Previous ಬಸವ ಸಾವುತಿದೆ... ಬಸವಾದಿ ಪ್ರಮಥರ ನೆನವ... Next

ಏತಕನುದಿನ ಕಾಡಿ...

ರಚನೆ: ಶ್ರೀಗುರು ಬಸವಾರ್ಯರು


ಏತಕನುದಿನ ಕಾಡಿ ನೋಡುವೆಯೆನ್ನ
ಪಾತಕವ ಬಿಡಿಸಿ ನೋಡಯ್ಯ ಗುರುಬಸವ || ಪ ||

ಬರಿಯ ವಾಗ್‌ಭ್ರಮೆಯನು ಬಿಡಿಸು ಶರೀರವನು
ಸ್ಥಿರವೆಂದು ಕೂಗುತಿಹ ಕುರಿತನವ ಬಿಡಿಸು
ಮರೆದು ಪರಸತಿಯರೊಡನಾದಂತಿರಿಸು
ಅರಿದರಿದು ಮಾಯಾ ಪ್ರಪಂಚವನು ಬಿಡಿಸಿ ನೀನಿರಿಸು || ೧ ||

ಲಿಂಗ ಜಂಗಮವನೊಂದೆನಿಸು ಎನ್ನ
ಸಂಗಸುಖ ಸವಿಯೊಳಗೆ ಬಂದು ನೀ ನೆಲಸು
ಲಿಂಗವಾರರ ಭೇದವರಿಸು ಎ
ನ್ನಂಗ ಭೋಗವ ಬಿಡಿಸಿ ಸಲಹು ಗುರುಬಸವಾ || ೨ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಬಸವ ಸಾವುತಿದೆ... ಬಸವಾದಿ ಪ್ರಮಥರ ನೆನವ... Next