Previous ಬಂದನು ಮರ್ತ್ಯಕೆ ಕಾಯೈ ಕಾಯೈ Next

ಆರು ಕಾಣರು ಪುಣ್ಯಕ್ಷೇತ್ರವನು

ಧಾರುಣಿಯನು ತಿರುಗುವರೈಸೆ - ಅಲ್ಲಿ
ಆರು ಕಾಣರು ಪುಣ್ಯಕ್ಷೇತ್ರವನು || ಪ ||

ಗಗನಗಿರಿಯ ಶಿಖರದ ಮೇಲೆ - ಅಲ್ಲಿ
ಸೊಗಸುವ ರತ್ನಮಂಟಪದೊಳು
ಝಗಝಗಿಸುವ ಶಶಿಸೂರ್ಯಪ್ರಭೆ -ಅಲ್ಲಿ
ಅಗಲದೆ ಬೆಳಗುವ ತೇಜ || ೧ |

ಶಂಖ ಕಿನ್ನರಿ ನಾಗಸರ ವೀಣೆ - ಅಲ್ಲಿ
ಝೇಂಕರಿಸುವ ಘಂಟೆಜಾಗಟೆ
ಕಿಂಕಿಣಿಭೇರಿದುಂದುಭಿಯೊಲು - ಅಲ್ಲಿ
ಓಂಕಾರನಾದವಾಗುತಲಿದೆ || ೨ ||

ತೊಳಗುವ ಚಂದ್ರಾರ್ಕ ಮಿಂಚಿನ - ಅಲ್ಲಿ
ಬೆಳಗ ಕೀಳ್ಪಡಿಸುತ ಬೆಳಗುತ
ಒಲಿದ ಷಡಕ್ಷರಲಿಂಗವು - ಅಲ್ಲಿ
ನೆಲಸಿರ್ಪ ಭೇದವನರಿಯದೆ || ೩ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ಬಂದನು ಮರ್ತ್ಯಕೆ ಕಾಯೈ ಕಾಯೈ Next