ಉರಿವ ಕಮಲ | ಸಂಗನೆಂದಂತೆ ಎಂದನಾಗಿ |
ಶಿವಲಿಂಗದೊಳಗಣ ಜಂಗಮಲಿಂಗ |
ರಾಗ: ಭೂಪಾಳಿ
ಏಕೆ ಕರೆದರೆ ನುಡಿಯೆ ಲೋಕಾಧಿನಾಯಕ ಪಿ।
ನಾಕಿ ಕೂಡಲ ಚೆನ್ನಸಂಗಮೇಶ್ವರ ಲಿಂಗವೆ || ಪ ||
ತರಳೆ ಪೊಂಬಟ್ಟಲೊಳು ಕ್ಷೀರವಿದೆ ಕೊಳ್ಳೆನಲು ।
ಕರವೆತ್ತಿ ಈಂಟಿದೆ ಕರುಣದಿಂದ
ಮರಳಿ ಹೇರೂರ ಹೆಣ್ಣಿನ ದೃಢಕೆ ನೀ ಮೆಚ್ಚಿ
ಹರುಷದಿಂ ಪುರುಷನ ರೂಪನು ಮಾಡಿದೆ ದೇವ ||೧||
ಅಷ್ಟದಿಕ್ಕುಗಳ ಪೊದಕೆಯ ಹೊದ್ದೆ-ಪರವೆಯರ
ಬಟ ಕುಚದೊಳು ಕರೆದೋಡೋ ಎಂದೆ ದೇವ||
ದೃಷ್ಟದಿಂ ಸೌಂದರಗೆ ನಂದಿಮುದ್ರೆಯ ಹೊನ್ನ
ಕೊಟ್ಟೆ ಮೂಲೋಕವರಿಯೆ ದೇವ || ೨ ||
ಬಾಣ ಮಯೂರನುದ್ಭಟದೇವ ಮಲುಹಣಗೆ
ಕಾಳಿದಾಸಂಗಭೀಷವನಿತೆ ದೇವ
ಪ್ರಾಣೇಶ ಕಾರುಣ್ಯ ಸಿಂಧು ಸಲಹೆನ್ನ | ಪ್ರ
ವೀಣ ಕೂಡಲ ಚೆನ್ನಸಂಗಮೇಶ್ವರ ಲಿಂಗವೆ || ೩||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಉರಿವ ಕಮಲ | ಸಂಗನೆಂದಂತೆ ಎಂದನಾಗಿ |