ವೀರಶೈವ ಬೇಡ ಲಿಂಗಾಯತ ಇರಲಿ

*

- ಡಾ|| ಪುಟ್ಟರಾಜ ಗವಾಯಿಗಳು ಗದಗ

ವೀರಶೈವ ಪದದ ಬದಲು ಲಿಂಗಾಯತ ಅನ್ನುವುದೇ ಸೂಕ್ತವಾದ ವಿಚಾರವಾಗಿದೆಯೆಂದು ಪಂಡಿತ ಡಾ|| ಪುಟ್ಟರಾಜ ಕವಿ ಗವಾಯಿಗಳು ಅಭಿಮತ ವ್ಯಕ್ತಪಡಿಸಿದರು.

ಅವರು ದಾವಣಗರೆ ನಗರದ ಶ್ರೀಬಕ್ಕೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ರಾತ್ರಿ, ಮುಂಡರಗಿಯ ಶ್ರೀ ಅನ್ನದಾನೀಶ್ವರ ಪುರಾಣ ಮಂಗಲ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದರು. "ಲಿಂಗದಲ್ಲಿ ಐಕ್ಯವಾಗಿರುವುದೇ ಲಿಂಗಾಯತ". ಇದು ಹಿಂದಿನಿಂದಲೂ ಬಂದ ಹೆಸರಾಗಿದೆ ಅದನ್ನೇ ಮುಂದುವರಿಸಿಕೊಂಡು ಹೋಗುವುದು ಉತ್ತಮ ಎಂದ ಅವರು ಬಸವಾದಿ ಶರಣರ ಲಿಂಗಾಯತ ಪದವೇ ಸೂಕ್ತ ಎಂಬ ನಿಲುವನ್ನು ಹೊಂದಿದ ವಿಚಾರ ಎಲ್ಲರಿಗೂ ಗೊತ್ತಿದೆ.

"ವೀರಶೈವ ಎಂಬುದಾಗಿ ಕರೆಯಲು ಇಂದಿನ ಆಧುನಿಕ ಯುಗದಲ್ಲಿ ಹೋರಾಟಗಳು ನಡೆಯುವ ಹಂತ ತಲುಪಿರುವುದು ವಿಷಾದದ ಸಂಗತಿಯೆಂದರು”.

ನಾಡಿನಲ್ಲಿ ಯಾವುದೇ ಹೋರಾಟ, ಚಳುವಳಿ, ಒಳ್ಳೆಯ ಕಾರ್ಯಕ್ರಮಗಳು ಆರಂಭ ಆಗುವುದಿದ್ದರೆ, ಅವು ಇದೇ ದಾವಣಗೆರೆಯಿಂದಲೇ ಆಗಿದೆ ಇಂತಹ ಒಳ್ಳೆಯ ಹೆಸರು ಈ ನಗರಕ್ಕಿದೆ. ಇಲ್ಲಿನ ಜನರೂ ಸಹ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹಳ ಶ್ರದ್ದಾಭಕ್ತಿಗಳಿಂದ ಪಾಲ್ಗೊಳ್ಳುತ್ತಾರೆಂದು ಸ್ಮರಿಸಿದರು.

ಮುಂಡರಗಿಯ ಸಂಸ್ಥಾನ ಮಠದ ಶ್ರೀ ಅನ್ನದಾನೀಶ್ವರ ಸ್ವಾಮೀಜಿ, ಗದಗ ಜಿಲ್ಲೆಯ ಹೊಸಳ್ಳಿಯ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೂಜ್ಯ ಡಾ|| ಪುಟ್ಟರಾಜ ಕವಿ ಗವಾಯಿಗಳು ಈ ಶತಮಾನದಲ್ಲಿ ಅಂಧರಿಗೆ ದಾರಿ ದೀಪವಾಗಿದ್ದಾರೆ ಅದರಂತೆಯೇ ಕಣ್ಣಿದೂ ಕುರುಡರಾದವರಿಗೆ ಸರಿಯಾದ ದಿಕ್ಕು ತೋರಿಸುತ್ತಿದ್ದಾರೆ ವಚನಗಳನ್ನು ಸಂಗೀತದಲ್ಲಿ ಹಾಡಿ ಜನಮನವನ್ನ ಸೂರೆಗೊಳ್ಳುತ್ತಿದ್ದಾರೆ ಅದರೊಂದಿಗೆ ವೀರಶೈವದ ಪಿಡುಗೂ ಸಹ ಲಿಂಗವಂತ ಸಮಾಜಕ್ಕೆ ಸರಿಯಲ್ಲವೆಂದು ಎಚ್ಚರಿಸಿರುವುದನ್ನ ನಾವು ಇಲ್ಲಿ ಗಮನಿಸ ಬೇಕಾಗಿದೆ, ಅದರಂತೆ ನಡೆಯಬೇಕಾಗಿದೆ. ಹಾಗಾದಾಗ ಮಾತ್ರ ಸಮಾಜ ಉನ್ನತ ಸ್ಥಿತಿಯಲ್ಲಿ ಬೆಳೆಯುತ್ತದೆ.

-ದಾವಣಗೆರೆ (ವಿಜಯ ಸಂದೇಶ ವಾರ ಪತ್ರಿಕೆ ಮಾರ್ಚ ೭ - ೨೦೦೫)

*
ಪರಿವಿಡಿ (index)
Previousಥಾಯ್‌ಲ್ಯಾಂಡನಲ್ಲಿ ಬಸವಣ್ಣಮೈಸೂರು ಆಂದೋಲನದ ದುಷ್ಪರಿಣಾಮಗಳುNext
*