Previous ಶರಣರ ಸ್ವರ ವಚನಗಳು ಗುರುಲಿಂಗದೊಳಗಣ ಶಿವಲಿಂಗ Next

ಬೀಜ ಮಂತ್ರ

*

ಓಂ ನಮ: ಶಿವಾ ಎಂಬ ನಾಮದ ಬೀಜವ ರಚನೆ: ಧರ್ಮಗುರು ಬಸವೇಶ್ವರ



ಓಂ ನಮ: ಶಿವಾ ಎಂಬ
ನಾಮದ ಬೀಜವ ನಾಲಿಗೆ ತುದಿಯಲ್ಲಿ ಬಿತ್ತಿರಯ್ಯಾ |ಪ|

ಹೃದಯ ಹೊಲವ ಮಾಡಿ
ಮನದ ನೇಗಿಲ ಹೂಡಿ
ಶ್ವಾಸಕೋಶವೆಂಬ ಎರಡೆತ್ತುಗಳ ಹೂಡಿ
ಜ್ಞಾನೋದಯವೆಂಬ ಹಗ್ಗ ಕಣ್ಣಿಯ ಮಾಡಿ
ನಿರ್ಮಲವೆಂಬ ಕುಂಟೆ ಹೊಡೆಯಿರಯ್ಯಾ |1|

ಮದ ಮತ್ಸರವೆಂಬ ಮರಗಳ ಕಡಿಯುತ
ಕಾಮಕ್ರೋಧವೆಂಬ ಕಳೆಯನೆ ಕಿತ್ತು
ಪಂಚೇಂದ್ರಿಯಗಳ ಮಂಚಿಗೆಯನೆ ಹೂಡಿ
ಚಂಚಲವೆಮಬ ಪಕ್ಷಿ ಹೊಡೆಯಿರಯ್ಯಾ |2|

ಉದಯಾಸ್ತಮಾನವೆಂಬ
ಎರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿ ಅಳೆಯುತ್ತಿದೆ
ಸ್ವಾಮಿ ಶ್ರೀ ಕೂಡಲಸಂಗನ ನೆನೆದರೆ
ಹುಟ್ಟು ಸಾವು ಎಂಬುದಿಲ್ಲವಯ್ಯಾ |3|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಶರಣರ ಸ್ವರ ವಚನಗಳು ಗುರುಲಿಂಗದೊಳಗಣ ಶಿವಲಿಂಗ Next