Previous ಬಸವ ಬಸವಯೆಂದು.. ಏತಕನುದಿನ ಕಾಡಿ... Next

ಬಸವ ಸಾವುತಿದೆ...

ರಚನೆ: ಶ್ರೀಗುರು ಬಸವಾರ್ಯರು


ಬಸವ ಸಾವುತಿದೆ ಜೀವ ಸಾವುತಿದೆ ನಿಮ್ಮ
ಶೇಷವನ್ನಿತ್ತೆನ್ನ ಸಲಹಯ್ಯ || ಪ ||

ಆಸೆಯೆಂಬಂಕುರ ದೋರುತಿದೆ
ರೋಷವೆಂಬ ಕಾಮ ಹುಟ್ಟುತಿದೆ
ಭಾಷೆಯ ವ್ರತಗಳು ತಪ್ಪುತ್ತಿವೆ ಬಲು
ಹೇಸದೆ ಭವದೊಳು ಹುಟ್ಟುತಿದೆ || ೧ ||

ಪರಧನ ಪರಸತಿ ಬಯಸುತಿದೆ
ಬರಿಯಹಂಕಾರದಿ ಬೆರೆವುತಿದೆ
ಕರಣ ನಾಲ್ಕರೊಳು ತಿರುಗುತಿದೆ ಬಲು
ಪರಮ ಪಾಪಕೆ ಹೋಗುತಿದೆ || ೨ ||

ಆನೆ ಕುದುರೆಗಳು ಹುಟ್ಟುತಿದೆ ಅಲ್ಲಿ
ಮೌನದ ಚಿಕ್ಕಟ ಅಡಗುತಿದೆ
ಕಾನನ ತಂಚೆ ಬೆಳವುತಿದೆ
ಎನ್ನ ಸ್ವಾಮಿ ಸಲಹು ಗುರುಬಸವೇಶ ಎನ್ನುತಿದೆ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಬಸವ ಬಸವಯೆಂದು.. ಏತಕನುದಿನ ಕಾಡಿ... Next