Previous ಆವಾಶ್ರಯದಲ್ಲಿ ಜನಿತನಾದಡೇನು ಲಿಂಗವ ನೋಡಿ ನೋಡಿ... Next

ದಾಸೋಹವ ನೋಡಲೆಂದು

*

ರಚನೆ: ಧರ್ಮಗುರು ಬಸವೇಶ್ವರ


ದಾಸೋಹವ ನೋಡಲೆಂದು
ಈಶ ಬೇಡೆ ತನುವ ಕೊಡುವ
ಆ ಸಮರ್ಥ ಭಕ್ತರನ್ನು
ಆಸೆಗೈವುದೇನೊ ಮನವೆ || ಪ ||

ಏಸುಬಾರಿ ಬಂದ ಭವದ
ದೋಷಗಳನ್ನು ಕೆಡಿಸಿ ಮುಕ್ತಿ
ವಾಸದೊಳಗೆ ಕೂಡುವುದು ಮ
ಹಾ ಶಿವೈಕ್ಯರ ದರುಶನ || ೧ ||

ಸುತ್ತಿ ಬಳಸಿ ತೀರ್ಥಕ್ಷೇತ್ರ
ದತ್ತ ತೊಳಲಿ ಬಳಲಬೇಡ
ಭಕ್ತನಂಗಳವೆ ನಿತ್ಯ
ಮುಕ್ತಿಲೋಕ ವಾರಣಾಸಿ || ೨ ||

ಆವಭಾವದಿಂದ ಲಿಂಗ
ದೇವ ಬೇಡೆ ಈವ ಭಕ್ತ
ರೀವರಲ್ಲದುಳಿದ ವ್ಯರ್ಥ
ಜೀವರೇನನೀವರೋ || ೩ ||

ಕೊಟ್ಟು ದಣಿಯ ತನುವ ಮನವ
ಕೊಟ್ಟು ದಣಿಯ ಧನವ ಭಾವ
ಮುಟ್ಟಿಲಿಂಗ ಜಂಗಮಕ್ಕೆ
ನಿಷ್ಠೆ ನಿರುತ ಭಕ್ತನು || ೪ ||

ಭಕ್ತನಂಗ ಶಕ್ತಿಗೀವ
ಯುಕ್ತಿ ಲಿಂಗವಾಗಿ ಬಯಕೆ
ಗತ್ತ ಮುನ್ನ ಕೊಡುವ
ಭಕ್ತಿಭಾವ ಕೂಡಲಸಂಗನು || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಆವಾಶ್ರಯದಲ್ಲಿ ಜನಿತನಾದಡೇನು ಲಿಂಗವ ನೋಡಿ ನೋಡಿ... Next