| ಕಾಯೈ ಕಾಯೈ | ಸೆರಗನೊಡ್ಡಿ ಬೇಡಿಕೊಂಬೆನು | |
ನಮ್ಮ ದೇಶಕ್ಕೆ ಹೋಹ ದಿನ ಬಂತು |
ನಮ್ಮ ದೇಶಕೆ ಹೋಹ ದಿನ ಬಂತು ಮುಂದೆ
ಗಮ್ಮನೆಲ್ಲರನೊಬ್ಬುಳಿ ಮಾಡು || ಪ ||
ಅಂಗಭೋಗಂಗಳ ಮರೆ ನೀನು - ಮುಂದೆ
ಹೆಂಗಳ ಸುಖವನು ತೊರೆ ನೀನು
ಅಂಗಜಗುಣಗಳ ಹರಿ ನೀನು -ಮುಂದೆ
ಲಿಂಗವ ಮನದೊಳಗರಿ ನೀನು || ೧ |
ಮಲತ್ರಯದಾಸೆಯ ಬಿಡು ನೀನು - ಮುಂದೆ
ಹಲವು ಬುದ್ದಿಗಳನ್ನು ತೊಡೆ ನೀನು
ಫಲಿಸದ ವೃಕ್ಷವನು ಕಡಿ ನೀನು - ಮುಂದೆ
ಸಲೆ ಲಿಂಗದೊಳು ಮನವಿಡು ನೀನು || ೨ ||
ಬಿಡು ತನುವಿನ ಮೇಲಣಾಸೆಯನು
ಹಿಡಿ ಶಿವಶರಣರ ಭಾಷೆಯನು
ಮೃಡ ಷಡಕ್ಷರಾಧೀಶನನು - ಮುಂದೆ
ಯೊಡಗೂಡು ಭವಪಾಶನಾಶನನು || ೩ ||
| ಕಾಯೈ ಕಾಯೈ | ಸೆರಗನೊಡ್ಡಿ ಬೇಡಿಕೊಂಬೆನು | |