Previous ಕೆಟ್ಟ ಮನಸೀಗೆಷ್ಟು ಹೇಳಲು ಹೂವಿಲ್ಲದ ಕಂಪು Next

ತಾನೇ ಶಿವನು


ಶಿವನಧ್ಯಾನ ಮಾಡು
ಮನಕೆ ಶಾಂತಿ ನೀಡು
ಶಿವನನ್ನು ನಿನ್ನಲ್ಲೇ ನೀನು ನೋಡು || ಪ ||

ನಿಶ್ಚಲವೆಂಬ ಕೊಳದಿ ಮಿಂದು
ನಿರ್ಮಲವೆಂಬ ಮಡಿಯನುಟ್ಟು
ನಿರಾಕಾರ ಶಿವನ ಓಂಕಾರ ಮಧ್ಯದ ನೋಡು
ಚಿತ್ಕಲೆ ಎಂಬ ಹೊಂಬೆಳಕಲ್ಲಿ
ಚಿದಾನಂದನೊಡಗೂಡು ತನ್ಮಯದಿ ಓಲಾಡು || ೧ ||

ಭೂತಂಗಳೈದನು ಕಟ್ಟಿ
ಇಂದ್ರಿಯಗಳೈದನು ಮೆಟ್ಟಿ
ಗುರುಮಂತ್ರವನ್ನು ಪಠಿಸಿ ಗಮ್ಯಸ್ಥಾನಕ್ಕೆ ಏರಿ
ಪರಮ ಪಾವನ ಸುಂದರ ಸ್ಪರ್ಶ
ದರ್ಶನ ಭವಹರಣ || ೨ ||

ದೃಷ್ಟಿಯಿಟ್ಟು ಮನದಿ ನೋಡು
ಗುರುಕೊಟ್ಟ ಘನಲಿಂಗದಿ ನೋಡು
ಲಿಂಗಾಂಗ ಸಮರಸವಾಗಿ ಅಂಗಾಂಗ ಲಿಂಗವು ನೋಡು
ಭಕ್ತ ಮಹೇಶ ಪ್ರಸಾದಿ ಪ್ರಾಣ
ಲಿಂಗಿ ಶರಣ ಐಕ್ಯನು ನೀನು || ೩ ||

ಗ್ರಂಥ ಋಣ:
1. ಡಾ. ಎಲ್. ಬಸವರಾಜು ಸಂಪಾದಿತ “ಶಿವದಾಸ ಗೀತಾಂಜಲಿ”
2. ಕೆ. ರವೀಂದ್ರನಾಥ ಸಂಪಾದಿತ “ಬಸವಯುಗದ ವಚನೇತರ ಸಾಹಿತ್ಯ”

ಪರಿವಿಡಿ (index)
Previous ಕೆಟ್ಟ ಮನಸೀಗೆಷ್ಟು ಹೇಳಲು ಹೂವಿಲ್ಲದ ಕಂಪು Next