ಏನೋ ನನ್ನ ನಲ್ಲ | ಒಲ್ಲೆನೊಕತನವ ಒಲ್ಲೆ, ನಾನಾರೆ |
ನಂಬಿದೆ ಗುರುವೆ ನಂಬಿದೆ ಸ್ವಾಮಿ |
ರಾಗ:ಅಭೇರಿ/ ಶಂಕರಾಭರಣ ಅಟ ತಾಳ
ನಂಬಿದೆ ಗುರುವೆ ನಂಬಿದೆ ಸ್ವಾಮಿ
ನಂಬಿದೆ ಅಂಬಿಕಾ ರಮಣ ನೀನಂಬಿಗ |ಪ|
ಹೊಳೆಯ ಭರವ ನೋಡಂಬಿಗ
ಸೆಳಹು ಬಹಳ ಕಾಣಂಬಿಗ
ಸುಳುಹಿನೊಳಗೆ ಬಿದ್ದೆನಂಬಿಗ
ಎನ್ನ ನೆಳೆದುಕೋಳ್ಳೊ ನೀನಂಬಿಗ |1|
ಆರು ತೆರೆಯ ನೋಡಂಬಿಗ
ಮೀರಿ ಬರುತಲಿದೆಯಂಬಿಗ
ದಾರಿಯೊಡೆದು ಎನ್ನ ತಡಿಗೆ ಸೇರಿಸು
ನೀ | ದೂರ ಮಾಡದಿರು ಅಂಬಿಗ |2|
ತುಂಬಿದ ಹರಿಹೋಲಂಬಿಗ
ಅದಕ್ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮವ ನೋಡಂಬಿಗ ಇದ
ರಿಂಬನರಿದು ತೆಗೆಯಂಬಿಗ |3|
ಹತ್ತು ಹತ್ತು ನೋಡಂಬಿಗ
ಹತ್ತಿದರೈವರು ಅಂಬಿಗ
ಮುತ್ತಗೆಗೊಳಗಾದೆನಂಬಿಗ ಎನ್ನ
ನೆತ್ತಿಕೊಳ್ಳೊ ನೀನಂಬಿಗ |4|
ಸತ್ಯವೆಂಬ ಹುಟ್ಟಂಬಿಗ,
ಸದ್ಭಕ್ತಿ ಎಂಬ ಪಥವಂಬಿಗ
ನಿತ್ಯ ಮುಕ್ತ ನಮ್ಮ ಚೆನ್ನಮಲ್ಲಿಕಾರ್ಜುನನ
ಮುಕ್ತಿ ಮಂಟಪಕೊಯ್ಯೊ ಅಂಬಿಗ |5|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಏನೋ ನನ್ನ ನಲ್ಲ | ಒಲ್ಲೆನೊಕತನವ ಒಲ್ಲೆ, ನಾನಾರೆ |