Previous ಏತಕನುದಿನ ಕಾಡಿ... ಎಲ್ಲ ಹೇಳಲಿಬಹುದು ಎಲ್ಲ... Next

ಬಸವಾದಿ ಪ್ರಮಥರ ನೆನವ...

ರಚನೆ: ಶ್ರೀಗುರು ಬಸವಾರ್ಯರು


ಬಸವಾದಿ ಪ್ರಮಥರ ನೆನೆವ ಶರಣರಿಗೆ
ಹಸನಾದ ಕೆರಹು ನಾನಾದೇನೋ ಗುರುವೆ || ಪ ||

ಚೆನ್ನಬಸವರಾಜ ಕಿನ್ನರಿ ಬ್ರಹ್ಮಯ್ಯ
ನನ್ನಯ್ಯ ನಾದಯ್ಯರೊಳಗಾದ ಶರಣರ
ಚೆನ್ನಾಗಿ ನುತಿಸಿ ಬಾಳುವ ಶಿವಶರಣರ
ಕುನ್ನಿಯಾಗಿರಿಸೆನ್ನನು ಶ್ರೀಗುರುವೆ || ೧ ||

ಅಲ್ಲಮಪ್ರಭುರಾಯ ಮೊಲ್ಲೆಯ ಬೊಮ್ಮಯ್ಯ
ಕಲ್ಲಯ್ಯ ಕಲಕೇತ ಮಲ್ಲಯ್ಯನೆನಿಸುವ
ಎಲ್ಲ ಶರಣರಡಿಗಳನ್ನು ತಾ ಭಜಿಸುವ
ನಿರ್ಲೇಪ ಬಸವೇಶನಡಿಯೊಳಾನಿಹೆನು

ಗುರುಸಿದ್ಧರಾಮಯ್ಯ ಗರುವ ಮಂಚಯ್ಯನು
ಪರಮ ಪಾವನ ವಿರಕ್ತ ಮೋಳಿಗೆತಂದೆ
ಪರಿಭವಗಳ ಶಿರವರಿದ ಮಾರಯ್ಯನ
ಮರಿಮಗನೆನಿಸೆನ್ನನು ಗುರುಬಸವ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಏತಕನುದಿನ ಕಾಡಿ... ಎಲ್ಲ ಹೇಳಲಿಬಹುದು ಎಲ್ಲ... Next