Previous ನಮ್ಮ ದೇಶಕ್ಕೆ ಹೋಹ ದಿನ ಬಂತು ತಂದು ತೋರೆ Next

ಸೆರಗನೊಡ್ಡಿ ಬೇಡಿಕೊಂಬೆನು

ಸೆರಗನೊಡ್ಡಿ ಬೇಡಿಕೊಂಬೆನು - ಶಿವ ಶಿವಾ
ಮರೆದು ಹೋಗಬೇಡವೆನ್ನನು - ಶಿವ ಶಿವಾ || ಪ ||

ಎನ್ನನೊಲಿದು ನಿನಗೆ ಕೊಟ್ಟರು - ಶಿವ ಶಿವಾ
ನಿನ್ನನೊಲಿದು ಎನಗೆ ಕೊಟ್ಟರೊ – ಶಿವ ಶಿವಾ
ಎನ್ನ ಮಾತ ಮೀರಬೇಡವೆಂದು - ಶಿವ ಶಿವಾ
ಎನ್ನ ನಿನ್ನನೊಂದುಗೂಡಿದ - ಶಿವ ಶಿವಾ || ೧ |

ತಪ್ಪನನ್ನ ಮೇಲೆ ಹೊಂದಿಸಿ – ಶಿವ ಶಿವಾ
ತಪ್ಪಿಸೆನ್ನ ಬಿಟ್ಟು ಹೋದರೆ - ಶಿವ ಶಿವಾ
ಒಪ್ಪರಯ್ಯಾ ಗುರುವಿನಾಜ್ಞೆಗೆ - ಶಿವ ಶಿವಾ
ತಪ್ಪಿ ನಡೆದರೆಂದು ನಮ್ಮನು - ಶಿವ ಶಿವಾ || ೨ ||

ಎನ್ನನೊಲ್ಲದಿರ್ದೊಡೆ ನೀನು - ಶಿವ ಶಿವಾ
ಮುನ್ನದೇಕೆ ಎನ್ನ ಕೂಡಿದೆ - ಶಿವ ಶಿವಾ
ಎನ್ನ ಕೈಯ ಬಿಡುವೆನೆಂದರೆ ನೀನು - ಶಿವ ಶಿವಾ
ನಿನ್ನ ಬಿಡೆನು ಗುರುವಿನಾಜ್ಞೆಗೆ - ಶಿವ ಶಿವಾ || ೩ ||

ನೋಡಬೇಡ ಎನ್ನ ಗುಣವನು - ಶಿವ ಶಿವಾ
ಕೂಡಿ ಅಗಲಬೇಡವೆನ್ನನು - ಶಿವ ಶಿವಾ
ಬೇಡಿಕೊಂಬೆ ನಾನು ನಿಮ್ಮನು - ಶಿವ ಶಿವಾ || ೪ ||

ಕಂಗಳರತ ಕುರುಡನಂದದಿ - ಶಿವ ಶಿವಾ
ಭಂಗ ಬಡುತ ತಿರುಗುತ್ತೆದೆನೆ - ಶಿವ ಶಿವಾ
ಹಿಂಗದೆ ಷಡಕ್ಷರಾಂಕನ – ಶಿವ ಶಿವಾ
ಲಿಂಗ ನಿಮಗೆ ಕೊರತೆಯಿಲ್ಲವು – ಶಿವ ಶಿವಾ || ೫ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ನಮ್ಮ ದೇಶಕ್ಕೆ ಹೋಹ ದಿನ ಬಂತು ತಂದು ತೋರೆ Next