Previous ನಿಬ್ಬಣಕ್ಕೆ ಹೋಗುತೈದೇನೆ ಕಣ್ಣಾರೆ ನಾ ಕಂಡೆ ಕನಸಿನ ಸುಖವ Next

ಮುಕುತಿ ಹೋಯಿತು

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ


ಮುಕುತಿ ಹೋಯಿತು ಮುರುಕಿಸುವನಕ
ಮೂಕುತಿ ಹೋಯಿತು |ಪಲ್ಲವಿ|

ಅಣಕವನಾಡುತ್ತ ಐವರ ಕೂಡೆ
ಸೆಣಸುತ ನಾಲ್ವರ ಕೈವಿಡಿದು,
ಮಣಕದಿಂದಲಿ ಆರು ಮಂದಿಯ ಕೂಡೆ,
ಉಣ ಕುಳಿತಲ್ಲಿ ಮೈಮರೆದೆನಕ್ಕ |೧|

ಅಕ್ಕರಿಂದಲಿ ಹತ್ತು ಮಂದಿಯ ಕೂಡಿ
ನಕ್ಕರು, ಕೆಲೆದರು ತಮತಮಗೆ
ಮಕ್ಕಳಾಟಿಕೆಯ ನಾನಾಡುವ ಹೊತ್ತಿಗೆ
ಇಕ್ಕುತಲಿ ಮೈಮರೆದೆನಕ್ಕ |೨|

ಅತ್ತ ಮಾರುದ್ದರುವೆಯ ಕೂಡಲಾಗಿ
ಸುತ್ತೇಳು ಕೇರಿಯರು ಸೆಣಸುವರು
ಚಿತ್ತವಲ್ಲಭ ಚೆನ್ನಮಲ್ಲೇಶ ಕೂಡಿ
ಮುತ್ತೈದೆಯಾಗೆನ್ನನಿರಗೊಡಕ್ಕ |೩|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ನಿಬ್ಬಣಕ್ಕೆ ಹೋಗುತೈದೇನೆ ಕಣ್ಣಾರೆ ನಾ ಕಂಡೆ ಕನಸಿನ ಸುಖವ Next