ಓರಂತೆ ಮನಸೋತೆ | ನಂಬಿದೆ ಗುರುವೆ ನಂಬಿದೆ ಸ್ವಾಮಿ |
ಏನೋ ನನ್ನ ನಲ್ಲ |
ರಾಗ: ಮಧುಮಾಧವಿ
ಏನೋ ನಮ್ಮ ನಲ್ಲ ನೀ ಮನೆಗೇಕೆ ಬಾರೆ
ನಾನೇನು ತಪ್ಪನು ಮಾಡಿದುದಿಲ್ಲ |ಪ|
ಕೂಸಿನ ತಾಯಿಗೆ ಹೇಸದೊತ್ತೆಯ ಕೊಟ್ಟು
ಕೂಸತ್ತೆನ್ನಯ ನಲ್ಲ ಬೇಸತ್ತು ಹೋದೆ |ಅನುಪಲ್ಲವಿ|
ಮನವುಳ್ಳ ಭಾವಕಿಗನುವಾಗಿ ನಮ್ಮ ನಲ್ಲ
ಮನ ಸಂಚಲವಾಗಲನುವಾದುದಿಲ್ಲ |೧|
ಒತ್ತೆಯ ನಲ್ಲನ[ಳ] ತೋಳ ಮೇಲೊರಗಿದೆ
ಚಿತ್ತದ ನಾಳ ಕನಸಿಲಿ ಕಂಡೆ |೨|
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನೀನು ಮಾತನಾಡಿದುದುಂಟು ಕೂಡಿದುದಿಲ್ಲ |೩|
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಓರಂತೆ ಮನಸೋತೆ | ನಂಬಿದೆ ಗುರುವೆ ನಂಬಿದೆ ಸ್ವಾಮಿ |