Previous ಏತರ ಭಯವೆಮಗೆ ಧ್ಯಾನದೊಳೆಂದಿಹೆನೋ Next

ಶಿವಯೋಗದೊಳೆಂದಿಹೆನೋ

ಪರಿವರ್ಧಿನಿಷಟ್ಪದಿ

ಶಿವಲಿಂಗವ ಹೃತೊಂಡದ ಮಧ್ಯದಿ
ತವೆಜಾನಿಸುತ ಪರವ ಶಾನಂದದಿ
ಭವಗಿರಿಪವಿಯೆಂದೆನಿಸುವ ಘನ ಶಿವಯೋಗ ದೊಳೆಂದಿಹೆನೋ || ಪ ||

ಪದ ಪಿಂ ಭಾವದ ಗುಡಿತೋರಣದಿಂ
ಮದಗಜಹಯದಿಂದೆಸೆವನಲತ್ವದಿ
ಮುದವಡೆಗೊಂಡಿಹ ಕರಚರಣ ಚತುಷ್ಟಯ ಮಂತ್ರದಿ ಕೂಡಿ
ಒದಗಿದ ಬಹುಸುಖ ಕರಣ ಪದಾತಿಯ
ಪದುಳ ದಿ ಮಧ್ಯದ ತನುವಿನ ರಥದಿಂ
ಸದಮಳಲಿಂಗವ ಹರುಷದಿ ನಾನಿದಿರ್ಗೊಂಬುತ ಲೆಂದಿಹೆನೋ || ೧ ||

ಚಿನ್ನದ ನೆಲೆಯೊಳು ಬೆಳ್ಳಿಯ ಮೊರಡಿ ಸು
ರನ್ನದ ಗಿರಿಗಳ್ಪಚ್ಚೆಯ ಕೋಡ್ಗಲ್
ಉನ್ನತ ನೀಲದ ಗುಂಡು ಪ್ರತಿ ವಳದ ಲತೆ ವೈಡೂರ್ಯಗಳ
ಸನ್ನುತವೆಸೆವಾ ಹಸಿರು ಮುತ್ತುನಲ
ವಿನ್ನಿಸು ವಜ್ರದ ಧರೆಯಂತೊಪ್ಪುವ
ಹೃನ್ಮಂಡಲ ಚಿದ್ಭೂಮಿಯ ಮಧ್ಯದ ಲಿಂಗದೊಳೆಂದಿಹೆನೋ || ೨ ||

ಭೋಂಕನೆ ತೋರುವ ವಿದ್ಯುಲ್ಲತೆಯ ಶ
ಶಾಂಕನ ಭಾಸ್ಕರ ಶತಕೋಟಿಪ್ರಭೆ
ಧಿ೦ಕಿಡುತಂ ತಾಂ ಬೆಳಗುವ ಬ್ರಹ್ಮಸುರಂಧ್ರದ ಮಧ್ಯದಲಿ
ಶಂಖದ ಘಂಟೆಯ ಜಾಗಟೆ ವಾಸುಕಿ
ಕಿಂಕಿಣಿ ಕಿನ್ನರಿ ವೀಣೆಯ ತೆರದಿಂ
ಝೇಂಕಾರಿಪೌ ಓಂಕಾರದ ಪ್ರಣವ ಸುನಾದದೊಳೆಂದಿಹೆನೋ || ೩ ||

ಕುಟಿಲದ ಮಾಯೆಯ ಹರಿಸಿ ತಮಸ್ಸಿನ
ಪಟಲಕೆ ಜ್ಞಾನದ ಜ್ಯೋತಿಯ ಬೆಳಗಿಸಿ
ಪಟುಗೊಳಿಸುತ ಮನಮಾರುತರಂತಾನೇಕವೆ ಮಾಡುತಲಿ
ಪುಟನೆ ಗೆದೂರ್ಧ್ವವನಡರಿಸಿಯಾತ್ಮನ
ನಿಟಿಲದ ಮಧ್ಯದ ತೇಜೋರಾಶಿಯ
ಮಠದೊಳು ಬೆಳಗುವ ಚಿದ್ಘನಲಿಂಗದ ಮೇಳದೊಳೆಂದಿಹನೋ || ೪ ||

ಕರಣದ ಕಳಕಳವಿಲ್ಲದ ಸುರರುಗ
ಳರುವಿಗೆ ನಿಲುಕದ ತಾರ್ಕಿಕರುಗಳ
ಬರಿ ಕೋಟಲೆಗಳ ಹೋರಟೆಗೈದವ ಮುನಿಗಳ ಭಾವಕ್ಕೆ
ಅರಿಸದ ಶಾಸ್ತ್ರಕೆ ನಿಲುಕದ ವೇದವು
ಕುರುಪಿಡಲರಿಯದ ಚರಿತನನಘಹರ‍
ಪರಮ ಷಡಕ್ಷರಿಲಿಂಗದ ನಿಜಸುಖ ಎಂದಿಗೆ ದೊರಕುವದೋ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಏತರ ಭಯವೆಮಗೆ ಧ್ಯಾನದೊಳೆಂದಿಹೆನೋ Next