ನಾವು ಲಿಂಗಾಯತರು :👈 👉:ಪಂಡಿತ ಪಂಚಾಕ್ಷರಿ ಗವಾಯಿ

ಕೂಡಲಸಂಗಮದ ಜಾತವೇದಿ ಗದ್ದುಗೆ:ಸುಳ್ಳಿನ ಕಂತೆ

ಕೂಡಲಸಂಗಮದ ಜಾತವೇದಿ ಗದ್ದುಗೆ:ಸುಳ್ಳಿನ ಕಂತೆ

ಕೂಡಲಸಂಗಮದಲ್ಲಿ ಬಸವಣ್ಣನ ದೀಕ್ಷಾಗುರು ಜಾತವೇದಿಗಳ ಗುದ್ದುಗೆಯಿದೆ ಎಂಬ ಸಮಸ್ಯೆಯನ್ನು ಕೆಲವರು ಸೃಷ್ಟಿಸಿದ್ದಾರೆ. ಜಾತವೇದಿಗಳು ಬಸವಣ್ಣನವರ ಗುರುಗಳೇ ?ಇದು ಜಾತವೇದಿ ಗದ್ದುಗೆಯೇ ?ಎರೆಡು ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.
13 ನೆ ಶತಮಾನದ ಹರಿಹರನ ಬಸವರಾಜ ರಗಳೆಯಲ್ಲಿ ಜಾತವೇದಿ ಬಗ್ಗೆ ಉಲ್ಲೇಖಿಸಿಲ್ಲ.14 ನೆ ಶತಮಾನದ ಬಸವಪುರಣದಲ್ಲಿಯೂ ಜಾತವೇದಿಯ ಉಲ್ಲೇಖವಿಲ್ಲ.15 ನೆ ಶತಮಾನದ ಶಿವತತತ್ವ ಚಿಂತಾಮಣಿಯಲ್ಲಿಯೂ ಉಲ್ಲೇಖವಿಲ್ಲ.16 ನೆ ಶತಮಾನದ ಸಿಂಗಿರಾಜ ಪುರಾಣದಲ್ಲಿ ಜಾತವೇದಿ ಗುರುವಿನ ಹೆಸರು ಒಮ್ಮೆಲೇ ಕಾಣಿಸಿಕೊಳ್ಳುತ್ತದೆ. ಇದರ ಪ್ರಕಾರ ಬಾಗೇವಾಡಿಗೆ ಬಂದಿದ್ದ ಜಾತವೇದಿಗಳು ಮಾದಾರಸನ ಮನೆಗೆ ಬಂದು ಶಿಶುವಿಗೆ ಲಿಂಗವನ್ನು ಕೊಟ್ಟರು. ಬಳಿಕ ಸಂಗಮಕ್ಕೆ ಬಂದ ಬಸವಣ್ಣನನ್ನು ಬರಮಾಡಿಕೊಳ್ಳುತ್ತಾರೆ.

ಹಿಂದಿನ ಯಾವ ಕೃತಿಯಲ್ಲಿಯೂ ಕಾಣದ ಜಾತಿವೇದಿ ಗುರುವಿನ ಹೆಸರು 400 ವರ್ಷದ ಬಳಿಕ ಇದ್ದಕ್ಕಿದ್ದಂತೆ ಸಿಂಗಿರಾಜ ಪುರಾಣದಲ್ಲಿ ಕಾಣಿಸಿಕೊಂಡಿರುವುದು ಒಂದು ವ್ಯವಸ್ಥಿತ ಪಿತೂರಿ ಎನಿಸುತ್ತದೆ. ಕೂಡಲಸಂಗಮದಲ್ಲಿ 5 ಶಾಸನ ಗಳಿವೆ.1160 ರ ಶಾಸನದಲ್ಲಿ ಸಂಗಮೇಶ್ವರ, ಕಾಳೇಶ್ವರ, ಆಚೆಶ್ವರ ದೇವಾಲಯದ ಉಲ್ಲೇಖವಿದೆ. 1213 ರ ಶಾಸನ ಕೇವಲ ಆಚೆಶ್ವರ ದೇವಾಲಯ ಹೆಸರಿಸಿದೆ, ಇದು ಆಚೆಶ್ವರದೇವಾಲಯವು ಮಲಹಾರಿ ತೀರ್ಥ, ಮಲಹಾರಿ ತೀರ ಎಂದೂ ಸೂಚಿಸಿದೆ.
ಇಂದು ಕೃಷ್ಣೆ ಮಲಪ್ರಭೆಗಳು ಸೇರುವ ತ್ರಿಕೋನಸ್ಥಳದಲ್ಲಿ ಮೂರು ಗುಡಿಗಳಿದ್ದು ಇವುಗಳನ್ನು ಸಂಗಮೇಶ್ವರ, ಸಿದ್ಧೇಶ್ವರ, ಜಾತವೇದಿ ಎಂದು ಕರೆಯಲಾಗುತ್ತಿದೆ. ಇವು ಕ್ರಮವಾಗಿ ಮೇಲಿನ ಶಾಸನಗಳಲ್ಲಿ ಹೇಳಲಾದ ಸಂಗಮೇಶ್ವರ, ಕಾಳೇಶ್ವರ, ಆಚೆಶ್ವರ ದೇವಾಲಯಗಳೇ ಆಗಿವೆ.

ಆದರೆ ಶಾಸನೋಕ್ತ ಕಾಳೇಶ್ವರ ಇಂದು ಸಿದ್ಧೇಶ್ವರ ಎಂದೂ, ಆಚೆಶ್ವರನನ್ನೇ ಜಾತವೇದಿ ಗದ್ದುಗೆ ಎಂದು ಕರೆಯುತ್ತಲಿದ್ದಾರೆ.
ಕಲಬುರ್ಗಿಯವರು ಕೂಡಲಸಂಗಮದ ಸ್ಥಳೀಯ ಹಿರಿಯ 75 ವರ್ಷದ ಶ್ರೀ ಮಲ್ಲಯ್ಯ ಪುರಾಣಿಕರನ್ನು ಮಾತಾಡಿಸಿದಾಗ ಆವರು ಹೇಳಿದ್ದಿಷ್ಟು :-
"ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಈಗ ಕೆಲವರು ಜಾತವೇದಿ ಗದ್ದುಗೆ ಎಂದು ಹೇಳುವುದು ಮೊದಲಿನಿಂದಲೂ ರಾಚೆಶ್ವರ, ರಾಚೊತಿಶ್ವರ ಗುಡಿಯೆಂದು ಕರೆಯುತ್ತಿದ್ದರು.1968ರ ಬಸವಣ್ಣನವರ ಅಷ್ಟಶತಮಾನೋತ್ಸವ ಸಂದರ್ಭದಲ್ಲಿ ಶ್ರೀ ಜ.ಚ.ನಿ. ಮೊದಲಾದವರು ಜಾತವೇದಿ ಗುಡಿಯೆಂದು ಕರೆಯತೊಡಗಿದರು."

ಹಾಗಾಗಿ ಮೂಲದಲ್ಲಿದ್ದ ಆಚೆಶ್ವರ ಎಂಬುದು ತೀರ ಅಪರಿಚಿತ ಹೆಸರಾದ್ದರಿಂದ ಸ್ಥಳೀಯರು ರಾಚೆಶ್ವರ/ರಾಚೊತಿಶ್ವರ ಹೆಸರಿನಿಂದ ಕರೆಯುತ್ತ ಬಂದಿರಬಹುದು
ಬಸವಣ್ಣನ ಮೇಲೆ ಮಠ ಸಂಪ್ರದಾಯ ಅಧಿಕಾರ ಸ್ಥಾಪಿಸಲು ಸಂಗಮೇಶ್ವರ ಕ್ಷೇತ್ರದೊಂದಿಗೆ ತಮ್ಮ ಸಂಬಂಧ ಕಲ್ಪಿಸಿಕೊಕೊಳ್ಳಲು 1968ರಲ್ಲಿ ಆಚೆಶ್ವರ/ರಾಚೆಶ್ವರ ಗುಡಿಯನ್ನು ಜಾತವೇದಿ ಗುಡಿ ಎಂದು ಪ್ರಚಾರ ಮಾಡತೊಡಗಿದರು. ಆದ್ದರಿಂದ ಇದು ಆಚೆಶ್ವರ ಗುಡಿಯೇ ಹೊರತು ಜಾತವೇದಿ ಗುಡಿ ಎಂಬುದು ಸುಳ್ಳಿನ ಕಂತೆ.

ಆಕರ : ಡಾ.ಎಂ.ಎಂ.ಕಲಬುರ್ಗಿಯವರ ಮಾರ್ಗ ಸಂಪುಟ 4

ಪರಿವಿಡಿ (index)
ನಾವು ಲಿಂಗಾಯತರು :👈 👉:ಪಂಡಿತ ಪಂಚಾಕ್ಷರಿ ಗವಾಯಿ
*