Previous ತಾನೇ ತಾನಾಗಿ ರಚನೆ: ಆದಯ್ಯ ಮಾತಿನ ಬಳಕೆಯಲ್ಲದೆ Next

ಸಾರೆ ಚಲ್ಯಾದೆ ಮುಕುತಿ...

ಅಲ್ಲಮಪ್ರಭು ಸ್ವರ ವಚನ


ಸಾರೆ ಚಲ್ಯಾದೆ ಮುಕುತಿ
ಗುರು ತೋರಿಸದಲ್ಲದೆ ಕಾಣಿಸದಣ್ಣ
ಸಾರೆ ಚಲ್ಯಾದೆ ಮುಕುತಿ |ಪ|

ವೇದದ ಮೊದಲಿನ ಮೂಲವದು
ಮೇದಿನಿಯೊಳು ತಾ ತುಂಬಿಹುದು
ಹಾದಿ ಹಾದಿಗೆ ಬಿದ್ದಿಹುದು
ಇದು ಸಾಧಕ ಜನರಿಗೆ ಕಾಣುವುದಣ್ಣ |1|

ಎತ್ತ ನೋಡೆ ಪರಬ್ರಹ್ಮವದು
ಸುತ್ತು ಮುತ್ತಲು ಸುರಿದಿಹುದು
ಮತ್ತೆ ಮತ್ತೆ ಅದು ಕಾಂಬುವುದು (ಕಾಣುವುದು)
ಗುರು ಪುತ್ರರಿಗಲ್ಲದೆ ಕಾಣಿಸದಣ್ಣ |2|

ಹಿಂದೆ ನೋಡಲು ಬಂದಿಹುದು
ಮುಂದೆ ನೋಡಲು ನಿಂದಿಹುದು
ಸಂದು ಸಂದಿಗೆ ಜಡಿದಿಹುದು
ಆನಂದ ಗುಹೇಶ್ವರ ಲಿಂಗವದಣ್ಣ |3|

- ಶ್ರೀ ಗುರು ಅಲ್ಲಮಪ್ರಭು ತಂದೆ.

ಪರಿವಿಡಿ (index)
Previous ತಾನೇ ತಾನಾಗಿ ರಚನೆ: ಆದಯ್ಯ ಮಾತಿನ ಬಳಕೆಯಲ್ಲದೆ Next