Previous ಇರುಳು ಹಗಲೆಯು ನಿನ್ನ ಯಾಕೆ ಮಗನೆ ಬಸವ Next

ಬಸವ ನಿಮ್ಮಯ ಪ್ರಣಮವ

ರಚನೆ: ಶ್ರೀಗುರು ಬಸವಾರ್ಯರು


ಬಸವ ನಿಮ್ಮಯ ಪ್ರಣಮವ ಬಲ್ಲವರಾರು ಬಸವಲಿಂಗ
ಅಸಮಾಕ್ಷ ಶರಣರೆ ಬಲ್ಲರಲ್ಲದೆ ಬಸವಲಿಂಗ || ಪ ||

'ಬ'ಯೆಂಬ ಪ್ರಣಮದಿ ಐನೂರು ಪ್ರಣಮವು ಬಸವಲಿಂಗ
'ಸ'ಯೆಂಬ ಪ್ರಣಮದಿ ಸಾವಿರ ಪ್ರಣಮವು ಬಸವಲಿಂಗ
'ವ'ಯೆಂಬ ಪ್ರಣಮದಿ ಸಾವಿರದೈನೂರು ಬಸವಲಿಂಗ
ಏನ ಹೇಳುವೆ ನಿನ್ನ ಪ್ರಣಮದ ಮಹಿಮೆಯ ಬಸವಲಿಂಗ || ೧ ||

ಆರು ಮುನ್ನೂರು ಮುವ್ವತ್ತಾರು ಪ್ರಣಮವು ಬಸವಲಿಂಗ
ಸಾರಾಯ ನಿಮ್ಮ ಪ್ರಣಮದಲ್ಲಿಯಿರುತಿಹ ಬಸವಲಿಂಗ
ಕ್ರೂರ ಮಾನಸರು ನಿನ್ನರವ ತಾ ತಿಳಿವರೆ ಬಸವಲಿಂಗ
ಆರು ಪ್ರಭೆಯುಳ್ಳವರೆ ಬಲ್ಲವರು ಬಸವಲಿಂಗ || ೨ ||

ಬಿಂದು ಮುನ್ನೂರು ಮುವ್ವತ್ತಾರು ಸಾವಿರ ಬಸವಲಿಂಗ
ಹೊಂದಿ ನಿನ್ನಯ ಪ್ರಾಣವಧಿಕ ಉದಯವು ಬಸವಲಿಂಗ
ಇಂದುಧರನ ಶರಣರೆ ನಿನ್ನ ಬಲ್ಲರು ಬಸವಲಿಂಗ
ಮಂದಮತಿಗಳೇನ ಬಲ್ಲರು ಹೇಳಯ್ಯ ಗುರುಬಸವಲಿಂಗ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಇರುಳು ಹಗಲೆಯು ನಿನ್ನ ಯಾಕೆ ಮಗನೆ ಬಸವ Next