| ಸೆರಗನೊಡ್ಡಿ ಬೇಡಿಕೊಂಬೆನು | ಹೇವವನಿಕ್ಕಲಾರೆ | |
ತಂದು ತೋರೆ |
ತಂದು ತೋರೆ ಎನ್ನ ಮನ ಘನ ಪ್ರಿಯನ
ಇಂದುಧರ ಕಡು ಚಲ್ವ ಮನದತ್ತ ಸುಳಿಯನು || ಪ ||
ಪುಲಿಯ ಚರ್ಮದುಡಿಗೆಯವನ ಸುಲಿಪಲ್ಲ ಚಲುವನ
ಪೊಳೆವ ಫಣಿಕುಂಡಲದ ನೀರನ
ಒಲಿಸುವರಿಗೆ ಮುನ್ನ ಒಲಿವಂತ ತವಕಿಯು
ಒಲಿದೆನ್ನ ಮನದತ್ತ ಸುಳಿಯನು ಕೆಳದಿ || ೧ |
ಹೃದಯಕೋಣೆಗಳಲ್ಲಿ ಮನದ ಮಂಚವ ಹಾಸಿ
ಪದುಳದಿ ಭಾವದ ಗುಡಿಯ ಗಟ್ಟಿದೆ
ಸದಮಲಜ್ಞಾನ ಜ್ಯೋತಿಯ ಬೆಳಗಿನೊಳ್
ಉದಮದ ಭಕ್ತಿಯೌವನವಾದ ಕೆಳದಿ || ೨ ||
ಎನ್ನಾತ್ಮ ಜ್ಯೋತಿ ತಾನೆನ್ನ ಹೃದಯದಲಿ
ಹೊನ್ನ ಹಾವುಗೆ ಮಟ್ಟಿ ಸುಳಿಯ ನಾನು
ಉನ್ನತದಿ ಹೆಚ್ಚಿ ಹಿಗ್ಗುವೆನು ಷಡಕ್ಷರ
ಚನ್ನಲಿಂಗದ ಸುಳುವಡಗಿದ ಕೆಳದಿ || ೩ ||
| ಸೆರಗನೊಡ್ಡಿ ಬೇಡಿಕೊಂಬೆನು | ಹೇವವನಿಕ್ಕಲಾರೆ | |