Previous ಓರಂತೆ ಮನಸೋತೆ ನಂಬಿದೆ ಗುರುವೆ ನಂಬಿದೆ ಸ್ವಾಮಿ Next

ಏನೋ ನನ್ನ ನಲ್ಲ

ರಚನೆ: ವೀರ ವೀರಾಗಿಣಿ ಅಕ್ಕಮಹಾದೇವಿ

ರಾಗ: ಮಧುಮಾಧವಿ


ಏನೋ ನಮ್ಮ ನಲ್ಲ ನೀ ಮನೆಗೇಕೆ ಬಾರೆ
ನಾನೇನು ತಪ್ಪನು ಮಾಡಿದುದಿಲ್ಲ |ಪ|

ಕೂಸಿನ ತಾಯಿಗೆ ಹೇಸದೊತ್ತೆಯ ಕೊಟ್ಟು
ಕೂಸತ್ತೆನ್ನಯ ನಲ್ಲ ಬೇಸತ್ತು ಹೋದೆ |ಅನುಪಲ್ಲವಿ|

ಮನವುಳ್ಳ ಭಾವಕಿಗನುವಾಗಿ ನಮ್ಮ ನಲ್ಲ
ಮನ ಸಂಚಲವಾಗಲನುವಾದುದಿಲ್ಲ |೧|

ಒತ್ತೆಯ ನಲ್ಲನ[ಳ] ತೋಳ ಮೇಲೊರಗಿದೆ
ಚಿತ್ತದ ನಾಳ ಕನಸಿಲಿ ಕಂಡೆ |೨|

ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನೀನು ಮಾತನಾಡಿದುದುಂಟು ಕೂಡಿದುದಿಲ್ಲ |೩|

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಓರಂತೆ ಮನಸೋತೆ ನಂಬಿದೆ ಗುರುವೆ ನಂಬಿದೆ ಸ್ವಾಮಿ Next