Previous ಬಸವಾದಿ ಪ್ರಮಥರ ನೆನವ... ನೀನೆ ಅಕಳಂಕಗುರು Next

ಎಲ್ಲ ಹೇಳಲಿಬಹುದು ಎಲ್ಲ...

ರಚನೆ: ಶ್ರೀಗುರು ಬಸವಾರ್ಯರು


ಎಲ್ಲ ಹೇಳಲಿಬಹುದು ಎಲ್ಲ ಕೇಳಲಿಬಹುದು
ನಿಲ್ಲಿಸಲಾಗದು ಗುರುಬಸವನೊಳು ಮನವ || ಪ ||

ಶಾಸ್ತ್ರವೋದಲಿಬಹುದು ಸೂತ್ರ ತಿಳಿಯಲಿಬಹುದು
ಚಿತ್ರ ವಿಚಿತ್ರದಲ್ಲಿ ಹೇಳಬಹುದು
ಗಾತ್ರ ದಂಡಿಸಬಹುದು ಪಾತ್ರವರಿಯಲಿಬಹುದು
ನೇತ್ರವನು ಕಟ್ಟಿ ನಿಲ್ಲಿಸಲಾಗದಯ್ಯ || ೧ ||

ಅರ್ಥ ಹೇಳಲಿಬಹುದು ಮರ್ತ್ಯವನ್ನು ಬಿಡಬಹುದು
ಭಾರತ ಭಾಗವತ ಓದಬಹುದು
ನಿತ್ಯದಲಿ ಇಹಬಹುದು ತೀರ್ಥವೆಂದೆನಬಹುದು
ಕರ್ತು ಗುರುಬಸವನೊಳ್ ಮನವ ನಿಲ್ಲಿಸಲಾಗದಯ್ಯ || ೨ ||

ಸತ್ಯ ನುಡಿಯಲಿಬಹುದು ನಿತ್ಯ ಪೂಜಿಸಬಹುದು
ಅತ್ಯಂತ ಸತಿಸುತರ ಬಿಡಲುಬಹುದು
ಕರ್ತವ್ಯಯಿರಬಹುದು ಕರ್ತುವೆಂದೆನಬಹುದು
ಪ್ರತ್ಯಗಾತ್ಮ ಶ್ರೀಗುರು ಬಸವನೊಳು ಮನವ ನಿಲ್ಲಿಸಲಾಗದಯ್ಯ

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಬಸವಾದಿ ಪ್ರಮಥರ ನೆನವ... ನೀನೆ ಅಕಳಂಕಗುರು Next