ಎನಗೆ ಬಂದ ಬವರಕೇಕೆ ನಿಮಗೆ ಬಂಧನ?
|
|
ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ
ಎನಗೆ ಬಂದ ಬವರಕೇಕೆ ನಿಮಗೆ ಬಂಧನ? |ಪಲ್ಲವಿ|
ಆರಿಗಿಟ್ಟ ಬಡಿಣದನ್ನ | ವಾರು ಕೊಂಬರೆನಗೆ ಬಂದ
ಮಾರಿಗಾಗಿ ಶಿವನ ಭಕ್ತರಳಲಲೆನ್ನಸು
ಹಾರುತಿದೆ-ಮದೀಯ ತನುವ | ನೂರುನುಚ್ಚುಮಾಡೆ ನಿಮಗಿ
ದೂರ ಪೇಳ್ದೊಡಾಣೆ ಚೆನ್ನಮಲ್ಲಿಕಾಜುನ |೧|
ಇಹದೆ ಶರಣರೊಲಿಯದಲ್ಲ | ದಹುದೆ ಮುಕ್ತಿಯವರ ಭಂಗಿ
ಸಹಿತರಿಂದಲಾವ ಗತಿಯ ಪಡೆವೆನಿನಿತಕೆ
ದಹನನೇತ್ರನಿಟ್ಟ ನೆಲೆಯೊಳಿಹೆ[ನೆನ್ನುತ್ತ ಗೀತವನ್ನು
ಸಹಜಭರಿತೆ ಪಾಡಿದಳ್ ಮನೋನುರಾಗದಿ] |೨|
ವಾತ-ವಹ್ನಿ-ಸಲಿಲ-ಸುರ | ಭೂತಳಾದಿ ತತ್ವವನಿಶ
ರೀತಿದಪ್ಪದಿಪ್ಪವಯ್ಯ ನಿನನುಜ್ಞೆಯ-
ನಾತು; ಮಿಕ್ಕಡೆನ್ನನೊಪ್ಪ | ನಾತ ಮಲ್ಲಿನಾಥ
..................................... |೩|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”