ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ? | ಅಂತ್ಯ ಪ್ರಸಾದಿ |
ಯತೋ ವಾಚೋ ನಿವರ್ತಂತೇ ಶ್ರುತಿ ಬಸವ |
ಯತೋ ವಾಚೋ ನಿವರ್ತಂತೇ ಶ್ರುತಿ ಬಸವ
ಏಕೋ ಗುರುಬಸವ ನಾದ್ವಿತೀಯ |ಪ|
'ಬ'ಕಾರ ಭವವಿನಾಶ ನೀ ಬಸವ
'ಸ'ಕಾರ ಚೈತನ್ಯ ಆತ್ಮ ನೀ ಬಸವ
'ವ'ಕಾರ ಚರಜಂಗಮ ನೀ ಬಸವ
ಏಕೋಗುರು ತ್ರಿವಿಧರೂಪ ನೀನೆ ಬಸವ |1|
ಅಕಾರನಾದ ಉಕಾರ ಬಿಂದು ಬಸವ
ಮಕಾರ ಕಳೆ ತ್ರಿವಿಧರೂಪ ನೀ ಬಸವ
ಓಂಕಾರ ಪ್ರಣವರೂಪ ನೀ ಬಸವ
ನಾಗೇಶನಮಿತ ಚರಣ ನೀ ಬಸವ |2|
ವಿಶ್ವನಾಮ ಆಘವಿದೂರ ನೀ ಬಸವ
ವಿಶ್ವತೋಮುಖ ಅನಾದಿ ರೂಪ ನೀ ಬಸವ
ಸತ್ಯಜ್ಞಾನಿ ವಿಶ್ವರೂಪ ನೀ ಬಸವ
ವಿಶ್ವವಿಭೂತಿ ಸುಜ್ಞಾನಿಯೇ ಬಸವ |3|
ಭಕ್ತಿ ಯುಕ್ತಿ ಮುಕ್ತಿ ಶಕ್ತಿ ನೀ ಬಸವ
ಸತ್ಯ ನಿತ್ಯ ಕರ್ತೃ ನೀನೆ ಗುರುಬಸವ
ಅತ್ಯಧಿಕ ಮೃತ್ಯು ದೂರ ನೀ ಬಸವ
ಅತ್ಯತಿಷ್ಠದ್ದಂಶಾಂಗುಲ ನೀ ಬಸವ |4|
ಶರಣ ಜನರ ಕಾಮಧೇನುವೆ ನೀ ಬಸವ
ಶರಣ ಜನರ ಕಲ್ಪತರುವೆ ಗುರುಬಸವ
ಶರಣ ಜನರ ಭಕ್ತಿನಿಧಿಯೆ ಶ್ರೀ ಬಸವ
ಶರಣು ಕೂಡಲಚನ್ನಸಂಗನ ಬಸವ |5|
- ಶ್ರೀ ಗುರು ಚೆನ್ನಬಸವಣ್ಣನವರು.
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಜಾತಿವಿಡಿದು ನೆನೆವರೆ ನಮ್ಮ ನೀತಿಯುಳ್ಳ ಶರಣರ? | ಅಂತ್ಯ ಪ್ರಸಾದಿ |