ಮಹಾರಾಷ್ಟ್ರದಲ್ಲಿ ಲಿಂಗಾಯತ ಧರ್ಮದ ವ್ಯಾಪ್ತಿ ವಿಸ್ತಾರ.

*

- ಶರಣ ಡಾ||ಶಶಿಕಾಂತ ಪಟ್ಟಣ ಪೂನಾ.

12 ನೆ ಶತಮಾನದಲ್ಲಿ ನಡೆದಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯ . ಎಲ್ಲಾ ಬೇಧಗಳನ್ನು ಕಿತ್ತೊಗೆದು ಸರ್ವಕಾಲೀಕ ಸಮಕಾಲೀನ ಸಮತೆ ಪ್ರೀತಿ ಸಾಧಿಸಿದ ಶರಣರು ಈ ಜಗವು ಕಂಡ ಮೊದಲ ಸಂಸದರು. ಪ್ರತಿಫಲವೇ "ಲಿಂಗಾಯತ" ಧರ್ಮದ ಉಗಮ ."ಲಿಂಗಾಯತ" -ಇದು ಧರ್ಮವೆನ್ನುವದಕ್ಕಿಂತಲೂ ಮಾನವ ಹಕ್ಕು ಹಾಗೂ ಮೌಲ್ಯಗಳಿಗಾಗಿ ನಡೆಸಿದ ಮೊದಲ ಹೋರಾಟ ಸಂಘರ್ಷ .

ಕಲ್ಯಾಣಕ್ಕೆ ದೇಶದ ಮೂಲೆ ಮೊಲೆಯಿಂದ ಸಾಧಕರು ಬರ ಹತ್ತಿದರು. ಕಾಶ್ಮೀರ ಒರಿಸ್ಸಾ ಗುಜರಾತ. ಮಹಾರಾಷ್ಟ್ರ ಆಂಧ್ರ ತಮಿಳುನಾಡು ಕೇರಳ ಉತ್ತರಪ್ರದೇಶ ಮಧ್ಯ ಪ್ರದೇಶ ಮುಂತಾದ ಕಡೆಗಳಿಂದ ಬಸವ ಕಲ್ಯಾಣಕ್ಕೆ ಶರಣರು ದಾವಿಸಿದರು, (ALL ROADS LEADS TO KALYANA ) ಕಲ್ಯಾಣದಲ್ಲಿ ಸಮತೆ ಶಾಂತಿ ಪ್ರೀತಿ ವಿಶ್ವ ಬಂಧುತ್ವ ಅಧ್ಯಾತ್ಮದ ತುತ್ತ ತುದಿಗೆ ಚಿಂತಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲ ಬೇಕು.

ಶಿವಾಜಿ ಮೂಲ ಲಿಂಗಾಯತ

ಶಿವಾಜಿ- ಮೂಲ ಪುರುಷ ಬಳಿಯಪ್ಪ ವೆಂಕಟಾಪುರದವರು ಅಲ್ಲಿ ಈಗಲೂ ಭೊಸಲೆ ಇವರ ಹೆಸರಿನಲ್ಲಿ ಭೂಮಿ ಇವೆ. ಶಿವಾಜಿ ದಾನ ನೀಡಿದ್ದ ಶಿಖರ ಶಿಂಗಣಾಪುರದ ಕೋಟೆ 60 ವರ್ಷದ ನಂತರವೂ ಅದು ಲಿಂಗಾಯತ ಧರ್ಮಕ್ಕೆ ಸೇರಿದ ಆಸ್ತಿ ಎಂದು ಸುಪ್ರೀಂ ಕೋರ್ಟ್ ಆಜ್ಞೆ ಹೊರಡಿಸಿದೆ.ಅಲ್ಲಿರುವ ಮಹಾ ಕಾಲೇಶ್ವರ (ಸಿದ್ಧರಾಮ ಶರಣರ ಕುಲದೇವತೆ ) ಅವರ ಶಿಷ್ಯರ ಕುರುಹುಗಳು ಕಂಡು ಬಂದಿವೆ.ಸಜ್ಜನ ಗಡದ ಕೋಟೆಯಲ್ಲಿನ ಪೂಜಾರಿಗಳು ಈಗಲೂ ಲಿಂಗಾಯತರೆ.ಪೇಶ್ವೆಗಳು ತಮ್ಮ ಶ್ರೀಮಂತ ಗಣಪತಿ ಮತ್ತು ಶನಿವಾವರ ವಾಡಾದ ದೇವಸ್ಥಾನಗಳನು ಪೂಜಿಸಲು ಕರ್ನಾಟಕದ ಲಿಂಗಾಯತ ಜಂಗಮರನ್ನು ಕರೆದು ತಂದು ಅವರಿಗೆ ಕಸಬಾ ಪೇಠ ಪುಣೆಯಲ್ಲಿ ಇರಲು 400 ವರ್ಷ ಹಿಂದೆಯೇ ಅವಕಾಶ ಮಾಡಿಕೊಟ್ಟಿದ್ದಾರೆ. 1915 ರ ವೇಳೆಗೆ ಮಹಾರಾಷ್ಟ್ರದ ಮಹಾ ಸುಧಾರವಾದಿ ರಾಜರ್ಷಿ ಶಾಹು ಮಹಾರಾಜ ಅವರು ಲಿಂಗಾಯತ ರಾಗಲು ಇಚ್ಛೆ ಪಡಿಸಿದಾಗ .ಅಂದಿನ ಚಿತ್ರ ದುರ್ಗ ಜಗದ್ಗುರುಗಳು ಮತ್ತು ಹಾನಗಲ್ ಕುಮಾರ ಸ್ವಾಮಿಗಳು ರಾಜರ್ಷಿ ಶಾಹು ಮಹಾರಾಜ ಇವರು ಮಾ೦ಸಹಾರಿ ಎಂದು ಆಕ್ಷೇಪ ವ್ಯಕ್ತ ಪಡಿಸಿದರು. ಆಗ ಅವರೊಂದಿಗೆ ಬಂದಿದ್ದ ಅನೇಕ ಸಸ್ಯಾಹಾರ ಮರಾಠಾ ಸಮಾಜದವರು ಲಿಂಗಾಯತರಾಗಿದ್ದಾರೆ. ಕಾಗಲಿನ ಜಾಧವ ಲಾತೂರಿನ ಭೊಸಲೆ ಪುಣೆ ಓಸ್ಮಾನಾಬದ ವಾಘಮಾರೆ ಮುಂತಾದವರು. ಲಿಂಗಾಯತರಾದದ್ದು ಇತಿಹಾಸ. 1920 ಕ್ಕೆ ಮಹಾರಾಷ್ಟ್ರದ ಶ್ರೀ ಲಕ್ಷ್ಮಣ್ ರಾವ್ ಬಿಢೆ ಮೊದಲ ಬಾರಿಗೆ "ಸತ್ಯಾಗ್ರಹಿ ಬಸವೇಶ್ವರ" ಪುಸ್ತಕ ರಚಿಸಿ ಹರ್ಡೇಕರ ಮಂಜಪ್ಪನವರ ಮೂಲಕ ಮಹಾತ್ಮ ಗಾಂಧಿಗೆ ಪುಸ್ತಕ ಸಮರ್ಪಿಸಿದರು.

ಸಿದ್ಧರಾಮ ವಿಶ್ವೇಶರ, ಉರಿಲಿಂಗ ಪೆದ್ದಿ, ಕಾಳವ್ವೆ ,ಮಲ್ಲಾರ ಕಂಡೆರಾಯ, ಮನ್ಮಥ ಸ್ವಾಮಿ, ಕನಿಫ್ ನಾಥ ಮುಂತಾದವರು ಮಹಾರಾಷ್ಟ್ರದ ಶರಣರು. ಕಾವೇರಿಯಿಂದಾ ಗೋದಾವರಿವರೆಗೆ ಇದ್ದ ಕರ್ನಾಟಕ ನಾಸಿಕದ ವರೆಗೂ ಹಬ್ಬಿತ್ತು. ಅನೇಕ ಕಡೆಗೆ ಮಠಗಳು ವ್ಯಾಪಕವಾಗಿವೆ . ಈಗ ಲಿಂಗಾಯತರು ಮಹಾರಾಷ್ಟ್ರದಲ್ಲಿ ಸುಮಾರು ಒಂದು ಕೋಟಿಗೂ ಮೀರಿದೆ. ಬಸವಣ್ಣ ಇಲ್ಲಿನ ರಾಜ್ಯ ಪೂಜಿತ ಶ್ರೇಷ್ಠ ಪುರುಷ. ಲಿಂಗಾಯತ ಒಂದು ಸ್ವತಂತ್ರ ಧರ್ಮದ ಚಳುವಳಿಗೆ ಇಲ್ಲಿನ ಬಸವ ಭಕ್ತರು ಸಿದ್ಧರಿರುವರು. ನೀವು ಕೈ ಜೋಡಿಸಿ.

*
Previousಕೂಡಲಸಂಗಮ ಸುಕ್ಷೆತ್ರದಲ್ಲಿ ೩೪ನೇ ಶರಣಮೇಳ ೨೦೨೧ಪುಟ್ಟರಾಜ ಗವಾಯಿNext
*