Previous ಗುರುವಿನ ಭಜನೆ ಮಾಡಮ್ಮ ಪರಮಾತ್ಮ ನಿಶ್ಚಯನಿರುವ Next

ಅಡವಿಯ ಶಿವನೆ...

*

ಅಡವಿಯ ಶಿವನೆ ಬಡವಿಯೂ ನಾನು
ಬೇಡುವೆ ನಾ ನಿನ್ನ ಸಿರಿಯಾ
ಬೇಡುವೆ ನಾ ನಿನ್ನ ಸಿರಿಯಾ
ಬೇಡುವೆ ನಾ ನಿನ್ನ || ಪ ||

ಭಕ್ತಿಯ ಸಿರಿಯನ್ನು
ನಿನ್ನಾ ಧ್ಯಾನದ ಸಿರಿಯನ್ನುಪೂಜಿಸುವಾ ಸಿರಿಯಾ
ಆರಾಧಿಸುವಾ ಸಿರಿಯಾ || ೧ ||

ನಿನ್ನಾ ಭಜನೆಯ ಮಾಡುತ ನನ್ನೇ
ಮರೆಯುವ ಸಿರಿಯನ್ನು
ನನ್ನೇ ಮರೆತು ನಿನ್ನಲ್ಲಿ
ಒಂದಾಗುವ ಸಿರಿಯನ್ನು || ೨ ||

ನಿಶ್ವಾರ್ಥದ ಸಿರಿಯನ್ನು
ನಿತ್ಯಾನಂದದ ಸಿರಿಯನ್ನು
ನಿತ್ಯವು ನಿನ್ನ ಸೇವೆಯನ್ನು
ಮಾಡುವ ಸಿರಿಯನ್ನು || ೩ ||

ಜ್ಞಾನದ ಸಿರಿಯನ್ನು
ವೈರಾಗ್ಯದ ಸಿರಿಯನ್ನು
ಗುರುದೇವ ನುಡಿದಂತೆ
ನಡೆಯುವ ಸಿರಿಯನ್ನು || ೪ ||

ಮೌನದ ಸಿರಿಯನ್ನು
ಏಕಾಂತದ ಸಿರಿಯನ್ನು
ಎಲ್ಲೆಲ್ಲೂ ಇರುವ ನಿನ್ನಾ
ನೋಡುವ ಸಿರಿಯನ್ನು || ೫ ||

ಶ್ರೀ ರಕ್ಷೆಯ ಸಿರಿಯನ್ನು
ನಿನ್ನಾ ಪ್ರೀತಿಯ ಸಿರಿಯನ್ನು
ಮಲ್ಲೇಶ ಗುರುವಿನ
ಕರುಣೆಯ ಸಿರಿಯನ್ನು || ೬ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಗುರುವಿನ ಭಜನೆ ಮಾಡಮ್ಮ ಪರಮಾತ್ಮ ನಿಶ್ಚಯನಿರುವ Next