Previous ನಿಮ್ಮ ಕಾರುಣ್ಯವನ್ನ... ಅಂದಾದನಂದು Next

ನಿಮ್ಮ ಶರಣರ ಒಕ್ಕುದ

*

ರಚನೆ: ಧರ್ಮಗುರು ಬಸವೇಶ್ವರ


ನಿಮ್ಮ ಶರಣರ ಒಕ್ಕುದ ಮಿಕ್ಕುದ
ಕೊಂಡೆನ್ನ ತನು ಮನ ಶುದ್ಧವಾದುದಯ್ಯಾ || ಪ ||

ಒಡೆಯರು ಮನೆಗೆ ಬಂದರೆ ಎ
ನ್ನೊಡಲಾಸೆಯ ನಾನರಿಯದೆ
ಸಕಲ ಪದಾರ್ಥವ ನೀಡಿ ಅವ
ರೊಕ್ಕುದ ಹಾರಿಕೊಂಡಿಪ್ಪೆನಯ್ಯಾ || ೧ ||

ಆಚಾರ ವಿಚಾರವ ನಾನರಿಯೆನು
ಜ್ಞಾನಾನುಭಾವದ ಹೊಲಬನರಿಯೆನು
ಶಿವ ನಿಮ್ಮ ಪ್ರಸಾದಿಗಳಾ
ಪ್ರಸಾದವೆನೆಗೆ ಪ್ರಾಣವಯ್ಯಾ || ೨ ||

ಆದ ಪದವಿಯರಿತುಟಲ್ಲವೆನೆಗೆ
ನಿಮ್ಮ ಶರಣರ ಶೇಷ ಪ್ರಸಾದ
ಜೀವನವೆನಗದು ಬಾಳುವೆಯಾಗಿ
ಬೇರೆ ಮತ್ತೆನ್ಯವನರಿಯೆಸಯ್ಯಾ || ೩ ||

ಹಗರಣ ಪಂಕ್ತಿಯ ಮುಂದೆ ನಾನು
ಕರವ ಮುಗಿದು ಪರವಶನಾಗಿ
ಎರಡರಿಯದೆ ಒಡೆಯರ ಪರಿಯಾಣ
ಹರುಷದಿಂ ಹಾರಿಕೊಂಡಿಪ್ಪೆನಯ್ಯಾ || ೪ ||

ಗುರುಲಿಂಗ ಜಂಗಮದಾರೋಗಣೆಯ
ಮಾಡಿದಡೆಯೊಳೆನ್ನ ಪ್ರಾಣವನಿಕ್ಕಿ
ಉಡುಗಿ ಒಕ್ಕ ಪ್ರಸಾದವ ಕೊಂಡು
ಪರಮ ಸುಖಿಯಾದೆನು ಕೂಡಲಸಂಗಯ್ಯ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನಿಮ್ಮ ಕಾರುಣ್ಯವನ್ನ... ಅಂದಾದನಂದು Next