Previous ಲಿಂಗಾಯತ ಈ ತಾಣ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ Next

Lingayat Religion (ವೆಬ್ ಸೈಟ್) ಅಂತರಜಾಲ ತಾಣ ಮತ್ತು ಬಳಕೆದಾರರ (ಯುಸರ್) ಮಧ್ಯೆ ಒಪ್ಪಂದಗಳು (ನಿಬಂಧನೆಗಳು)

ಈ ಅಂತರಜಾಲ ತಾಣ ಬಳಸುವುದರಿಂದ ನೀವು ಈ ಕೆಳಗೆ ವಿವರಿಸಿದ ಬಾಧ್ಯತೆಯ ನಿಬಂಧನೆಗಳನ್ನು ಒಪ್ಪಿಕೊಂಡಿರುತ್ತೀರಿ ಮತ್ತು ಅವುಗಳು ಸಮಂಜಸವಾಗಿವೆ ಎಂದೂ ಕೂಡ ಒಪ್ಪಿಕೊಂಡಿರುತ್ತೀರಿ.

ಜಾಲತಾಣದ ಅಬಾಧ್ಯತೆ

೧) ಈ ಜಾಲತಾಣವನ್ನು `ಹೇಗಿದೆಯೋ ಹಾಗೆ’ ನೀಡಲಾಗಿದೆ ಮತ್ತು ಇದರಲ್ಲಿ ನೀಡಿದ ಮಾಹಿತಿಯ ಖಚಿತೆಯ ಬಗ್ಗೆ ಅಥವಾ ಪರಿಪೂರ್ಣತೆಯ ಬಗ್ಗೆ ಯಾವುದೇ ರೀತಿಯ ಭರವಸೆಯನ್ನಾಗಲೀ ಅಥವಾ ಅದನ್ನು ನೀರೂಪಿಸುವುದನ್ನಾಗಲೀ ನಾವು ಮಾಡುವುದಿಲ್ಲ. ಒಳ್ಳೆಯ ನಂಬಿಕೆಯಿಂದ ಈ ಜಾಲತಾಣದ ಮಾಹಿತಿಗಳನ್ನು ನೀಡುತ್ತಿರುವುದರಿಂದ ಎಲ್ಲಾ ಮಾಹಿತಿಗಳೂ ಹೊಸತಾಗಿವೆ, ಸರಿಯಾಗಿವೆ ಮತ್ತು ತಪ್ಪು ದಾರಿಗೆ ಎಳೆಯುವುದಿಲ್ಲ ಆಥವಾ ಈ ಜಾಲತಾಣವು ಸದಾಕಾಲ ಬಳಕೆಗೆ ಲಭ್ಯವಿರುತ್ತದೆ ಎಂಬ ಭರವಸೆಯನ್ನು ನಾವು ನೀಡುವುದಿಲ್ಲ.
೨) ಈ ಅಂತರಜಾಲ ತಾಣದಲ್ಲಿ ಇಂದಿನ ವರೆಗೆ ಲಭ್ಯವಿರುವ ಮಾಹಿತಿ ಮಾತ್ರ ಸೇರಿಸಲಾಗಿದೆ, ಮತ್ತು ಈ ಮಾಹಿತಿಯು ಅಪೂರ್ಣವಾಗಿರಬಹುದು. ಅಂತರಜಾಲ ತಾಣದಲ್ಲಿ ತಪ್ಪುಗಳು ಅಥವಾ ಮುದ್ರಣದ, ವ್ಯಾಕರಣ, ಟೈಪಿಂಗ್ ದೋಷಗಳನ್ನು ಹೊಂದಿರಬಹುದು.
೩) ಈ ಅಂತರಜಾಲ ತಾಣದಲ್ಲಿ ಸುಧಾರಣೆಗಳನ್ನು ಯಾವುದೇ ಸಮಯದಲ್ಲಿ ಬದಲಾವಣೆ ಮಾಡಬಹುದು ಮತ್ತು ಇಲ್ಲಿನ ಮಾಹಿತಿಯನ್ನು ಕಾಲಕಾಲಕ್ಕೆ ಬದಲಾವಣೆಯಾದಂತೆ ಸೇರಿಸಲಾಗುತ್ತದೆ..
೪) ಈ ಅಂತರಜಾಲ ತಾಣದಲ್ಲಿರುವ ಮಾಹಿತಿಯು ಕೇವಲ ತಿಳುವಳಿಕೆಗಾಗಿ ಮಾತ್ರ. ಈ ಮಾಹಿತಿಯು ಕಾನೂನು ಸಲಹೆಯಾಗಿರುವುದಿಲ್ಲ ಮತ್ತು ಅಂತಹ ಮಾಹಿತಿಯನ್ನು ಅವಲಂಬಿಸುವುದು ಸರಿಯಲ್ಲ. ನಿಮಗೆ ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಕಾನೂನು ಸಲಹೆ ಬೇಕಿದ್ದಲ್ಲಿ ನಿಮ್ಮ ವಕೀಲರನ್ನು ಸಂಪರ್ಕಿಸಿ.
೫) ಈ ಅಂತರಜಾಲ ತಾಣದಲ್ಲಿರುವ ಯಾವುದೇ ಮಾಹಿತಿಯೂ ವೃತ್ತಿಪರ ಸಲಹೆಯಾಗಿರುವುದಿಲ್ಲ ಅಥವಾ ಔಪಚಾರಿಕ ಶಿಫಾರಸ್ಸುಗಳಾಗಿರುವುದಿಲ್ಲ ಈ ಮಹಿತಿಯನ್ನು ವೈಯಕ್ತಿಕ, ವೈದ್ಯಕೀಯ, ಹಿಸ್ಟಾರಿಕಲ್ ಅಥವಾ ಆರ್ಥಿಕ ನಿರ್ಧಾರಕ್ಕೆ ಉಪಯೋಗಿಸಬಾರದು. ಒಂದು ವೇಳೆ ಉಪಯೋಗಿಸಿದರೆ ಅದಕ್ಕೆ ಈ ಅಂತರಜಾಲ ತಾಣ ಹೊಣೆಯಾಗಿರುವುದಿಲ್ಲ.
೬) ಈ ಅಂತರಜಾಲ ತಾಣದ ಬಳಕೆಯಿಂದ ಸಂಭವಿಸಬಹುದಾದ ಯಾವುದೇ ರೀತಿಯ ಲಾಭ ಅಥವಾ ನಷ್ಟಗಳಿಗೆ ಅಥವಾ ಈ ತಾಣವನ್ನು ಬಳಸಲು ಅಶಕ್ಯವಾದ ಸಂದರ್ಭದಲ್ಲಿ ಸಂಭವಿಸಿದ ನಷ್ಟ ತುಂಬಿಕೊಡಲು ಈ ತಾಣವು ಬದ್ಧವಾಗಿರುವುದಿಲ್ಲ.
೭) ಈ ಅಂತರಜಾಲ ತಾಣದಲ್ಲಿ ಲಭ್ಯವಿರುವ ಮಾಹಿತಿಗಳು ಆದಷ್ಟೂ ನಿಖರವಾಗೇ ಇವೆ ಎಂಬ ವಿಶ್ವಾಸ ನಮ್ಮದಾಗಿರುತ್ತದೆ. ಆದಾಗ್ಯೂ ಈ ಮಾಹಿತಿಗಳಲ್ಲಿ ಇರಬಹುದಾದ ಯಾವುದೋ ಲೋಪಗಳನ್ನು ಗಮನಕ್ಕೆ ತಂದರೆ ಅವುಗಳನ್ನು ಪರಿಶೀಲಿಸಿ ಅಂತೆಯೇ ತಿದ್ದುಪಡಿ ಮಾಡಲಾಗುವುದು.
೮) ಈ ಅಂತರಜಾಲ ತಾಣವನ್ನು ಒದಗಿಸುವ ಸರ್ವರ್ ಗಳು ವೈರಸ್ ಅಥವಾ ಬೇರಾವುದೇ ಹಾನಿಕಾರಕ ಅಂಶಗಳಿಂದ ಮುಕ್ತವಾಗಿರುತ್ತವೆಂದು ಭರವಸೆ ನೀಡುವುದಿಲ್ಲ. ಆದಾಗ್ಯೂ ಈ ಸರ್ವರನ್ನು ಸಾಕಷ್ಟು ಸುರಕ್ಷಿತವಾಗೇ ನೋಡಿಕೊಂಡು ಬರಲಾಗುತ್ತಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
ಬೇರೆ ಅಂತರಜಾಲ ತಾಣಗಳಿಗೆ ಸಂಪರ್ಕಕೊಂಡಿ
೯) ನಮ್ಮ ಅಂತರಜಾಲ ತಾಣದಲ್ಲಿ ಬೇರೆ ಜಾಲತಾಣಗಳಿಗೆ ಭೇಟಿ ನೀಡಲು ಸಂಪರ್ಕ ಕೊಂಡಿಗಳು (ಲಿಂಕ್ಸ್) ಇರಬಹುದು. ಅವರ ಖಾಸಗೀತನದ ನೀತಿಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಅವರ ಖಾಸಗೀತನದ ನೀತಿಗಳು ನಮ್ಮದಕ್ಕಿಂತ ಭಿನ್ನವೂ ಆಗಿರಬಹುದು. ಒಮ್ಮೆ ನಮ್ಮ ಸರ್ವರ್ ನಿಂದ ನೀವು ಹೊರಕ್ಕೆ ಹೋದ ನಂತರ ನೀವು ನೀಡಿದ ಮಾಹಿತಿಯ ಬಳಕೆಯು ನೀವು ಭೇಟಿ ನೀಡಿದ ಜಾಲತಾಣದ ನಿರ್ವಾಹಕರ ಖಾಸಗಿತನದ ನೀತಿಯಂತೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಂತಹ ಜಾಲತಾಣಗಳ ಖಾಸಗೀತನದ ನೀತಿಯನ್ನು ವಿವರವಾಗಿ ಓದಿ.
೧೦) ಬೇರೆ ಜಾಲತಾಣಗಳಿಗೆ ನೀಡಿದ ಸಂಪರ್ಕ ಕೊಂಡಿಯು ನಮ್ಮ ಬಳಕೆದಾರರ ಅನುಕೂಲಕ್ಕೆ ನೀಡಲಾಗಿದೆ. ಅಂತಹ ಜಾಲತಾಣಗಳಲ್ಲಿ ನೀಡಿದ ಮಾಹಿತಿಗಳ, ಉತ್ಪನ್ನಗಳ ಖಚಿತತೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ, ಅಥವಾ ಅವುಗಳಲ್ಲಿನ ಮಾಹಿತಿಯ ಪರಿಪೂರ್ಣತೆಯ ಬಗ್ಗೆ ಅಥವಾ ಪರಿಣಾಮಗಳ ಬಗ್ಗೆ ಯಾವುದೇ ಭರವಸೆ ನೀಡಲು ನಾವು ಅಸಮರ್ಥರಿದ್ದೇವೆ. ಬೇರೆ ಯಾವುದೇ ಜಾಲತಾಣಕ್ಕೆ ಸಂಪರ್ಕ ಕೊಂಡಿ ನೀಡಿದ್ದ ಮಾತ್ರಕ್ಕೆ ಅಂತಹ ಜಾಲತಾಣದ ದೃಷ್ಟಿಕೋನ, ಮಾಹಿತಿ ಅಥವಾ ಅಂತಹ ಜಾಲತಾಣದಲ್ಲಿರುವ ಅಥವಾ ನೀಡಿದ ಉತ್ಪನ್ನಗಳ ಬಗ್ಗೆ ನಾವು ದೃಢೀಕರಿಸಿದ್ದೇವೆ ಎಂದು ಅರ್ಥವಲ್ಲ. ಅಂತಹ ಜಾಲತಾಣಕ್ಕೆ ನೀವು ಭೇಟಿ ನೀಡಿದಾಗ ನಿಮಗಾಗಬಹುದಾದ ಪ್ರತ್ಯಕ್ಷ ಅಥವಾ ಪರೋಕ್ಷ ಹಾನಿಗಳಿಗೆ ಈ ಅಂತರಜಾಲ ತಾಣವು ಜವಾಬ್ದಾರವಾಗಿರುವುದಿಲ್ಲ.
೧೧) ಈ ಅಂತರಜಾಲ ತಾಣ ಬಳಕೆಗೆ ನೀಡುತ್ತಿರುವ ಸರ್ವರ್ ಗಳು ಯಾವುದೇ ದೋಷದಿಂದ, ವೈರಸ್ ಗಳಿಂದ ಮುಕ್ತವಾಗಿವೆ ಎಂಬ ಯಾವುದೇ ಭರವಸೆಯನ್ನು ನಾವು ನೀಡುವುದಿಲ್ಲ ಮತ್ತು ಅಂತಹ ಅಪಾಯಗಳಿಂದ ರಕ್ಷಿಸಿಕೊಳ್ಳಲು ಅಗತ್ಯ ಪ್ರಾವಧಾನಗಳನ್ನು ಮಾಡಿಕೊಳ್ಳುವುದು ಬಳಕೆದಾರರ ಜವಾಬ್ದಾರಿಯಾಗಿರುತ್ತದೆ.
ಕಾನೂನಿನ ವ್ಯಾಪ್ತಿ
೧೨) ಈ ಅಬಾಧ್ಯತಾ ನೋಟೀಸನ್ನು ಭಾರತದಲ್ಲಿರುವ ಕಾಯ್ದೆಗಳಂತೆ ಅರ್ಥೈಸತಕ್ಕದ್ದು ಮತ್ತು ವ್ಯವಹರಿಸತಕ್ಕದ್ದು. ವಿವಾದಗಳಿಗೆ ಸಂಬಂಧಿಸಿದಂತೆ ಇವುಗಳ ಕಾರ್ಯವ್ಯಾಪ್ತಿಯು ಬೀದರಿನ ನ್ಯಾಯಾಲಯಗಳಾಗಿರುತ್ತದೆ.

ಮೇಲಾಧಿಕಾರಿ (Admin)
ಸಂಪರ್ಕಿಸಿ: sscheral@gmail.com


*
Previous ಲಿಂಗಾಯತ ಈ ತಾಣ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ Next
cheap jordans|wholesale air max|wholesale jordans|wholesale jewelry|wholesale jerseys