Previous ಮನಭಾವ ಕರಣದೊಳ.... ನಿಮ್ಮ ಶರಣರ ಒಕ್ಕುದ Next

ನಿಮ್ಮ ಕಾರುಣ್ಯವನ್ನ...

*

ರಚನೆ: ಧರ್ಮಗುರು ಬಸವೇಶ್ವರ


ನಿಮ್ಮ ಕಾರುಣ್ಯವೆನ್ನ
ಮನದೊಳಗೆ ಸಂಬಂಧಿಸಿ
ಭಿನ್ನ ಭಾವವನರಿಯದೆ ನಿಮ್ಮೊಳಡಗಿ
ಆನೇನೆಂದರಿಯನಯ್ಯಾ || ಪ ||

ದಶವಾಯುಗಳ ಸಂಚವಳಿದು
ದಶನಾಳಂಗಳ ಪಥವಡಗಿ
ದಶೇಂದ್ರಿಯಂಗಳ ಸ೦ಚಲವಳಿದು
ಪ್ರಾಣರತಿಯೊಳು ನಿಮ್ಮ ಸಂಗವ ಕಂಡೆನಯ್ಯಾ || ೧ ||

ಚಿತ್ತದ ಕಳೆ ಬುದ್ಧಿಯೊಳಡಗಿ
ಬುದ್ಧಿಯಔಂಕಾರದೊಳಳಿದು
ಅಹಂಕಾರ ಮನದೊಳು ಮನ ನಿಮ್ಮ ಕರುಣದ
ಸಂಗವಾ ಕಣ್ಣೆರೆದೆನಯ್ಯಾ || ೨ ||

ಷಡುಚಕ್ರ ಕಮಲದಲ್ಲಿ ಸುಳಿದಾಡುವ
ಪ್ರಾಣ ಹಂಸನ ತಿಳುಹಿ
ಮಹಾನುಭಾವದೊಳಗೆ ನಿಲಿಸಿ
ನಿರ್ಮಳ ಲಿಂಗ ಪ್ರಾಣಿಯಾದೆನಯ್ಯಾ || ೩ ||

ಚೈತನ್ಯವೆ ನೀನೆಂದರಿದು
ಸಾತ್ವಿಕ ಭಾವವೆಂದರಿಯದೆ
ಸೂಕ್ಷ್ಮ ತನುವಿನೊಳಗೆ ನಿಮ್ಮ
ಜ್ಞಾನ ಜ್ಯೋತಿಯ ಬೆಳಗನು ಕಂಡೆನಯ್ಯಾ || ೪ ||

ನಿನ್ನ ಪ್ರಾಣದೊಳಗೆ ಪ್ರಾಣವಾಗಿ
ನಾನಿನ್ನ ಪ್ರಾಣದೊಳಗೆ ಪ್ರಾಣವಾಗಿ
ನಾ ನೀನೆಂಬುಭಯವನರಿಯದೆ ನಿಮ್ಮ ಕೃ
ಪಾನಂದದೊಳಗಿರ್ದೆನು ಕೂಡಲಸಂಗಯ್ಯಾ || ೫ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಮನಭಾವ ಕರಣದೊಳ.... ನಿಮ್ಮ ಶರಣರ ಒಕ್ಕುದ Next