ಬಸವಾಕ್ಷರವನೆಲ್ಲ ವಶನಾಗಿ | ಬಸವ ಸಾವುತಿದೆ... |
ಬಸವ ಬಸವಯೆಂದು.. |
ಬಸವ ಬಸವಯೆಂದು ಎಲೆಯೋಗಿ ನಿ
ನ್ನಸುವೆಲ್ಲ ಬಸವನಂತಾಗುವುದು || ಪ ||
ಬಸವ ಬಸವಯೆಂದು ಪ್ರಭುರಾಯ ತಾ
ನೆಸೆವ ಬಸವಾದನೆಲೆ ನೀಲಮ್ಮ ತನ್ನ
ವಸದಿಷ್ಟಲಿಂಗದಿ ಬೆರದಾಳು
ಬಸವ ಬಸವಯೆಂದು || ೧ ||
ಬಸವಯೆಂದು ಮಾಚಯ್ಯ ತಾ ನೋಡನೋಡಲು
ಬಸವೇಶನಂತಾದ ನೋಡಿ
ಬಸವಯೆಂದು ಅಪ್ಪಣ್ಣನು ತಾ ಹಾಡಿ ಹರಸಿ
ಬಸವನೊಳಾದ ಯೋಗಿ || ೨ ||
ಬಸವಯೆಂದಜಗಣ್ಣ ಅನುಮಿಷ ತಾವು
ಸಸಿನೆಯಿಂ ಬಸವಣ್ಣನಂತಿಹರು
ಬಸವ ಬಸವಯೆಂದು ಪ್ರಮಥರೆಲ್ಲ
ಅಸಮಾಕ್ಷ ಗುರುಬಸವೇಶನಲ್ಲಿಹರು || ೩ ||
ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”
ಬಸವಾಕ್ಷರವನೆಲ್ಲ ವಶನಾಗಿ | ಬಸವ ಸಾವುತಿದೆ... |