Previous ಎಲ್ಲ ಹೇಳಲಿಬಹುದು ಎಲ್ಲ... ವರವ ಬೇಡುವೆನೊಂದು Next

ನೀನೆ ಅಕಳಂಕಗುರು

ರಚನೆ: ಶ್ರೀ ಮುಪ್ಪಿನ ಷಡಕ್ಷರಿ


ಸಕಲಕೆಲ್ಲಕೆ ನೀನೆ
ಅಕಳಂಕ ಗುರುವೆಂದು
ನಿಖಿಳಶಾಸ್ತ್ರವು ಪೇಳುತಿರಲರಿದೆನು || ಪ ||

ಎರಗಂಬಳಿಯ ಸಿದ್ದ
ವರಲಿಂಗ ನಾಮದಿಂ
ಹರನೆ | ನೀನೆನಗೆ ದೀಕ್ಷೆಯ ಮಾಡಿದೆ
ವರಷಡಕ್ಷರಿಯ ದೇ
ವರ ನಾಮದಿಂದೆನಗೆ
ಅರುಹಿದಿರಿ ಶಿವಶಾಸ್ತ್ರದನುಭವವನು || ೧ ||

ಅವರವರ ದರುಶನಕೆ
ಅವರವರ ವೇಷದಲಿ
ಅವರವರಿಗೆಲ್ಲ ಗುರು ನೀನೊಬ್ಬನೆ
ಅವರವರ ಭಾವಕ್ಕೆ
ಅವರವರ ಪೂಜೆಗಂ
ಅವರವರಿಗೆಲ್ಲ ಶಿವ ನೀನೊಬ್ಬನೆ || ೨ ||

ಹೋರಾಟವಿಕ್ಕಿಸಲು
ಬೇಕಾದೆಯಲ್ಲದೆ
ಬೇರುಂಟೆ ಜಗದೊಳಗೆ ನೀನಲ್ಲದೆ
ಆರು ಅರಿಯರು ನೀನು
ಬೇರಾದ ಪರಿಗಳನು
ಮಾರಾರಿ ಶಿವಷಡಕ್ಷರಿಲಿಂಗವೆ || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಎಲ್ಲ ಹೇಳಲಿಬಹುದು ಎಲ್ಲ... ವರವ ಬೇಡುವೆನೊಂದು Next