ಮೈಸೂರಿನ ಮಹಾರಾಜ ಆಡಳಿತ ಮತ್ತು ಲಿಂಗಾಯತರು

ಪರಿವಿಡಿ (index)
*

ಮೈಸೂರಿನ ಮಹಾರಾಜ ಆಡಳಿತ ಮತ್ತು ಲಿಂಗಾಯತರು

೧) 15ನೆಯ ಶತಮಾನದಿಂದ ಲಿಂಗಾಯತರಾಗಿದ್ದ ಮೈಸೂರಿನ ಅರಸರು 1610ರಲ್ಲಿ ರಾಜ ಒಡೆಯರ್‌ ಅವರ ಕಾಲದಲ್ಲಿ ವೈಷ್ಣವರಾಗಿ ಪರಿವರ್ತನೆಗೊಂಡಾಗಿನಿಂದ ಅಸಂತುಷ್ಟರಾಗಿದ್ದವರೆ ಲಿಂಗಾಯತರು.

೨) 1678ರಲ್ಲಿ ಚಿಕ್ಕ ದೇವರಾಜರು ಆಸ್ಥಾನದಲ್ಲಿ ದಿವಾನನಾದ ವಿಶಾಲಾಕ್ಷ ಬ್ರಾಹ್ಮಣ ಪಂಡಿತನು ರೈತರ ಮೇಲೆ ಅಧಿಕ ತೆರಿಗೆಯನ್ನು ಹೇರಿದ, ರೈತರ ಪರವಾಗಿದ್ದ ಲಿಂಗಾಯತ ಮಠಾಧೀಶರು ಇದನ್ನು ವಿರೋಧಿಸಿದರು. ಆ ದಂಗೆಯ ನೇತೃತ್ವ ವಹಿಸಿದ್ದ 770 ಲಿಂಗಾಯತ ಮಠಾಧೀಶರ ಬಾಯಿ ಮುಚ್ಚಿಸುವ ಎಲ್ಲಾ ಪ್ರಯತ್ನಗಳನ್ನೂ ಪಂಡಿತ ಮಾಡಿದರೂ ಅದಾವುದಕ್ಕೂ ಸ್ವಾಮಿಗಳು ಬಗ್ಗಲಿಲ್ಲ.ಕೊನೆಗೆ ಒಪ್ಪಂದ ಮಾಡಿಕೊಳ್ಳುವ ನಾಟಕದ ಸಭೆಯೊಂದಕ್ಕೆ ಅವರನ್ನು ಆಹ್ವಾನಿಸಿದ.ನಂತರ ಸಭೆಗೆ ಬಂದ ಸ್ವಾಮಿಗಳನ್ನು ಒಬ್ಬರ ನಂತರ ಒಬ್ಬರಂತೆ ಒಳಗೆ ಕರೆದುಕೊಂಡು ಹೋಗಿ ಒಟ್ಟು 440 ಸ್ವಾಮಿಗಳ ರುಂಡವನ್ನು ಕತ್ತರಿಸಿ ಭಾವಿಯೊಳಗೆ ಹಾಕಿಸಿದ. ಮಠಾಧೀಶರನ್ನು ಮೋಸದಿಂದ ಚಿಕ್ಕದೇವರಾಜರು ಕೊಲ್ಲಿಸಿ ’ಜಂಗಮ ಕ್ರಾಂತಿ’ಯನ್ನು ಸದೆಬಡಿದರು. ಇದು ನಡೆದದ್ದು ನಂಜನಗೂಡಿನಲ್ಲಿ. ಶಿರಗಳನ್ನು ಹಾಕಿದ ಆ ಭಾವಿಗೆ "ಶಿರೋಭಾವಿ" ಎಂದು ಹೆಸರು ಬಂದಿದೆ .ಆ ಭಾವಿ ಈಗಲೂ ಇದೆ. ಮುಚ್ಚಿಡಲಾಗಿದ್ದ ಈ ಐತಿಹಾಸಿಕ ಸತ್ಯವನ್ನು ಬ್ರಿಟಿಷ್‌ ಅಧಿಕಾರಿ ವಿಲ್ಕಸ್‌ ಎಂಬುವರು ಬಹಿರಂಗಗೊಳಿಸಿದರು.

ಆ ಮಠದ ಖಾಲಿಯಾದ ಸ್ಥಳಗಳಿಗೆ ಆಂಧ್ರದ ಬ್ರಾಹ್ಮಣ ಪಂಡಿತರನ್ನು ತಂದು ಜನಿವಾರದ ಜೊತೆಗೆ ಲಿಂಗವನ್ನೂ ಕಟ್ಟಿ ಸ್ವಾಮಿಗಳೆಂದು ಕೂಡಿಸಿದ. ಕನ್ನಡ ವಚನಗಳ ಜಾಗದಲ್ಲಿ ಸಂಸ್ಕೃತದ ವೇದಗಳು ಆಗಮಗಳು ಪುರಾಣಗಳು ಬಂದು ಸೇರಿಕೊಂಡವು.ಇಲ್ಲಿಂದ ಲಿಂಗಾಯತರ ಮನೆಗಳಲ್ಲಿ ಹಿಂದೂ ವೈದಿಕ ಶೈವರ ಆಚರಣೆಗಳು ಪ್ರಾರಂಭವಾದವು. ಲಿಂಗಾಯತದಲ್ಲಿ ವೀರಶೈವ ಸೇರಿಕೊಂಡದ್ದು ಅಂದಿನಿಂದಲೆ. ಹಿಂದೂ ವೀರಶೈವರೆಂದು ಹೇಳುವವರು ಮೈಸೂರು ಭಾಗದಲ್ಲೆ ಹೆಚ್ಚಾಗಿ ಈಗಲೂ ಕಾಣಬಹುದು.

೩) ಮುಮ್ಮಡಿ ಕೃಷ್ಣರಾಜ ಒಡೆಯರ್‌ 1831ರಿಂದ 1881ರ ವರೆಗೆ 50 ವರ್ಷ ಅಧಿಕಾರ ಕಳೆದುಕೊಳ್ಳಲು ’ನಗರದ ದಂಗೆ’ ಮೂಲಕ ಕಾರಣರಾದವರೇ ಲಿಂಗಾಯತರು.

ಅಧಿಕಾರ ಮರಳಿ ಬಂದಾಗ ಮೈಸೂರಿನ ಸೇವೆಯಲ್ಲಿದ್ದ ರಂಗಾಚಾರಿಯವರು ಮೈಸೂರಿನ ಇತಿಹಾಸ ಮತ್ತು ಅದರಲ್ಲಿ ಲಿಂಗಾಯತರ ಪಾತ್ರದ ಬಗ್ಗೆ ತಿಳಿದಿದ್ದರು. ಲಿಂಗಾಯತರನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿತ್ತು. ಅದಕ್ಕಾಗಿ ಜನಗಣತಿಯಲ್ಲಿ ರಂಗಾಚಾರಿಯವರು ಲಿಂಗಾಯತರನ್ನು ಮೂಲೆಗುಂಪು ಮಾಡಲು ಉದ್ದೇಶಪೂರ್ವಕವಾಗಿಯೇ ಲಿಂಗಾಯತ ಧರ್ಮವನ್ನು ವಿಸರ್ಜಿಸಿ ಅದರ ಉಪ ಪಂಗಡಗಳನ್ನು ಹಿಂದೂ ಧರ್ಮದ ’ಶೂದ್ರ’ ಗುಂಪಿಗೆ ಸೇರಿಸಿದ್ದರು

ಮೈಸೂರು ಮಹಾರಾಜರು ಲಿಂಗಾಯತರಿಗೆ 1891ರ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ನೀಡಿದರು. ಆದರೆ, ಅವರು ಶೂದ್ರರೆಂಬ ಸ್ಥಾನವನ್ನು ಬದಲಿಸಲಿಲ್ಲ. ಪ್ರತ್ಯೇಕ ಕೋಡ್ ನಂಬರಿನ ಮೂಲಕ 1891ರ ಜನಗಣತಿ ನಡೆದಾಗ ಲಿಂಗಾಯತರಲ್ಲಿ 38 ಉಪಜಾತಿಗಳು ಪತ್ತೆಯಾದವು. ಸಾದರ, ನೊಣಬ ಮತ್ತು ಲಾಲಗೊಂಡರನ್ನು ಲಿಂಗಾಯತ ಗುಂಪಿಗೆ ಸೇರಿಸಲಾಯಿತು. ಹಿಂದೆಂದೂ ಕಾಣದ ’ವೀರಶೈವ’ ಪದ ಹೊಸದಾಗಿ ಸೇರಿತು. 1891ರಿಂದ 1931ರ ವರೆಗೆ ಇದೇ ಮುಂದುವರೆಯಿತು. ಈ ರೀತಿಯ ಕುತಂತ್ರದಿಂದ ಲಿಂಗಾಯತವು ಜನಗಣತಿಗಳಲ್ಲಿ ಹಿಂದೂ ಧರ್ಮದ ಒಂದು ಜಾತಿ ಎಂದು ದಾಖಲಾಯಿತು.

ಬ್ರಿಟಿಷರ ಆಡಳಿತ ಮತ್ತು ಲಿಂಗಾಯತರು

ಬ್ರಿಟಿಷರು ಆಡಳಿತದ ಉದ್ದೇಶಕ್ಕಾಗಿ 1871ರಲ್ಲಿ ಆರಂಭಿಸಿದ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಗಳಲ್ಲಿ ಭಾರತದ ಸ್ವತಂತ್ರ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ನೀಡಿದರು.

1871 ಜನಗಣತಿ ಮತ್ತು ಸ್ವತಂತ್ರ ಧರ್ಮವಾಗಿ ಲಿಂಗಾಯತ 1871ರಲ್ಲಿ ಮೈಸೂರಿನಲ್ಲಿ ನಡೆದ ಪ್ರಪ್ರಥಮ ಜನಗಣತಿಯು ಭಾರತೀಯ ಮೂಲದ ಧರ್ಮಗಳನ್ನು ಒಂದನೆಯ ಗುಂಪಿನಲ್ಲಿರಿಸಿತು. ಮುಸ್ಲಿಮರನ್ನು ಎರಡನೆಯ ಗುಂಪು, ಕ್ರೈಸ್ತರನ್ನು ಮೂರನೆಯ ಗುಂಪು ಮತ್ತು ಪಾರ್ಸಿಗಳನ್ನು ನಾಲ್ಕನೆಯ ಗುಂಪು ಎಂದು ವಿಂಗಡಿಸಿತು.

ಒಂದನೆಯ ಗುಂಪಿನ ಹಿಂದೂ ಧರ್ಮದ ನಾಲ್ಕು ವರ್ಣಗಳನ್ನು ಕ್ರಮವಾಗಿ ಅ, ಬ, ಕ, ಮತ್ತು ಡ ಎಂದು ವಿಂಗಡಿಸಿತು. ’ಅ’ ಗುಂಪಿನಲ್ಲಿ ಬ್ರಾಹ್ಮಣ ವರ್ಣದ ಮೂರು ಗುಂಪುಗಳಲ್ಲಿ 56 ಜಾತಿಗಳನ್ನು ಗುರುತಿಸಲಾಯಿತು. ಅದೇ ರೀತಿ ’ಬ’ ಗುಂಪಿನಲ್ಲಿ ಕ್ಷತ್ರಿಯ ವರ್ಣದ 5 ಗುಂಪುಗಳಲ್ಲಿ 19 ಜಾತಿ, ’ಕ’ ಗುಂಪಿನಲ್ಲಿ ವೈಶ್ಯ ವರ್ಣದ 6 ಗುಂಪುಗಳಲ್ಲಿ 10 ಜಾತಿ ಮತ್ತು ’ಡ’ ಗುಂಪಿನಲ್ಲಿ ಶೂದ್ರ ವರ್ಣದ 22 ಗುಂಪುಗಳಲ್ಲಿ 183 ಜಾತಿಗಳನ್ನು ಗುರುತಿಸಿ ಅವುಗಳ ಜನಸಂಖೆ ತೋರಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಆಗ ಒಟ್ಟು 268 ಹಿಂದೂ ಜಾತಿಗಳಿದ್ದವು. ಲಿಂಗಾಯತ ಹಿಂದೂ ಧರ್ಮದ ಅ,ಬ,ಕ, ಮತ್ತು ಡ ಗುಂಪುಗಳಲ್ಲಿ ಇರಲಿಲ್ಲ.

ಸ್ವತಂತ್ರ ಧರ್ಮಗಳ ಗುಂಪಿನಲ್ಲಿ ಲಿಂಗಾಯತ: ಒಂದನೆಯ ಗುಂಪಿನ ’ಇ’ ವರ್ಗದಲ್ಲಿ ಜೈನ, ಬೌದ್ಧ ಮತ್ತು ಲಿಂಗಾಯತ ಧರ್ಮಗಳನ್ನು ಸೇರಿಸಲಾಗಿತ್ತು. ಇದರ ಅರ್ಥವೆಂದರೆ ಬ್ರಿಟಿಷರು ಭಾರತ ಮೂಲದ ಧರ್ಮಗಳನ್ನು ಪ್ರತ್ಯೇಕ ಗುಂಪಿಗೆ ಸೇರಿಸಿ ಪರಕೀಯ (ಮುಸ್ಲಿಂ, ಕ್ರೈಸ್ತ, ಮತ್ತು ಪಾರ್ಸಿ) ಧರ್ಮಗಳಿಂದ ಬೇರ್ಪಡಿಸಿದ್ದರು. ಅದೆ ಮಾನದಂಡವನ್ನು ಸ್ವಾತಂತ್ರ್ಯ ನಂತರದ ನಮ್ಮ ನೇತಾರರೂ ಮುಂದುವರೆಸಿದರು.

ಇದೇ ಅಂಶಗಳನ್ನು 1871ರ ಜನಗಣತಿ ವರದಿಯ ಪ್ಯಾರಾ 22ರಲ್ಲಿ ಹೀಗೆ ನಮೂದಿಸಲಾಗಿದೆ: ’ಇದು (ಲಿಂಗಾಯತ) ಒಂದು ಬಹುಸಂಖ್ಯೆಯ ವರ್ಗ ಅಥವಾ ಒಂದು ಧರ್ಮ ಬಹುತೇಕ ಎಲ್ಲ ಜಾತಿಗಳನ್ನು ಒಳಗೊಂಡಿದೆ
ಅದೇ ವರದಿಯ ಪ್ಯಾರಾ 173ರಲ್ಲಿ ’ಲಿಂಗಾಯತವನ್ನು ಜಾತಿಯೆಂದು ಪರಿಗಣಿಸಲಾಗದು. ಅದು ಒಂದು ಧರ್ಮ. ಅನೇಕ ಜಾತಿಗಳು ಅದಕ್ಕೆ ಸಂಬಂಧಿಸಿವೆ’
ಎಂದು ಸ್ಪಷ್ಟವಾಗಿ ಬರೆಯಲಾಗಿದೆ.

ಹೀಗೆ 1871ರ ಜನಗಣತಿಯು ಮೈಸೂರು ರಾಜ್ಯದಲ್ಲಿರುವ ಲಿಂಗಾಯತರಲ್ಲಿ 22 ಪಂಗಡಗಳನ್ನು ಗುರುತಿಸಿದೆ. ಆಗ ಮೈಸೂರು ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ 4,17,900 (ಶೇ 8.6) ರಷ್ಟಿತ್ತು. ಆದರೆ, ಆ 22 ಉಪಪಂಗಡಗಳಲ್ಲಿ ’ವೀರಶೈವ’ ಎಂಬ ಉಪಪಂಗಡವೇ ಇಲ್ಲವೆಂಬುದು ಅತ್ಯಂತ ಮಹತ್ವದ ಅಂಶ. ಅದೇ ರೀತಿ ಸಾದರ ಪಂಗಡವನ್ನು ’ಶೂದ್ರ’ದ ಪ್ರತ್ಯೇಕ ಗುಂಪು ಎಂದು ಮತ್ತು ನೊಣಬ, ಲಾಳಗೊಂಡ ಪಂಗಡಗಳನ್ನು ಶೂದ್ರ ಒಕ್ಕಲಿಗರ ಗುಂಪಿಗೆ ಸೇರಿಸಲಾಗಿತ್ತು.

(ಸಂಗ್ರಹ)

*
ಪರಿವಿಡಿ (index)
Previousಕೊಲೆಗಡುಕತನವಿಲ್ಲದ ಪ್ರೀತಿ ....ಅರಟಾಳ ರುದ್ರಗೌಡ್ರುNext
*