ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ
"ನಾನು ಹಿಂದು ನಾವು ವೀರಶೈವರು" ಅನ್ನುವ ಲಿಂಗಾಯತರು ದಯಮಾಡಿ ಇದನ್ನು ತಪ್ಪದೆ ಓದಿ.
ಎಲ್ಲಾ ಕಡೆಗಳಲ್ಲಿ ಲಿಂಗಾಯತ/ಲಿಂಗವಂತ ವೆಂದು ಸ್ಪಷ್ಟವಾಗಿ ಬರೆಯಿರಿ
ಧರ್ಮದ ಬಗ್ಗೆ ಅಭಿಮಾನ ಇದ್ದವರು ಕಡ್ಡಾಯವಾಗಿ ಓದಿರಿ, ಪ್ರತಿ ಹತ್ತು ವರ್ಷಕೊಮ್ಮೆ ಭಾರತ ಸರಕಾರ ನಡೆಸುವ ಧರ್ಮ ಜನಗಣತಿಯಲ್ಲಿ ನಾವು ಲಿಂಗಾಯತರು "ಹಿಂದು-ಲಿಂಗಾಯತ", "ವೀರಶೈವ-ಲಿಂಗಾಯತ", ಎಂದು ಬರೆಸುತ್ತೇವೆ ದಯಮಾಡಿ ಮೇಲಿನ ಎರಡನ್ನೂ ಬರೆಸದೆ ಕೇವಲ ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿರಿ ಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಕಾಯಕ ಪಂಗಡವನ್ನು ಬರೆಸಿರಿ, ನಾವು ಲಿಂಗಾಯತರು, ವೀರಶೈವರಲ್ಲ ಹಿಂದುಧರ್ಮದವರಲ್ಲ ಏಕೆಂದರೆ ನಾವು ವೀರಶೈವ ಅನ್ನುತ್ತೇವೆ, ನಾನು ವೀರಶೈವ ಅನ್ನುವವರು ದಯಮಾಡಿ ನಿಮ್ಮ ಸ್ಕೂಲ್ ದಾಖಲಾತಿಯಲ್ಲಿ ಹಿಂದು-ಲಿಂಗಾಯತ ಇದೆ( ಭಾರತ ಸ್ವತಂತ್ರ ಸಿಕ್ಕ ನಂತರ 1951ನೇ ಜನಗಣತಿಯಲ್ಲಿ ಅಂದು ಹಿಂದು ಅಂದರೆ ಧರ್ಮ, ಮುಸ್ಲಿಮ್ ಅಂದರೆ ಜಾತಿ, ಸುನ್ನಿ ಅಂದರೆ ಉಪಜಾತಿ, ಹೀಗೆ ಹಿಂದು-ಜೈನ, ಹಿಂದು-ಕ್ರಿಶ್ಚಿಯನ್ನ, ಹಿಂದು-ಮುಸ್ಲಿಮ್, ಹಿಂದು-ಸಿಖ್ ಹಿಂದು-ಬೌದ್ಧ, ಹಿಂದು-ಪಾರ್ಸಿ, ಮತ್ತು ಹಿಂದು-ಲಿಂಗಾಯತ ಹೀಗೆ ಇತ್ತು ಮುಸ್ಲಿಮ್ ಕ್ರಿಶ್ಚಿಯನ್ ಜೈನ ಬೌದ್ಧ ಪಾರ್ಸಿ ಸಿಖ್ ಇವೆಲ್ಲವೂ ಧರ್ಮಗಳು ತಮ್ಮ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕ ನಂತರ ಹಿಂದು ಪದವನ್ನು ತೆಗೆದುಹಾಕಿದವು ನಾವು ಲಿಂಗಾಯತರು ಇನ್ನೂ ಅದಕ್ಕೆ ಹಿಂದು ಪದವನ್ನು ಹಿಡಿದುಕೊಂಡಿದ್ದೆವೆ) ಹಿಂದು-ವೀರಶೈವ ಇಲ್ಲ ಸರಕಾರದ ಯಾವ ದಾಖಲೆಯಲ್ಲಿಯೂ ವೀರಶೈವ ಇಲ್ಲ, ಸರ್ಕಾರದ ಯಾವ ದಾಖಲೆಯಲ್ಲಿ ವೀರಶೈವಧರ್ಮ ಇಲ್ಲ. ವೀರಶೈವ ಪದ ನಮ್ಮಲಿ ಯಾವ ದಾಖಲಾತಿಗಳಲ್ಲಿ ಇಲ್ಲ ಆದರೂ ನಾವು ಲಿಂಗಾಯತರು ವೀರಶೈವ ಪದವನ್ನು ಬಳಸಿ ಸರಳವಾಗಿ ಸಿಗಬೇಕಾಗಿದ್ದ ಸ್ವತಂತ್ರ ಧರ್ಮವನ್ನು ಕಳೆದುಕೊಂಡಿದ್ದೆವೆ, ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ನಮಗೆ ಎಷ್ಟು ಲಾಭ ಇದೆ ಎಂದು ನಿಮಗೆ ಗೊತ್ತಾಗಿದ್ದರೆ ನಮಗೆ ಎಂದೊ ಸ್ವತಂತ್ರ ಮಾನ್ಯತೆ ಸಿಕ್ಕಿರುತ್ತಿತ್ತು,
2013ರಲ್ಲಿ ಕಾಂಗ್ರೆಸ್ ಸರಕಾರ ತನ್ನ ಕೊನೆಯ ಅವಧಿಯಲ್ಲಿ ಜೈನರಿಗೆ ಮತ್ತು ಲಿಂಗಾಯತರಿಗೆ ಸ್ವತಂತ್ರಧರ್ಮ ಮಾನ್ಯತೆ ಪಡೆದುಕೊಳ್ಳಲು ಜೈನರಿಗೆ ಲಿಂಗಾಯತರಿಗೆ ಇಬ್ಬರಿಗೂ ತಿಳಿಸಿತು,ಜೈನರು ಧರ್ಮದ ಕಾಲಂನಲ್ಲಿ ಜೈನ ಮತ್ತು ಮಹಾವೀರ ಧರ್ಮಗುರು ಎಂದು ತಮ್ಮ ಆಚರಣೆ, ತಮ್ಮ ಗ್ರಂಥದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಎಲ್ಲ ದಾಖಲಾತಿಗಳನ್ನು ನೀಡಿ ಜೈನಧರ್ಮ ಮೊನ್ನೆ ಮೊನ್ನೆ 2014ರಲ್ಲಿ ಸ್ವತಂತ್ರ ಧರ್ಮದ ಮಾನ್ಯತೆ ಪಡೆದುಕೊಂಡಿತು, ನಮ್ಮವರು ಸುಪ್ರೀಂಕೋರ್ಟ್ ಕೇಳಿದ ಮೊದಲನೆ ಪ್ರಶ್ನೆ, ನಿಮ್ಮ ಧರ್ಮ ಯಾವುದು? ಅಖಿಲ ಭಾರತ ವೀರಶೈವ ಮಹಾಸಭಾದವರು ವೀರಶೈವ ಧರ್ಮ ಎಂದರು ಈ ಉತ್ತರಕ್ಕೆ ಸುಪ್ರೀಂಕೋರ್ಟ್ ಮರು ಪ್ರಶ್ನೆ ವೀರಶೈವ ಪದ ಸರ್ಕಾರದ ಯಾವ ದಾಖಲಾತಿಗಳಲ್ಲಿ ಇವೆ ತಂದುತೊರಿಸಿ ಎಂದು ಪ್ರಶ್ನೆ ಮಾಡಿದಾಗ ಅ.ಭಾ.ವೀ.ಮಹಾಸಭಾ ಇವರಲ್ಲಿ ಸರ್ಕಾರದ ಯಾವ ದಾಖಲಾತಿಗಳಲ್ಲಿ ಸಹ ವೀರಶೈವ ಪದ ಇಲ್ಲ , ಎರಡನೇ ಪ್ರಶ್ನೆ ನಿಮ್ಮ ಧರ್ಮಗುರು ಯಾರು? ಅ,ಭಾ,ವೀ,ಮ ಇವರ ಉತ್ತರ ಪಂಚಪಿಠಾದೀಪತಿಗಳು ಎಂದರು, ಸುಪ್ರೀಂಕೋರ್ಟ್ ಮರು ಪ್ರಶ್ನೆ ಧರ್ಮಕ್ಕೆ ಒಬ್ಬನೇ ಧರ್ಮಗುರು ಇರಲು ಸಾದ್ಯ, ಐವರಲ್ಲ ಎಂದಿತ್ತು, ಅದಕ್ಕೆ ರೇಣುಕಾಚಾರ್ಯರು ಧರ್ಮಗುರು ಎಂದರು, ಅದಕ್ಕೆ ಸುಪ್ರೀಂಕೋರ್ಟಿನ ಮರು ಪ್ರಶ್ನೆ, ರೇಣುಕಾಚಾರ್ಯರ ತಂದೆ ತಾಯಿಯರ ಹೆಸರೆನು? ಇವರಲ್ಲಿ ಉತ್ತರವೆ ಇಲ್ಲ,ಏಕೆಂದರೆ ರೇಣುಕಾಚಾರ್ಯರು ಕಲ್ಲಿನಲ್ಲಿ ಹುಟ್ಟಿದವರು ಹೀಗೆ ಅ.ಭಾ.ವೀ.ಮಹಾಸಭಾ ಇವರ ಹತ್ತಿರ ಸುಪ್ರೀಂಕೋರ್ಟ್ ಕೇಳಿದ ಯಾವ ದಾಖಲೆಗಳೆ ಇಲ್ಲದ ಕಾರಣ ನಮಗೆ 2014 ರಲ್ಲಿ ಸುಲಭವಾಗಿ ಸಿಗಬಹುದಾಗಿದ್ದ ಧರ್ಮದ ಮಾನ್ಯತೆ ಸ್ವಲ್ಪದರಲ್ಲಿ ಕೈ ತಪ್ಪಿತು, ಒಂದುವೇಳೆ ನಮ್ಮ ಧರ್ಮ "ಲಿಂಗಾಯತ" ಧರ್ಮಗುರು "ಬಸವಣ್ಣನವರು", ಧರ್ಮಗ್ರಂಥ "ವಚನ ಸಾಹಿತ್ಯ" ಎಂದಿದ್ದರೆ 2014ರಲ್ಲಿ ಜೈನರ ಜೊತೆಗೆ ನಮಗೂ ಧರ್ಮದ ಮಾನ್ಯತೆ ಸಿಕ್ಕಿರುತಿತ್ತು.
ಈಗಲೂ ಕಾಲ ಮಿಂಚಿಲ್ಲ ನಾವು ವೀರಶೈವರು ಎನ್ನುವವರು ಲಿಂಗಾಯತ ಸ್ವತಂತ್ರವಾದರೆ ನಿಮಗೆನಾದರೂ ತೊಂದರೆ ಇದೆಯೆ? ನೋಡಿ ನಾವೆಲ್ಲರೂ ಸೇರಿ "ಲಿಂಗಾಯತ" ಎಂದು ಒಪ್ಪಿಕೊಂಡು ಬರೆಸಿದರೆ ಕೇವಲ 3-6ಕೋಟಿ ಜನಸಂಖ್ಯೆ ಹೊಂದಿರುವ ನಮಗೆ ಹಲವು ಪ್ರಯೋಜನಗಳು ಮತ್ತು ಸೌಲಭ್ಯಗಳು ದೊರಕುವವು, ಮೊನ್ನೆ ಜೈನರಿಗೆ ದೊರಕಿದ ಪ್ರಯೋಜನ ಮತ್ತು ಸೌಲಭ್ಯಗಳು ಕೆಳಗೆ ಇದರ ಕಾಪಿ ಕೊಡಲಾಗಿದೆ ತಪ್ಪದೆ ಓದಿ ನೋಡಿ, ಇನ್ನೂ ಹಿಂದುಗಳ ಜನಸಂಖ್ಯೆ 80ಕೋಟಿ, ಲಿಂಗಾಯತರು ಮತ್ತು ಹಿಂದುಗಳು ಸೇರಿ ಒಟ್ಟು ಜನಸಂಖ್ಯೆ ಆಗಿ ಹಿಂದುಗಳಿಗೆ ಸಿಗುವ ಅವರ ಸವಲತ್ತುಗಳನ್ನು ಲಿಂಗಾಯತರು ಕಸಿದುಕೊಳ್ಳುತ್ತೀದ್ದೇವೆ, ಲಿಂಗಾಯತರಿಗೆ ಸಿಗಬೇಕಾದ ಸವಲತ್ತುಗಳನ್ನು ಕಳೆದುಕೊಳ್ಳುತ್ತಿದ್ದೆವೆ.
ಇನ್ನೂ ನಾವು ಹಿಂದುಗಳು ಅಲ್ಲ ಎನ್ನಲು ಕೆಲವು ಉದಾಹರಣೆ:
| ಹಿಂದುಗಳು |
ಲಿಂಗಾಯತರು |
| ಗಂಡು ಮಾತ್ರ ಜನಿವಾರ ಧರಿಸಿಕೊಳ್ಳುವರು |
ಹೆಣ್ಣು ಗಂಡು ಇಬ್ಬರು ಲಿಂಗವನ್ನು ಧರಿಸಿಕೊಳ್ಳುತ್ತೇವೆ |
| ದೇವರ ಪೂಜೆ ಪುನಸ್ಕಾರಗಳನ್ನು ಗಂಡಸರು ಮಾಡುವರು |
ಪೂಜೆ ಪುನಸ್ಕಾರಗಳನ್ನು ಗಂಡು ಹೆಣ್ಣು ಇಬ್ಬರು ಮಾಡಬಹುದು |
| ಮಾಂಸಹಾರಿ ಮತ್ತು ಸಸ್ಯಹಾರಿಗಳು |
ಶುದ್ಧ ಸಸ್ಯಹಾರಿಗಳು |
| ಯಾರಾದರೂ ಸತ್ತರೆ ಸುಡುವರು |
ಹೂಳುತ್ತೇವೆ |
| ಮನೆಯಲ್ಲಿ ಯಾರಾದರೂ ಸತ್ತರೆ ತಲೆಯಲ್ಲಿ ಜುಟ್ಟು ಬಿಡುವರು |
ನಮ್ಮ ಮನೆಯಲ್ಲಿ ಯಾರಾದರೂ ಸತ್ತರೆ ಜುಟ್ಟು ಬಿಡುವುದಿಲ್ಲ |
| ಹರಿಯ ಪರಂಪರೆಯವರು |
ಹರನ ಪರಂಪರೆಯವರು |
| ಕುಂಡಲಿ ನೋಡುವರು |
ಕುಂಡಲಿಯೆ ಇಲ್ಲ |
| ಮದುವೆಯಲ್ಲಿ ಯಜ್ಞ-ಯಾಗ ಹೋಮ-ಹವನ ಮಾಡುವರು |
ಮದುವೆಯನ್ನು ಸರಳ ಪೂಜೆಯೊಂದಿಗೆ ಮಾಡುಕೋಳ್ಳುತ್ತೇವೆ |
ನಾವು ಲಿಂಗಾಯತರು ಹಿಂದುಧರ್ಮದವರಲ್ಲ ಎನ್ನಲು ಇನ್ನೂ ಅನೇಕ ಆಚರಣೆಗಳು ಇವೆ, ಭಾರತದಲ್ಲಿ ಇರುವವರೆಲ್ಲಾ ಹಿಂದುಗಳು ಎಂದು ಹಲವರ ಪ್ರಶ್ನೆ ? ಉತ್ತರ : ಭಾರತದಲ್ಲಿ ಇರುವವರೆಲ್ಲರು ಹಿಂದುಗಳು ಎಂದಾಗಿದ್ದರೆ,ನಮ್ಮ ದೇಶದಲ್ಲಿ 1) ಹಿಂದುಧರ್ಮ, 2) ಕ್ರಿಶ್ಚಿಯನಧರ್ಮ ಮತ್ತು 3) ಮುಸ್ಲಿಮ್ ಧರ್ಮ (ಇವೆರಡು ಹೊರದೇಶದ ಧರ್ಮಗಳು ) ಈ ಮೂರೆ ಧರ್ಮಗಳು ಇರಬೇಕಿತ್ತು ಇನ್ನೂಳಿದ ನಮ್ಮ ದೇಶದ ಧರ್ಮಗಳಾದ ಬೌದ್ಧಧರ್ಮ,ಸಿಖ್ ಧರ್ಮ, ಪಾರ್ಸಿಧರ್ಮ, ಮತ್ತು ಜೈನಧರ್ಮ, ಈ ನಾಲ್ಕು ಧರ್ಮಗಳಿಗೆ ಸ್ವತಂತ್ರ ಮಾನ್ಯತೆ ಏಕೆ ಕೊಡಬೇಕಿತ್ತು? ಈ ನಾಲ್ಕು ಧರ್ಮದವರು ಸಹ ಭಾರತದವರೆ, ಈ ನಾಲ್ಕು ಧರ್ಮದವರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಏಕೆ ಕೊಟ್ಟಿದ್ದಾರೆ ಎಂದರೆ ಬೌದ್ಧ, ಜೈನ, ಸಿಖ್, ಪಾರ್ಸಿ ಇವರೆಲ್ಲರಿಗೂ ಧರ್ಮಗುರು ಇದ್ದಾರೆ, ಧರ್ಮಗ್ರಂಥ ಇದೆ, ಧರ್ಮಭಾಷೆ ಇದೆ, ಧರ್ಮದ ಆಚರಣೆಗಳು ವಿಭಿನ್ನವಾಗಿದೆ ಧರ್ಮಲಾಂಛನಗಳು ವಿಭಿನ್ನ ಇರುವುದರಿಂದ ಭಾರತ ದೇಶದ ಈ ನಾಲ್ಕು ಧರ್ಮದವರಿವರಿಗೆ ಸ್ವತಂತ್ರ ಧರ್ಮದ ಮಾನ್ಯತೆ ಕೊಟ್ಟಿದ್ದಾರೆ, ಹಿಂದು, ಕ್ರಿಶ್ಚಿಯನ್, ಮುಸ್ಲಿಮ್, ಬೌದ್ಧ, ಜೈನ, ಸಿಖ್, ಮತ್ತು ಪಾರ್ಸಿ ಹೀಗೆ ಏಳು ಧರ್ಮಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಸಿಕ್ಕಿದೆ ಕೇಂದ್ರ ಸರಕಾರದಿಂದ ಎಲ್ಲ ಸವಲತ್ತುಗಳು ಸಿಗುತ್ತಿವೆ, ಈ ಸವಲತ್ತುಗಳು ನಮ್ಮ ಲಿಂಗಾಯತ ಧರ್ಮಕ್ಕೆ ಬೇಡವೆ? ಲಿಂಗಾಯತರಿಗೆ ಧರ್ಮಗುರು "ಬಸವಣ್ಣನವರು" ಧರ್ಮಭಾಷೆ "ಕನ್ನಡ" ಇದೆ ಧರ್ಮಗ್ರಂಥ "ವಚನ ಸಾಹಿತ್ಯ" ಇದೆ ಮುಖ್ಯವಾಗಿ ಶರಣರೆಲ್ಲ ಸೇರಿ ಕಟ್ಟಿದ "ಲಿಂಗಾಯತ" ಧರ್ಮ ಇದೆ, ಧರ್ಮಾಚರಣೆ ಸಂಸ್ಕಾರ, ಏಳು ಧರ್ಮಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿದ ಧರ್ಮ ನಮ್ಮ ಲಿಂಗಾಯತ ಧರ್ಮ, ಶರಣರ ಧರ್ಮ, ಸತ್ಯ ಶುಧ್ಧ ಕಾಯಕ ಮಾಡುವ ಧರ್ಮ, ದಾಸೋಹ ಧರ್ಮ, ಸಮಾನತೆ ಧರ್ಮ, ಗಂಡು ಹೆಣ್ಣು ಎರಡೆ ಜಾತಿ ಎನ್ನುವ ಧರ್ಮ, ಸರ್ವರನ್ನೂ ಅಪ್ಪಿಕೊಳ್ಳುವ ಧರ್ಮ, ಸಕಲ ಜೀವಾತ್ಮಗಳಿಗೆ ಲೇಸನ್ನ ಬಯಸುವ ಧರ್ಮ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಧರ್ಮ, ಮತ್ತು ಪ್ರಪ್ರಥಮ ಜಗತ್ತಿಗೆ ಸಂವಿಧಾನ ಕೊಟ್ಟಂತ ಧರ್ಮ ಲಿಂಗಾಯತ ಈ ಧರ್ಮಕ್ಕೆ ಇಲ್ಲಿಯವರೆಗೆ ಸ್ವತಂತ್ರ ಮಾನ್ಯತೆ ಸಿಕ್ಕಿಲ್ಲ ಎಂದರೆ ನಮಗೆಲ್ಲ ನಾಚಿಕೆ ಆಗಬೇಕು, ಕರ್ನಾಟಕದಲ್ಲಿ 99%ಲಿಂಗಾಯತ ಮುಖ್ಯಮಂತ್ರಿಗಳು 80%MLAಗಳು ಮತ್ತು ರಾಷ್ಟ್ರಪತಿ ಉಪರಾಷ್ಟ್ರಪತಿ ಆದಂತ ಲಿಂಗಾಯತರು ನಾವು , ಲಿಂಗಾಯತರಿಗೆ ಈ ದೇಶದಲ್ಲಿ ಅಸ್ತಿತ್ವವೇ ಇಲ್ಲ, ನಾವು ಇದ್ದೂ ಸತ್ತಂತೆ, ನಮ್ಮ ಲಿಂಗಾಯತ ರಾಜಕಾರಣಿಗಳು ತಮ್ಮ ಎಳಿಗೆಗಾಗಿ ರಾಜಕಾರಣ ಮಾಡುತ್ತಿದ್ದಾರೆ ಹೊರತು ನಮ್ಮ ಲಿಂಗಾಯತ ಧರ್ಮಕ್ಕೆ ಅಲ್ಲ, ನಾವು ಎಚ್ಚತ್ತುಕೊಳ್ಳದಿದ್ದರೆ ಜಗತ್ತಿನ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ ನಶಿಸಿ ಹೋಗುವದರಲ್ಲಿ ಸಂದೇಹವೆ ಇಲ್ಲ, ಇನ್ನಾದರೂ ನಾವು ಲಿಂಗಾಯತರು ಜಾಗೃತಿಗೊಂಡು ಲಿಂಗಾಯತ ಧರ್ಮ ಉಳಿಸೋಣ ಬೆಳೆಸೋಣ ರಕ್ಷಿಸೋಣ.