| ಮೋಹವಿಲ್ಲದ ಪೂಜೆ | ಆರು ಕಾಣರು ಪುಣ್ಯಕ್ಷೇತ್ರವನು | |
ಬಂದನು ಮರ್ತ್ಯಕೆ |
ಬಂದನು ಮರ್ತ್ಯಕಿನ್ನುದ್ಧಾರವನು ಮಾಳ್ಪ
ಇಂದುಧರ ಓಂ ನಮಃ ಶಿವಾಯನೆಂಬ ನಾಮದಲಿ || ಪ ||
ಮುಖವೈದನೆ ಏಕಮುಖವನೆ ಮಾಡುತಲಿ
ಶಿಖಿನೇತ್ರ ಗುಪ್ತತರವಾಗಿ ರಂಜಿಸಲು
ಅಕಳಂಕ ದಶಭುಜ ದ್ವಯಭುಜದೊಳುಂ ಮರೆಸಿ
ಮಕರಧ್ವಜನ ಸುಟ್ಟು ಭಸಿತವನೆ ಧರಿಸಿ || ೧ |
ರುಂಡಮಾಲೆಯ ಬಿಟ್ಟು ರುದ್ರಾಕ್ಷಿಗಳ ಧರಿಸಿ
ಚಂಡಶೂಲವನುಳಿದು ಸುಜ್ಞಾನವಿಡಿದು
ಮಂಡೆಯೊಳು ಪೊತ್ತ ಚಂದ್ರಮನ ಶಾಂತಿಯೊಳಿಟ್ಟು
ಕುಂಡಲದ ಫಣಿಯ ಧರೆಗಿಳುಹಿಯಳವಟ್ಟು || ೨ ||
ಹರಿಗೆ ಹೇಳದೆ ಸರಸಿಜೋದ್ಭವಗೆ ಸೂಚಿಸದೆ
ವರವೀರಪ್ರಮಥರಿಗೆ ಸನ್ನೆ ಮಾಡಿ
ನರಲೋಕನಾಟಕವ ನೋಡಬೇಕೆಂದೆನುತ
ಸರಸದಿಂ ಬಂದಂ ಷಡಕ್ಷರಿಯ ದೇವ || ೩ ||
| ಮೋಹವಿಲ್ಲದ ಪೂಜೆ | ಆರು ಕಾಣರು ಪುಣ್ಯಕ್ಷೇತ್ರವನು | |