ಲಿಂಗಾಯತ ಎಂದರೇನು?

*

ಲಿಂಗಾಯತ ಪದವು ಎರಡು ಪದಗಳ ಸಂಯೋಜನೆಯಾಗಿದೆ. "ಲಿಂಗ" + "ಆಯತ" = "ಲಿಂಗಾಯತ" ಅಂದರೆ, ಲಿಂಗ (ಇಷ್ಟಲಿಂಗ) ವನ್ನು ಯಾರು ಗುರುವಿನ ದೀಕ್ಷೆ ಮುಖಾಂತರ ಆಯತ (ಧರಿಸಿಕೊಳ್ಳು) ಮಾಡುವರೋ ಅವರು ಲಿಂಗಾಯತ.

ಲಿಂಗಾಯತವು ಒಂದು ಧರ್ಮ, ಜಾತಿಯಲ್ಲ.

ಹುಟ್ಟಿನಿಂದ ಮಾನವರನ್ನ ಮೇಲು ಕೇಳೆಂದು ವಿಭಜನೆ ಮಾಡುವುದು ಜಾತಿ; ಹುಟ್ಟಿನಿಂದ ಎಲ್ಲರು ಸಮಾನರು ಎಂದು ಘೋಷಿಸಿ ಯಾವ ಜಾತಿ, ವರ್ಗ, ವರ್ಣ ಭೇದವಿಲ್ಲದೆ ಆಸಕ್ತಿ ಇದ್ದವರೆಲ್ಲರೂ ದೀಕ್ಷಾ ಸಂಸ್ಕಾರ ಪಡೆಯಲು ಬರುತ್ತದೆ ಎಂದು ಹೇಳುವುದು ಧರ್ಮ. ಈ ಧಾರ್ಮಿಕ ಸಂಸ್ಕಾರ ದಿಂದ, ವ್ಯಕ್ತಿ ಯು ಸಾಧಿಸಿದ ನಿಲುವಿನಿಂದ ಅವನು ಶ್ರೇಷ್ಠ, ಕನಿಷ್ಠನಾಗುವುನು ಎನ್ನುವುದು ಧರ್ಮ. ಲಿಂಗಾಯತ ಧರ್ಮವು ಜನನ ದಿಂದ ಯಾರನ್ನೂ ಮೇಲು ಕೀಳೆಂದು ಅಳೆಯದೆ 'ಹೊಲೆ ಗಂಡಲ್ಲದೆ ಪಿಂಡದ ನೆಲೆಗೆ ಅಶ್ರಯವಿಲ್ಲ ಎಂದು ಸಾರಿ; 'ಮರೆತವನು ಮಾನವ, ಅರಿತವನು ಶರಣ' ಎಂದು ಬೋದಿಸುವುದು, ಮರೆತ ಮಾನವನು ಅರಿತ ಶರಣ ನಾಗಲಿಕ್ಕೆ ಬೇಕಾಗುವ ದೀಕ್ಷಾಸಸ್ಕಾರವನ್ನು, ಪೂಜೆಯ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡುವುದು, ಆದಕಾರಣ ಇದು ಧರ್ಮ.

ಬೌದ್ಧ, ಜೈನ, ಕ್ರಿಸ್ಥ, ಇಸ್ಲಾಂ, ಸಿಖ್ಖ್ ಧರ್ಮದಂತೆ, "ಲಿಂಗಾಯತ" ಎಂಬುದು ಒಂದು ಧರ್ಮವಾಗಿದೆ. ಒಂದು ಸ್ಯೆದ್ದಾಂತಿಕ ಘಟನೆಯು ಧರ್ಮ ಎನ್ನಿಸಿಕೊಳ್ಳಬೇಕಾದರೆ ಅದಕ್ಕೆ ತನ್ನದೇ ಆದ ಏಕಾದಶ ಲಕ್ಷಣಗಳಿರಬೇಕು. ಅವಾವೆಂದರೆ ಜೀವ, ಜಗತ್ತು, ಈಶ್ವರ ರ ಸಂಭಂದವನ್ನು ವಿವೇಚಿಸುವ ಸಿದ್ದಾಂತ; ಈ ಸಿದ್ದಾಂತವನ್ನು ಅಳವಡಿಸಿಕೊಳ್ಳಲಿಕ್ಕೆ ಅಂದು ಸಾಧನೆ. ಸಾಧನೆಯಿಂದ ಸಿದ್ದಾಂತವನ್ನು ಸಕ್ಷಾತ್ಕರಿಸಿಕೊಂಡುದನ್ನು ಹೇಳುವ ಅನುಭಾವ ಪೂರ್ಣ ದರ್ಶನ, ಈ ತತ್ವ ದ ಅನುಯಯಿಯಾಗಬೇಕೆಂದು ಹಂಬಲಿಸುವ ವ್ಯಕ್ತಿಯನ್ನು ಇಂಬಿಟ್ಟುಕೊಳ್ಳಲಿಕ್ಕೆ ಬೇಕಾದ ದೀಕ್ಷಾ ಸಂಸ್ಕಾರ, ಈ ಸಮಾಜದ ಅನುಯಾಯಿದವನು ತನ್ನ ಸಮಾಜದೊಡನೆ ಮತ್ತು ಅನ್ಯ ಸಮಾಜದೊಡನೆ ಯಾವ ತತ್ವದ ಅನುಯಾಯಿಯದವನು ತನ್ನ ಸಮಾಜದೊಡನೆ ಮತ್ತು ಅನ್ಯ ಸಮಾಜದೊಡನೆ ಯಾವ ತತ್ವದ ಆಧಾರದಮೇಲೆ ಹೊಂದಿಕೊಂಡು ಬಾಳಬೇಕೆಂಬ ಸಮಾಜ ಶಾಸ್ತ್ರ. , ಮಾನವರು ಯಾವ ಕ್ರಿಯೆಗಳಿಂದ ಪರರಿಗೆ ಹಿತವನ್ನುಂಟು ಮಾಡಬಹುದು; ಅವರ ವ್ಯವಹಾರ ಗಳು ಹೇಗಿರಬೇಕೆಂದು ಹೇಳುವ ನೀತಿಶಾಸ್ತ್ರ, ಸಮಾಜ-ರಾಷ್ಟ್ರದ ವ್ಯಕ್ತಿಯು ರಾಷ್ಟ್ರದ ಆರ್ಥಿಕಾಭಿವೃದ್ದಿಯಲ್ಲಿ ಹೇಗೆ ಭಾಗವಹಿಸಬೇಕೆಂದು ಹೇಳುವ ಅರ್ಥಶಾಸ್ತ್ರ; ಅನ್ಯ ಸಮಾಜದ ಆಚರಣೆಗಳಿಂದ ಭಿನ್ನವಾದ ಸಂಸ್ಕೃತಿ; ಈ ಎಲ್ಲಾ ತತ್ವ ಗಳನ್ನು ಅಳವಡಿಸಿಕೊಂಡು ಒಂದು ಪರಂಪರೆ; ಇವೆಲ್ಲವು ಗಳನ್ನೂ ವಿವೇಚನೆ ಮಾಡುವ ಸಾಹಿತ್ಯ; ಇಂಥ ಹಲವಾರು ತತ್ವಗಳುಳ್ಳ ಒಂದು ಪಥವನ್ನು ಹಾಕಿಕೊಟ್ಟ ಧರ್ಮಗುರು. ಈ ಹನ್ನೊಂದು ಲಕ್ಷಣಗಳು ಇದ್ದಾಗ ಮಾತ್ರವೇ ಅದು ಧರ್ಮ; ಇಲ್ಲವಾದರೆ ಅದು ಜಾತಿ, ಅಥವಾ ಮತ,

ಧರ್ಮ ಸ್ಥಾಪಕರು: ವಿಶ್ವಗುರು ಬಸವಣ್ಣನವರು
ಸಿದ್ಧಾಂತ: ಶೂನ್ಯ ಸಿದ್ಧಾಂತ
ಸಾಧನೆ: ತ್ರಾಟಕ ಯೋಗ (ಲಿಂಗಾಂಗಯೋಗ)
ದರ್ಶನ: ಷಟಸ್ಥಲ ದರ್ಶನ
ಸಂಸ್ಕಾರ: ಲಿಂಗಧಾರಣ/ ಇಷ್ಟಲಿಂಗ ದೀಕ್ಷೆ
ಸಮಾಜ ಶಾಸ್ತ್ರ: ಶಿವಾಚಾರ (ಸಾಮಾಜಿಕ ಸಮಾನತೆ)
ನೀತಿ ಶಾಸ್ತ್ರ: ಗಣಾಚಾರ / ಭೃತ್ಯಾಚಾರ
ಅರ್ಥ ಶಾಸ್ತ್ರ: ಸದಾಚಾರ (ಕಾಯಕ- ದಾಸೋಹ-ಪ್ರಸಾದ)
ಸಾಹಿತ್ಯ (ಧರ್ಮಗ್ರಂಥ): ವಚನ ಸಾಹಿತ್ಯ
ಸಂಸ್ಕೃತಿ: ಅವೈದಿಕ ಶರಣ ಸಂಸ್ಕೃತಿ
ಪರಂಪರೆ: ಧರ್ಮಪಿತ ಬಸವಣ್ಣನವರೇ ಆದಿ ಪ್ರಮಥರಾಗಿ ಸಾಗಿ ಬಂದ ಶರಣ ಪರಂಪರೆ.

ಈ ದೃಷ್ಟಿಯಿಂದ ನೋಡಿದಾಗ ಲಿಂಗಾಯತ ಧರ್ಮಕ್ಕೆ ಶಕ್ತಿ ವಿಶಿಷ್ಟಾದ್ವ್ಯೆತ ವೆಂಬ ದರ್ಶನ ವುಂಟು, ಲಿಂಗ ಧೀಕ್ಷೆ ಎಂಬ ಧರ್ಮ ಸಂಸ್ಕಾರವುಂಟು, ಅಪ್ರಾಕೃತ ಅಥವಾ ಅತಿವರ್ಣಾಶ್ರಮ ಸಮಾಜ ಶಾಸ್ತ್ರ, ಮಾನವೀಯ ನೀತಿಶಾಸ್ತ್ರ ವುಂಟು, ಕಾಯಕವೇ ಕ್ಯೆಲಾಸ, ದಸೋಹವೇ ದೇವಧಾಮ ಎಂಬ ಅರ್ಥಶಾಸ್ತ್ರವುಂಟು, ಅನ್ಯ ಸಮಾಜಗಳಿಂದ ಭಿನ್ನವಾದ ಶರಣ ಸಂಸ್ಕೃತಿ ಯುಂಟು ; ಮಂತ್ರ ಪುರುಷ ಬಸವಣ್ಣ ನವರೇ ಆದಿಯಾಗಿ ಅಂದಿನಿಂದಲೂ ಅವ್ಯಾಹತವಾಗಿ ಹರಿದು ಬಂದ ಶರಣ ಪರಂಪರೆ ಯುಂಟು; ಇವೆಲ್ಲವುಗಳನ್ನು ಒಳಗೊಂಡ ವಿವೇಚನಾತ್ಮಕ ಸ್ವತಂತ್ರ ವಚನ ಸಾಹಿತ್ಯ ಸಂವಿಧಾನದ ಕತೃವಾದ ಬಸವಣ್ಣನವರೆಂಬ ಧರ್ಮ ಗುರುವುಂಟು. ಆದುದರಿಂದ ಲಿಂಗಾಯತವು ಕುರುಬ, ಹರಿಜನ, ಬ್ರಾಹ್ಮಣ. ರೆಡ್ಡಿ. ಒಕ್ಕಲಿಗ ಇತ್ಯಾದಿ ಗಳಂತೆ ಜಾತಿಯಾಗದೆ ಸ್ವತಂತ್ರ ಧರ್ಮವಾಗಿದೆ. ಜಾತಿಯನ್ನು ತ್ಯಜಿಸಿ ಧರ್ಮವಂತ ನಾಗಲು ಬರುವುದು; ಧರ್ಮವನ್ನು ತ್ಯಜಿಸಿ ಕುರುಬ ಜಾತಿಯವನಾಗಲು ಬಾರದು, ಏಕೆಂದರೆ ಹುಟ್ಟಿನಿಂದ ಬರುವುದು ಜಾತಿ ; ಸಂಸ್ಕಾರದಿಂದ ಬರುವುದು ಧರ್ಮ. ಲಿಂಗಾಯತ ಧರ್ಮವು ಸಂಸ್ಕಾರ ದಿಂದ ಬರುವುದು.

ಪರಿವಿಡಿ (index)
*
Previousಲಿಂಗಾಯತವು ಒಂದು ಧರ್ಮ, ಜಾತಿಯಲ್ಲ.ಲಿಂಗಾಯತ ಪದಕೋಶNext
*