Previous ಮೂಗುತಿ ಹೋಯಿತು ಎಂಜಲೆಂಜಲೆನ್ನದೆ ನೀನು... Next

ಹೋದೆನೂರಿಗೆ ಇದ್ದೆ ನಾನಲ್ಲಿ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಹೋದೆನೂರಿಗೆ ಇದ್ದೆ ನಾನಲ್ಲಿ
ಹೋದಡೆ ಮರಳಿ ಬಾರೆನವ್ವ ತಾಯಿ || ಪ ||

ಅತ್ತೆ ಮಾವನು ಭಾವ ಮೈದುನ ಮಲಮಗ
ಚಿತ್ತವನೊರೆದು ನೋಡುವ ಗಂಡನು
ಕತ್ತಲೆಮನೆಯಲ್ಲಿ ಕರೆದು ಅನ್ನವನಿಕ್ಕಿ
ಅತ್ತಿಗೆ ಹತ್ತೆಂಟ ಬಯ್ವಳವ್ವ ತಾಯಿ || ೧ ||

ಐವರು ಭಾವಂದಿರಯ್ವರು ನಗೆವೆಣ್ಣು
ಐವರು ಕೂಡಿ ಕಾಡುವರು
ಗೊಯ್ವರು ಬಯ್ವರು ಮಿಗೆ ನೋಯ ನುಡಿವರೀ
ರಯ್ವರ ಕಾಟ ನಾ ತಾಳೆನವ್ವ ತಾಯಿ || ೨ ||

ಎನ್ನ ಮಾತಾಪಿತರಮರಗಣಂಗಳು
ಎನ್ನ ತವರುಮನೆ ಕಲ್ಯಾಣವು
ಕರುಣಿ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಬಳಿಗೆ
ಹೋದಡೆ ಮರಳಿ ಬಾರೆನಮ್ಮ ತಾಯಿ ! || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಮೂಗುತಿ ಹೋಯಿತು ಎಂಜಲೆಂಜಲೆನ್ನದೆ ನೀನು... Next