*
೮೬೬೬೬೬ ಸಂಖ್ಯೆಯ ವಿವರ
866666 ಈ ಸಂಖ್ಯೆಯಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ಸೂತ್ರಿಕರಿಸಲಾಗಿದೆ. ಇದರ ವಿವರಗಳು ಈ ಕೆಳಗಿನಂತೆ ಇವೆ.
8-ಅಷ್ಟಾವರಣ, 6-ಷಡಾಚಾರ, 6-ಷಟ್‍ಸ್ಥಲ, 6-ಷಟ್‍ಸೂತ್ರ, 6-ಷಟ್‍ಶೀಲ, 6-ಷಟ್‍ಕ್ರಿಯೆ
ಅಷ್ಟಾವರಣಗಳು - 8 :
1) ಗುರು 2) ಲಿಂಗ 3) ಜಂಗಮ 4) ವಿಭೂತಿ 5) ರುದ್ರಾಕ್ಷಿ 6) ಮಂತ್ರ 7) ಕರುಣೋದಕ 8)ಕರುಣ ಪ್ರಸಾದ
ಷಡಾಚಾರಗಳು - 6 :
1) ಬಸವಾಚಾರ 2) ಲಿಂಗಾಚಾರ 3) ಸದಾಚಾರ 4) ಶಿವಾಚಾರ 5) ಗಣಾಚಾರ 6) ಭೃತ್ಯಾಚಾರ
ಷಟ್‍ಸ್ಥಲಗಳು - 6:
1) ಭಕ್ತ 2) ಮಹೇಶ 3) ಪ್ರಸಾದಿ 4) ಪ್ರಾಣಲಿಂಗಿ 5) ಶರಣ 6) ಐಕ್ಯ
ಷಟ್‍ಸೂತ್ರಗಳು - 6:
1) ಧರ್ಮಗುರು:ಬಸವಣ್ಣ
2) ಧರ್ಮ ಸಂಹಿತೆ:ವಚನಸಾಹಿತ್ಯ
3) ಧರ್ಮ ಲಾಂಛನ:ವಿಶ್ವಾತ್ಮನ ಕುರುಹಾದ ಇಷ್ಟಲಿಂಗ
4) ಧರ್ಮ ಕ್ಷೇತ್ರ: ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮ, ಶರಣ ಭೂಮಿ ಬಸವ ಕಲ್ಯಾಣ
5) ಧರ್ಮ ಧ್ವಜ:ಷಟ್ಕೋನ ಇಷ್ಟಲಿಂಗ ಸಹಿತ ಬಸವ ಧ್ವಜ
6) ಧರ್ಮದ ಧ್ಯೇಯ:ಜಾತಿ ವರ್ಣ ವರ್ಗರಹಿತ ಧರ್ಮಸಹಿತ ಶರಣ ಸಮಾಜ ನಿರ್ಮಾಣ (ಕಲ್ಯಾಣ ರಾಜ್ಯ ನಿರ್ಮಾಣ)
ಷಟ್‍ಶೀಲಗಳು - 6:
1) ಲಿಂಗದೇವ ನಿಷ್ಠೆ 2) ಧರ್ಮ ಗುರು ನಿಷ್ಠೆ 3) ಧರ್ಮಶಾಸ್ತ್ರ ನಿಷ್ಠೆ 4) ಗಣಮೇಳ ನಿಷ್ಠೆ 5) ಕಾಯಕ-ದಾಸೋಹ ನಿಷ್ಠೆ 6) ಶರಣ ಮೇಳ ನಿಷ್ಠೆ
ಷಟ್‍ಕ್ರಿಯೆಗಳು - 6:
1) ಆಚಾರ 2) ಅರಿವು 3) ಲಿಂಗ 4) ಜಂಗಮ 5) ಪ್ರಸಾದ 6) ದಾಸೋಹ
*