| ಹೇವವನಿಕ್ಕಲಾರೆ | ಶಿವಯೋಗಾಷ್ಟಕ | |
ಹಾರು ಕಂಡ್ಯಾ ಹಂಸ |
ಹಾರು ಕಂಡ್ಯಾ ಹಂಸ ಹಾರು ಕಂಡ್ಯಾ -
ನೀನು ಮೂರು ಬಲೆಗಳೊಳಗೆ ನಿಲುಕದೆ || ಪ ||
ಆಶಾಪಾಶದೊಳಗೆ ಸಿಲ್ಕಿ - ಮಾಯಾ
ರೋಷ ಕಿಚ್ಚಿನಲಿ ಬೇಯದೆ
ವಾಸವ ಹರಿಯಜರುಗಳು ಸಿಕ್ಕಿ ಕೆಟ್ಟ
ಹೇಸಿ ಪಥವ ನೀನು ಮೆಟ್ಟಿದೆ || ೧ |
ನಿರಯದ ಸರಸಿಯೊಳಾಡದೆ - ನೀನು
ಇರದ ಘನದತ್ತ ಹಾರು ಕಂಡ್ಯಾ
ಗಿರಿಯ ಸರಸಿಯೊಳಗೊಪ್ಪುವ ನೀನು
ಉರುತರ ಕ್ಷೀರವ ಸವಿ ಕಂಡ್ಯಾ || ೨ ||
ಸಾಸಿರದಳ ಕಮಲದ ಕರ್ನಿಕೆಯೊಳು - ಅಲ್ಲಿ
ಭಾಸುರ ಪ್ರಣಮದ ಪ್ರಭೆಯೊಳು
ವಾಸವಾಗಿರ್ಪ ಷಡಕ್ಷರವರ ಮಹಾ
ಧೀಶನ ನೀ ಹೋಗಿ ನೆರೆ ಕಂಡ್ಯಾ || ೩ ||
| ಹೇವವನಿಕ್ಕಲಾರೆ | ಶಿವಯೋಗಾಷ್ಟಕ | |