| ಆರು ಕಾಣರು ಪುಣ್ಯಕ್ಷೇತ್ರವನು | ನಮ್ಮ ದೇಶಕ್ಕೆ ಹೋಹ ದಿನ ಬಂತು | |
ಕಾಯೈ ಕಾಯೈ |
ಕಾಯೈ ಕಾಯೈ ಕರುಣದಿ ನಾನು
ಸಾಯಲಾರೆನು ಮಾಯೆ ಕೈಯಲ್ಲಿ || ಪ ||
ಹರಿಯಜ ಸುರ ಮನು ಮುನಿಗಳ - ಮಾಯೆ
ಗಿರಿಯ ಮರೆಯೊಳಿಕ್ಕಿ ಕೊಲ್ಲುತಿದೆ
ಗಿರಿಯ ಮರೆಯೊಳಿರಲಾರದೆ ನಿಮ್ಮ
ಚರಣರಕ್ಷೆಯ ಮರೆಯನ್ನು ಹೊಕ್ಕೆ || ೧ |
ಆಶೆಯ ಪಾಶದಿಂದಲಿ ಕಟ್ಟಿ – ಮಾಯೆ
ವಾಸವಾದಿಗಳನು ಕೊಲುತಲಿದೆ
ಆಶಾಪಾಶದೊಳಿರಲಂಜಿ ಜಗ
ದೀಶ ನಿಮ್ಮಯ ಮರೆಯನು ಹೊಕ್ಕೆ || ೨ ||
ಬಲು ಹಿರಿಯರನ್ನು ಕೊಲುತಿದೆ - ಮಾಯೆ
ಗೆಲುವವರಿಲ್ಲ ತ್ರಿಜಗದೊಳು
ಅಲಸಿ ನಿಮ್ಮನು ಮರೆಯ ಹೊಕ್ಕೆ
ಎನ್ನ ಸಲಹು ಷಡಕ್ಷರಿಯ ಲಿಂಗವೆ || ೩ ||
| ಆರು ಕಾಣರು ಪುಣ್ಯಕ್ಷೇತ್ರವನು | ನಮ್ಮ ದೇಶಕ್ಕೆ ಹೋಹ ದಿನ ಬಂತು | |