಿ ಕ್ಷತ್ರಿಯರಾಗಿದ್ದ ಸಿಕ್ಕ್ ರಿಗೆ ಸ್ವತಂತ್ರ ಧರ್ಮದ ರಕ್ಷೆ. ಈ ಹಿಂದೆ ಇತರೆ ಕಾಲ್ಂಗಳಲ್ಲಿದ್ದ ಸ್ವತಂತ್ರ ಧರ್ಮವಾದ ಜೈನ ಧರ್ಮವನ್ನು ಮತ್ತೆ ಸಿಲುಕಿಸಿದ ಚಾತ್ರುವರ್ಣದಲ್ಲಿ. ಅವರಿಗೆ ನೀಡಿದ ಬ್ರಾಹ್ಮಣರ ನಂತರದ ಸ್ಥಾನವನ್ನು.

ಲಿಂಗಾಯತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಅವರನ್ನು ವೈದಿಕರ ಚಾತುರ್ ವರ್ಣಕ್ಕೆ ತಳ್ಳಿ ಶೂದ್ರರನ್ನಾಗಿಸಿ ಪ್ರತಿಕಾರ ತಿರಿಸಿಕೊಂಡ ಹೊಸ ದಿವಾನ. ಲಿಂಗಾಯತರಲ್ಲಿ ಆರು ವರ್ಗಗಳನ್ನು ಮಾತ್ರ ಗಣನೆಗೆ ತಗೆದುಕೊಂಡ. ಅವರನ್ನು ತಳ್ಳಿದ ಶೂದ್ರವರ್ಗಕ್ಕೆ, ಶಿವಾಚಾರರು.ಆರಾದ್ಯ, ಅಯ್ಯ, ಶಿವಾಚಾರ ಗೌಡ, ಶಿವಾಚಾರ ಬಣಜಿಗ, ಶಿವಾಚಾರ ಗಾಣಿಗ ಮತ್ತು ಇತರ ಶಿವಾಚಾರರು ಎಂದು ವಿಂಗಡಿಸಿದ ಇವರನ್ನು.ಲಿಂಗಾಯತ ಸಿದ್ಧಾಂತವನ್ನು ಅಲ್ಲಗಳೆದ ದಿವಾನ ಕೊಡಲಿಲ್ಲ ಅದಕ್ಕೆ ಕಾರಣಗಳನ್ನು.ವಿಶ್ಲೇಷಿಸಲೇ ಇಲ್ಲ ತನ್ನ ವರ್ಗ ನೀತಿಯನ್ನು. ಸಿದ್ದಪಡಿಸಿದ ವರದಿಯನ್ನು ಸಂಕಲನ ಮಾಡದೆ, ಅದನ್ನು ಜಾರಿಗೆ ತರುವ ಮುಂಚೆಯೇ ಕೈಕೊಂಡ ಮರಣ ಯಾತ್ರೆ (೧೮೮೩). ಇಂತಹ ಒಂದು ಅವೈಜ್ಞಾನಿಕ ವರದಿಗೆ ಸರಕಾರದ ಮುದ್ರೆ ಒತ್ತಬೇಕಾಯಿತು ಬ್ರಿಟಿಷ ಅಧಿಕಾರಿಗಳಿಗೆ. ಮುಂದುವರೆದು ರೈಸ್ ಅಭಿಪ್ರಾಯ ಪಡುತ್ತಾರೆ "ದಿವಾನನ ಈ ನಡತೆಯು ಪೂರ್ವಾಗ್ರಹ ಪೀಡಿತನೆಂಬ ವಾಸನೆ ಬರುತ್ತಿದೆ. ಇದಕ್ಕೆ ನನ್ನ ಸಹಮತ ವಿರದಿದ್ದರೂ ನಾನು ಅವರು ಬರೆದ ಷರಾವನ್ನು ಬದಲಿಸದೆ ಒಪ್ಪಿಕೊಳ್ಳುತ್ತಿದ್ದೆನೆಂದು" ಬರೆಯುತ್ತಾರೆ.

ಸಿ.ರಂಗಾಚಾರಲು ಅನೇಕ ತಪ್ಪುಗಳನ್ನು ಮಾಡುತ್ತಾನೆ. ಲಿಂಗಾಯತ ಧರ್ಮದ ಸಿದ್ಧಾಂತವನ್ನು ಗಾಳಿಗೆ ತುರುತ್ತಾನೆ. ಯಾವ ವರ್ಗ ವರ್ಣವನ್ನು ನಿಷೇಧಿಸಿ ಹೋರ ಬಂದ ಲಿಂಗಾಯತರಿಗೆ ಮತ್ತೆ ಅದೆ ಕೂಪಕ್ಕೆ ತಳ್ಳುತ್ತಾನೆ. ತನ್ನ ಉಚ್ಚ ಕುಲದ ಅರಸರು ಒಂದಾನೊಂದು ಕಾಲಕ್ಕೆ ಲಿಂಗಾಯತ ಧರ್ಮದವರಾಗಿ ತನ್ನದೆ ರಾಜ್ಯವನ್ನು ಆಳಿದ್ದು ಮರೆಯುತ್ತಾನೆ.(ಮೈಸೂರಿನ ಅರಸರು ಹದಿನಾಲ್ಕನೆಯ ಶತಮಾನದಿಂದ ೧೬೧೦ ರವರೆಗೆ ಲಿಂಗಾಯತ ಧರ್ಮವನ್ನು ಪಾಲಿಸುತ್ತಿದ್ದರು) ತನ್ನದೆ ವೈದಿಕ ಸೂತ್ರ ದನ್ವಯ ಶೂದ್ರ ಹೇಗೆ ರಾಜ್ಯವಾಳಬಲ್ಲ ?.ಅವನ್ಹೇಗೆ ಜನರ ಪ್ರಭುವಾಗಬಲ್ಲ? ಇವೆಲ್ಲ ಪ್ರಶ್ನೆಗಳಿಗೆ ಉತ್ತರಿಸಿಲ್ಲ ದಿವಾನ. ಬ್ರಾಹ್ಮಣರಷ್ಟೇ ಶಿಕ್ಷಣ ಪಡೆದ ಲಿಂಗಾಯುತರು ಹನ್ನೆರಡನೆಯ ಶತಮಾನದಿಂದ ರಚಿಸಿದ ಸಾಹಿತ್ಯವನ್ನು ಗಣನೆಗೆ ತಗೆದುಕೊಳ್ಳದೆ ಹೋದ. ರಾಜ್ಯದ ಎರಡನೆಯ ಅತಿ ದೊಡ್ಡ ಜನಸಂಖ್ಯೆಯನ್ನು ಅವಮಾನಿಸಿದರೆ ಮುಂದಾಗ ಬಹುದಾದ ಅನಾಹುತಗಳ ಅರಿವಿಲ್ಲದವನಾದ ದಿವಾನ. ತಪ್ಪುಗಳ ಪಟ್ಟಿಯು ದೊಡ್ಡದಾಗಿದೆ ಲಿಂಗಾಯತ ಧರ್ಮದ ಕೆಲ ಉಪಜಾತಿಗಳಾದ ಜಂಗಮ,ಲಿಂಗಧಾರಿ, ಶಿವಾಚಾರಿ, ಲಿಂಗಾಯತ ಎಂದು ಕೊಂಡಿರುವ ವೃತ್ತಿನಿರತ ಸಮಾಜದ ಪ್ರಜೆಗಳನ್ನು ಯಾವ ಕಾಲ್ಂನಲ್ಲಿ ಸೇರಿಸಿದೆ ಅವರ ಸಂಖ್ಯೆಎಷ್ಟು ಎಂಬುದನ್ನು ಕೂಡ ತಿಳಿಸಲಿಲ್ಲ.

೧೮೮೧ರ ಜನಗಣತಿಯ ಮೈಸೂರು ರಾಜ್ಯದ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆ. ಈ ಜನಗಣತಿಯ ಪರಿಣಾಮ ಮೈಸೂರು ರಾಜ್ಯದ ಒಂದು ಶಾಶ್ವತವಾದ ಸಮಸ್ಯೆಯನ್ನು ಹುಟ್ಟುಹಾಕಿತು.

ವೀರಶೈವರು ಜಾಗ್ರತಿ ಆರಂಭವಾಯಿತು ಪಿ.ಆರ್. ಕರಿಬಸವಶಾಸ್ತ್ರಿ ಮತ್ತು ಯಜಮಾನ ವೀರಸಂಗಪ್ಪ ಮತ್ತಷ್ಟು ಕುಲಗೆಡಿಸಿದರು ಮುಂದಿನ ದಿನಗಳಲ್ಲಿ ಲಿಂಗಾಯತ ಧರ್ಮವನ್ನು ರಿಪೇರಿ ಯಾಗದಷ್ಟು ಮೈಸೂರು ರಾಜ್ಯದಲ್ಲಿ ಕೆಡಿಸಿಬಿಟ್ಟರು.

*
ಪರಿವಿಡಿ (index)
Previousಉದಿಸಿ ಬಂದ ಲಿಂಗಾಯತ ಧರ್ಮಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನNext
*