Previous ವಿಕಸವಾಗಲಿ ಮನದ ಬಲುಮೆ ಎಂದಿಗಪ್ಪುದೋ Next

ಭಜತಿಯರರೆ

ಭೋಗಷಟ್ಪದಿ

ಭಜತಿಯರರೆ ವಿಷ್ಣುವಾಯು
ಅಬ್ಬ ಜಾತ ಚಂದ್ರಸೂರ್ಯ
ಮಝರೆ ಭಾಪು ತಾಳ ಭಜತಿ ನಾಟ್ಯಲೀಲನಂ || ಪ ||

ಧಿಮಿಕು ಧಿಂಧಿ ದಿಮಿಕು ಧಿಮ್ಮಿ
ಧಿಮಿಕು ನಂದಿ ಕಾಯರುಗಳ
ಯಮಕಚಮಕ ಮೃದಂಗ ಭಜತಿ ನಾಟ್ಯಲೀಲನಂ
ಅಮಲವೀಣೆ ಸುಸ್ವರದಲಿ
ಗಮಪ ಧನಿಸ ರಿಸರಿ ಸರಿಸ
ಗಮಪ ಭಜತಿ ತುಂಬುರಾದಿ ನಾಟ್ಯಲೀಲನಂ || ೧ |

ಚರಣಗತಿಗೆ ಧರಣಿ ಜಲಂ
ಶರಧಿ ಸಹಿತ ಅಷ್ಟಗಜಂ
ಜರಿಯೆ ಶೇಷ ಸಹಸ್ರ ಶಿರಸ ಒರಗಿ ಬಿದ್ದಿರೆ
ಕರವ ಬಿದಿರೆ ಶೈಲಮಟ್ಟಿ
ಉರುಳುತಿರಲು ದೆಸೆಗೆ ಕುಸುಮ
ವರುಷದಂತೆ”ಯುರುಳಿ ಭಗಣ ನಷ್ಟವಾದವು || ೨ ||

ಸುರರು ಭಾಪು ಧಿರುರೆ ಎನಲು
ಹರಿ ಸುರೇಂದ್ರ ಜೀಯಮೆನಲು
ಹರಸಿ ಮುನಿಗಳ ಕ್ಷತೆಗಳ ಸೂಸಿಯಿರುತಿರೆ
ಇರದೆಯೆನ್ನ ಹೃದಯಕಮಲ
ಪರಮಪೀಠದಲ್ಲಿ ಷಡ
ಕ್ಷರಿಯ ವರನು ಒಪ್ಪಿ ಸೊಗಸಿ ರಾಜಿಸಿರ್ದನು || ೩ ||

ರಚನೆ:- ಶ್ರೀ ಮುಪ್ಪಿನ ಷಡಕ್ಷರಿ

ಪರಿವಿಡಿ (index)
Previous ವಿಕಸವಾಗಲಿ ಮನದ ಬಲುಮೆ ಎಂದಿಗಪ್ಪುದೋ Next