Previous ಅಕ್ಕಮಹಾದೇವಿ ಸ್ವರ ವಚನಗಳು ಕೈಯ ತೋರೆಯಮ್ಮ Next

ತೊಡರಿ ಬಿಡದಂಡೆಲೆವ ಮಾಯೆಯ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ತೊಡರಿ ಬಿಡದಂಡೆಲೆವ ಮಾಯೆಯ

[ತೊಡರಿ ಬಿಡದಂಡೆಲೆವ ಮಾಯೆಯ
ತೊಡಕನಾರೈದಲಿಸಿ ಗೀತವ
ತೊಡಗಿದಳ್] ಅಸಂಖ್ಯಾತಲಕ್ಷಭವಾಂಬುರಾಶಿಯೊಳು
ಕಡೆದು ಮನುಜತ್ವಂಬಡೆಯೆ ಬೆಂ-
ಬಿಡದು ನಿಮ್ಮಯ ಮಾಯೆ, ಮಾಯೆಯ
ಬಿಡುಗಡೆಗೆ ತೆರಪಿಲ್ಲಾ ಗುರುಚೆನ್ನಮಲ್ಲೇಶ |೧|

ಒಡಲಿನೊಳ್ ಮಲಮಾಸಿನುಬ್ಬಸ
ವಡೆದುದಿಸಲಜ್ಞಾನ ರುಜೆಗಳ
ತೊಡಕು, ಕಾವನ ಕಾಟ ಜವ್ವನದೊಳ್, ಜರೆಗಶಕ್ತಿಯ
ಜಡತೆಯಲ್ಲದೆ ಜಗಕೆ ನಿಮ್ಮಡಿ
ವಿಡಿಯಲೆಲ್ಲಿಯ ಬಿಡೆಯ ಮಾಯೆಯ ಸೆಡಕಿನೊಳು ಸಿಲುಕಿ |೨|

ಹರಿಯಜೇಂದ್ರಾದ್ಯಖಿಳ ದಿವಿಜರ
ಶಿರವನರಿದಹಿದನುಜಮನುಜರ
ನರೆದು ಸಣ್ಣಿಸಿ ನುಂಗಿ, ನುಸುಳುವ ಮನುಮುನಿಗಳಧಟ
ಪರಿದು ಸಚರಾಚರವ ನೆರೆ ನಿ
ಟ್ಟೊರಸುವುದು ಗಡ ಮಾಯೆ ನಿಮ್ಮಯ
ಶರಣರಡಿವಿಡಿದಾಂ ಬದುಕಿರ್ದೆನೆಂದು ಪಾಡಿದಳು |೩|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಅಕ್ಕಮಹಾದೇವಿ ಸ್ವರ ವಚನಗಳು ಕೈಯ ತೋರೆಯಮ್ಮ Next