Previous ಸತ್ಯ ಸದಾಚಾರ ಗುರುಪಾದ ಸೇವಾತುರ Next

ಸರ್ಪಭೂಷಣ ಶಿವಯೋಗಿಗಳ ಕೈವಲ್ಯಗೀತೆ

*

ಬಿಡು ಬಾಹ್ಯದೊಳು ಡಂಭವ

ಬಿಡು ಬಾಹ್ಯದೊಳು ಡಂಭವ
ಮಾನಸದೊಳು ಎಡೆಬಿಡದಿರು ಶಂಭುವ
ಮನದೊಳು ವಂಚಿಸಿ ಹೊರಗೆ ನೀ
ಕೀರ್ತಿಯ ಪಡೆದರೆ ಶಿವ ನಿನಗೊಲಿಯನು ಮರುಳೆ ||

ಜನಕಂಜಿ ನಡೆಕೊಂಡರೇನುಂಟು ಲೋಕದಿ
ಮನಕಂಜಿ ನಡೆಕೊಂಬುದೇ ಚಂದ |
ಜನರೇನ ಬಲ್ಲರು ಒಳಗಾಗೋ ಕೃತ್ಯವ
ಮನವರಿಯದ ಕಳ್ಳತನವಿಲ್ಲವಲ್ಲ ||

ಮನದಲಿ ಶಿವ ತಾ ಮನೆಮಾಡಿಕೊಂಡಿಹ
ಮನಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ |
ಮನಕಂಜಿ ನಡೆಯದೆ ಜನಕಂಜಿ ನಡೆದರೆ
ಮನದಾಣ ಗುರುಸಿದ್ದ ಮರೆಯಾಗುವನಲ್ಲ ||

- ಸರ್ಪಭೂಷಣ ಶಿವಯೋಗಿಗಳು

ಪರಿವಿಡಿ (index)
Previous ಸತ್ಯ ಸದಾಚಾರ ಗುರುಪಾದ ಸೇವಾತುರ Next