Previous ಪುಟ್ಟರಾಜ ಗವಾಯಿ ಲಿಂಗಾಯತ ಸ್ವತಂತ್ರ ಧರ್ಮ Next

ಲಿಂಗಾಯತ ಧರ್ಮ ಮಾನ್ಯತೆ

*

ಧರ್ಮ ಮಾನ್ಯತೆಯು ಮೂರು ಮಜಲುಗಳನ್ನು ಒಳಗೊಂಡಿದೆ. ಸಾಂಸ್ಥಿಕ(ಸರಕಾರ) ಮಾನ್ಯತೆ, ಸಾಹಿತ್ಯಿಕ ಮಾನ್ಯತೆ ಹಾಗು ಸಾಮಾಜಿಕ ಮಾನ್ಯತೆ. ಈ ಮೂರು ಒಂದಕ್ಕೊಂದನ್ನು ಪೂರಕವಾಗಿವೆ. ಲಿಂಗಾಯತವು ಬಸವ ಸ್ಥಾಪಿತ ಸ್ವತಂತ್ರ ಧರ್ಮ ಆಗಿದ್ದರೂ ಕೂಡ ಮಾನ್ಯತೆ ಹೊಂದದಿರುವುದು ವಿಪರ್ಯಾಸ.

ಮಾನ್ಯತೆಯ ಆಗ್ರಹ ಸ್ವಾಭಾವಿಕ ಹಾಗು ಅನಿವಾರ್ಯ

ಸಾಹಿತ್ಯಿಕ ಸ್ವಾಯತ್ತತೆ ಹೊಂದಿಯೂ ಪರಿಜ್ಞಾನ ಇಲ್ಲದ ಅನುಯಾಯಿಗಳು, ಸಾಮಾಜ ವ್ಯವಸ್ಥೆಯ ಪರಿಪಾಲನೆ ಜವಾಬ್ದಾರಿ ಹೊಂದಿರುವ ಗುರುಗಳ ಬದ್ದತೆಯ ಕೊರತೆ, ರಾಜಕೀಯ ನಾಯಕರ ದೂರದೃಷ್ಟಿಯ ಅಭಾವ ಸ್ವಾರ್ಥ ಚಿಂತನೆ, ಇವುಗಳೆ ಲಿಂಗಾಯತವನ್ನು ಮಾನ್ಯತೆಯಿಂದ ದೂರ ತಳ್ಳಿವೆ.

ಅಷ್ಟಾವರಣ, ಪಂಚಾಚಾರ, óಷಟಸ್ಥಲ, ಕಾಯಕ ದಾಸೋಹ, ಅನುಭವ ಮಂಟಪ, ಮಾನವೀಯತೆ ಹಾಗು ನೈತಿಕತೆಯ ಮೇರು ಪರ್ವತ ವಚನ ಸಾಹಿತ್ಯ ಮುಂತಾದ ಅಪಾರ ದಾರ್ಶನಿಕ ಸಂಪತ್ತು ಹೊಂದಿದ್ದೂ ಸ್ವಂತಿಕೆಗಾಗಿ ಹೋರಾಡುವ ಅನಿವಾರ್ಯತೆ ಬಂದೊದಗಿದೆ.

ನಮಗೆ ಲಿಂಗವುಂಟು,
ನಾವು ಲಿಂಗವಂತರೆಂದು ನುಡಿವರು.
ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ .
ಈ ಮಂಗ ಮಾನವರ ಏನೆಂಬೆ ಕಲಿದೇವಯ್ಯ -ಮಡಿವಾಳ ಮಾಚಿದೇವ -ಸವಸ 8/637

ಲಿಂಗಾಯತಕ್ಕೆ ರಾಜಾಶ್ರಯ ಹಿಂದೆಂದೂ ದೊರೆತಿಲ್ಲ. ಇಂದಿನ ದಿನಮಾನಗಳಲ್ಲಿ ರಾಜಕಿಯದಲ್ಲಿರುವವರ ಬದ್ಧತೆಯ ಕೊರತೆ, ಸ್ವಾರ್ಥಸಾಧನೆ, ಸ್ವಹಿತಾಸಕ್ತಿ ಮತ್ತು ಬೆಂಬಲಿಗರಿಗೆ ದಾರಿತಪ್ಪಿಸಿ ಅಧಿಕಾರ ಪಡೆಯುವ ಕುತಂತ್ರಗಾರಿಕೆ ಇತ್ಯಾದಿ ಕಾರಣಗಳಿಂದ ಲಿಂಗಾಯತ್ವ ಪ್ರಸ್ತುತವೂ ಪ್ರಬುದ್ದ ನಾಯಕತಕತ್ವದ ತೀವೃ ಅಭಾವ ಎದುರಿಸುತ್ತಿದೆ. ಹಿಗಾಗಿ ಪ್ರಜ್ಞಾವಂತ ಸಾಮಾನ್ಯರ ನಿಷ್ಟೆ ಮಾತ್ರ ಗುರಿ ಮುಟ್ಟಿಸುವ ಏಕೈಕ ಮಾರ್ಗವಾಗಿದೆ. ಮೂಲತಹಃ ಲಿಂಗಾಯತ ಧರ್ಮವೇ ಸಾಮಾನ್ಯರಿಂದ ಸಾಮಾನ್ಯರಿಗಾಗಿ ಸಾಮಾನ್ಯರೇ ಸ್ಥಾಪಿಸಿದ್ದು ಆಗಿರುವುದರಿಂದ ಮಾನ್ಯತೆಯೂ ಕೂಡ ಸಾಮಾನ್ಯರೆ ಸಾಮಾನ್ಯರಿಗಾಗಿಯೇ ಸಾಮಾನ್ಯರ ಶಕ್ತಿಯನ್ನಾದಿರಿಸಿಯೇ ಪಡೆಯಬೇಕಾದ ಅನಿವಾರ್ಯತೆ ಇದೆ.

ಮಾನ್ಯತೆಯ ಮಹತ್ವ

ಮಾನ್ಯತೆ ಎಂದರೆ ಇರುವಿಕೆಯ, ಅಸ್ತಿತ್ವದ ಪುರಾವೆ ಆಗಿದೆ. ನಮ್ಮ ತತ್ವ, ಆದರ್ಶಗಳನ್ನು ನಮ್ಮವರೊಂದಿಗೆ ಹಂಚಿಕೊಂಡು ಆನಂದಪಡುವುದರಿಂದ ನಮ್ಮ ಪರಿಚಯ ಹೊರಜಗತ್ತಿಗೆ ಆಗದು. ವಿಶÀ್ವಮಾನ್ಯ ತತ್ವಾದರ್ಶಗಳು ತುಕ್ಕು ಹಿಡಿಯುತ್ತವೆ. ಜನಾಂಗದ ಭವಿಷ್ಯ ಮಂಕಾಗುತ್ತದೆ. ಸಂಖ್ಯೆಯಲ್ಲಿ, ವಯಸ್ಸಿನಲ್ಲಿ ಕಿರಿದಾದ ಧರ್ಮಗಳು ಕೂಡಾ ಮಾನ್ಯತೆಯ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಮಾನ್ಯತೆ ಹೊಂದಿದಲ್ಲಿ ಅನುಯಾಯಿಗಳು ಸ್ಪೂರ್ತಿ ಹೊಂದುವರು ಮಾತ್ರವಲ್ಲ ಇಡಿ ವಿಶ್ವಕ್ಕೆ ಲಿಂಗಾಯತದ ಅತ್ಯಮೂಲ್ಯ ತತ್ವಾದರ್ಶಗಳ ಪರಿಚಯ ಜಾಗತಿಕ ಮಟ್ಟದಲ್ಲಿ ಆಗುತ್ತದೆ. ರಾಜ್ಯ ಸರಕಾರಗಳಿಂದ ಸಿಗುತ್ತಲಿರುವ ಅಲ್ಪ ಸ್ವಲ್ಪ ಮಿಸಲಾತಿಯ ಆಮಿಷದಿಂದ ಹೊರಬರಬೇಕು. ಕೇಂದ್ರ ಸರಕಾರದಿಂದ ದೇಶದಾದ್ಯಂತ (ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಲ್ಲ, ಲಿಂಗಾತಯ ಜನ ಸಂಖ್ಯೆ ಹೊಂದಿರುವ 5-6 ರಾಜ್ಯಗಳಲ್ಲಿ ಮಾತ್ರವಲ್ಲ ಇಡೀ ಭಾರತದ ದೇಶದ ತುಂಬೆಲ್ಲ) ದೊರೆಯುವ ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ಉದೋಗ, ಅನುದಾನ ಇನ್ನು ಅನೇಕ ತರಹದ ನೇರ ಸವಲತ್ತುಗಳು, ಜಾಗತಿಕ ಸಾಹಿತ್ತಿಕ ಕ್ಷೇತ್ರದಲ್ಲಿ ಲಿಂಗಾಯತದ ದರ್ಶನ(ಫಿಲಾಸಫಿ)ಗಳ ಅದ್ಯಯನ ಅರಿವು ಪರಿಚಯ ಹಾಗೂ ಇನ್ನೂ ಅನೇಕ ಮಹತ್ವದ ಅವಕಾಶ ದೊರೆಯಬಲ್ಲವು ಎಂಬುದನ್ನು ಮನಗಾಣಬೇಕಾಗಿದೆ.

ಲಿಂಗಾಯತ ಯಾವುದೇ ಆಮಿಷಕ್ಕಾಗಿ ಹೋರಾಡುತ್ತಿಲ್ಲ ಇದು ನೈಸರ್ಗಿಕ (ಸ್ವಾಭಾವಿಕ) ನ್ಯಾಯಕ್ಕಾಗಿನ ಆಗ್ರಹ

ಆದ್ದರಿಂದ ಜನಸಾಮಾನ್ಯ ಲಿಂಗಾಯತರೆ, ಲಿಂಗಾಯತ ಅಭಿಮಾನಿಗಳೇ ಇದು ನಿಮ್ಮ ಅಳಿವು ಉಳಿವು, ಬದುಕ ಭವಿಷ್ಯದ ಪ್ರಶ್ನೆ ಎಂಬುದನ್ನು ಅರಿಯಿರಿ. ತಮ್ಮವರಿಗೆ ತಿಳಿವಳಿಕೆ ನೀಡಿ. ಲಿಂಗಾಯತ ಸ್ವತಂತ್ರ ಮಾನ್ಯತೆ ಮಹಾ ರ್ಯಾಲಿಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಿ .

ಲಿಂಗಾಯತ ಸಮನ್ವಯ ಸಮಿತಿ

ಲಿಂಗಾಯತ ಘೋಷಣೆಗಳು

ಲಿಂಗಾಯತ ಧರ್ಮ : ಲೋಕ ಕಲ್ಯಾಣದ ಮರ್ಮ
ಲಿಂಗಾಯತ ಬೆಳಕಿಗೆ ಬಂದರೆ : ವಿಶ್ವವೆಲ್ಲ ಬೆಳಗುವುದು
ಬೆಕೇ ಬೇಕು : ಮಾನ್ಯತೆ ಬೇಕು
ಲಿಂಗಾಯತ ಧರ್ಮ : ವೈಜ್ಞಾನಿಕ ಧರ್ಮ
ಲಿಂಗಾಯತ ಧರ್ಮ : ಕಾಯಕದ ಧರ್ಮ
ಲಿಂಗಾಯತ ಧರ್ಮ : ಪ್ರಗತಿಪರ ಧರ್ಮ
ಲಿಂಗಾಯತ ಧರ್ಮ : ಸಮಾನತೆಯ ಧರ್ಮ
ಲಿಂಗಾಯತ ಧರ್ಮ : ಮಾನವೀಯತೆಯ ಧರ್ಮ
ಲಿಂಗಾಯತ ಧರ್ಮ : ಸಾತ್ವಿಕ ಧರ್ಮ
ಲಿಂಗಾಯತ ಧರ್ಮ : ಸೈದ್ಧಾಂತಿಕ ಧರ್ಮ
ಲಿಂಗಾಯತ ಧರ್ಮ : ಸಾಂವೈಧಾನಿಕ ಧರ್ಮ
ಲಿಂಗಾಯತ ಧರ್ಮ : ಪ್ರಜಾಪ್ರಭುತ್ವದ ಧರ್ಮ
ಲಿಂಗಾಯತ ಧರ್ಮ : ಜನ ಸಾಮಾನ್ಯರ ಧರ್ಮ
ಲಿಂಗಾಯತ ಧರ್ಮ : ಶ್ರಮಿಕರ ಧರ್ಮ
ಲಿಂಗಾಯತ ಧರ್ಮ : ಬಡವರ ಧರ್ಮ
ಲಿಂಗಾಯತ ಧರ್ಮ : ನಿರ್ಮಲ ಮನಸ್ಸಿನ ಧರ್ಮ
ಲಿಂಗಾಯತ ಧರ್ಮ : ಸ್ತ್ರೀಯರ ಧರ್ಮ
ಲಿಂಗಾಯತ ಧರ್ಮ : ವಾಸ್ತವಿಕ ಧರ್ಮ
ಲಿಂಗಾಯತ ಧರ್ಮ : ತಾತ್ವಿಕ ಧರ್ಮ
ಲಿಂಗಾಯತ ಧರ್ಮ : ಢೋಹಾರ ಕಕ್ಕಯ್ಯನ ಧರ್ಮ
ಲಿಂಗಾಯತ ಧರ್ಮ : ಮಾದಾರ ಚೆನ್ನಯ್ಯನ ಧರ್ಮ
ಲಿಂಗಾಯತ ಧರ್ಮ : ಮಡಿವಾಳ ಮಾಚಯ್ಯನ ಧರ್ಮ
ಲಿಂಗಾಯತ ಧರ್ಮ : ಲಮಾಣಿ ನಾಯಕ ನನ್ನಯ್ಯನ ಧರ್ಮ
ಲಿಂಗಾಯತ ಧರ್ಮ : ಕುಂಬಾರ ಗುಂಡಯ್ಯನ ಧರ್ಮ
ಲಿಂಗಾಯತ ಧರ್ಮ : ಹಡಪದ ಅಪ್ಪಣ್ಣನ ಧರ್ಮ
ಲಿಂಗಾಯತ ಧರ್ಮ : ತುರುಗಾಹಿ ರಾಮಣ್ಣನ ಧರ್ಮ
ಲಿಂಗಾಯತ ಧರ್ಮ : 770 ಅಮರ ಗಣಂಗಳ ಧರ್ಮ

*
Previous ಪುಟ್ಟರಾಜ ಗವಾಯಿ ಲಿಂಗಾಯತ ಸ್ವತಂತ್ರ ಧರ್ಮ Next