Previous ಶರಣ ಸೇವೆ ತಾನೇ ಶಿವನು Next

ಕೆಟ್ಟ ಮನಸೀಗೆಷ್ಟು ಹೇಳಲು

ರಚನೆ: ಕೂಡ್ಲೊರು ಬಸವಲಿಂಗ ಶಿವಯೋಗಿಗಳು


ಕೆಟ್ಟ ಮನಸೀಗೆಷ್ಟು ಹೇಳಲು
ಖೊಟ್ಟೆ ಗುಣವ ಬಿಟ್ಟಿತೆ?
ತಟ್ಟಿ ಘಟ್ಟ ಸೆಷ್ಟು ಹೇಳಲು
ಎಟ್ಟತನವ ಬಿಟ್ಟಿತೆ? || ಪ ||

ಕಾಗೆಯನ್ನು ಕೋಗಿಲೆಂದರೆ
ಕೂಗಿ ರಾಗವ ಮಾಡೀತೆ?
ಹಗಲು ಬೆಳಕನು ನೋಡೆಂದರೆ
ಗೂಗಿ ತಾನು ನೋಡಿತೆ? || ೧ ||

ಕೋತಿಯ ಕೊರಳಿಗೆ ಮಾಲೆ ಹಾಕಲು
ಶಿಸ್ತಿನಿಂದದು ಇದ್ದೀತೆ?
ಘಾತ ಕಿವಿಯಲಿ ನೀತಿ ಹೇಳಲು
ಮಾತು ಕಿವಿಯಲಿ ಬಿದ್ದಿತೆ? || ೨ ||

ಗರುವದಿಂದ ಮೆರೆಯುವವಗೆ
ನರಕ-ವಾಗದೆ ಇದ್ದೀತೆ?
ಗುರು ಕೂಡಲೂರೇಶ ನೊಲಿದರೆ
ಹರಿಯದೆ ಭವ ಇದ್ದೀತೆ? || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಶರಣ ಸೇವೆ ತಾನೇ ಶಿವನು Next